ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಜೀವ್ ಗಾಂಧಿ ಸತ್ತಾಗ ದಿನಗಟ್ಟಲೆ ಕಣ್ಣೀರಾಕಿದ್ದೆ' ನಳಿನಿ ಶ್ರೀಹರನ್

|
Google Oneindia Kannada News

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರು ಮಾಜಿ ಪ್ರಧಾನಿ ಹತ್ಯೆಯಾದಾಗ ದಿನಗಟ್ಟಲೆ ಅಳುತ್ತಿದ್ದೆ ಎಂದು ಹೇಳಿದ್ದಾರೆ. ನಳಿನಿ ಹೇಳಿಕೆ ಉಲ್ಲೇಖಿಸಿ ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.

ನಳಿನಿ ಅವರು ತಾವು "ಕಾಂಗ್ರೆಸ್ ಕುಟುಂಬ"ದವರು ಎಂದು ಹೇಳಿಕೊಂಡಿದ್ದಾರೆ. ಆದರೆ ರಾಜೀವ್ ಗಾಂಧಿಯನ್ನು ಕೊಂದ ಆರೋಪವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಆರೋಪಿಗಳಾಗಿ ನೋಡಿ, ಕೊಲೆಗಾರರಾಗಿ ಅಲ್ಲ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಆರೋಪಿಗಳಾಗಿ ನೋಡಿ, ಕೊಲೆಗಾರರಾಗಿ ಅಲ್ಲ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ

''ನಾನು ಕಾಂಗ್ರೆಸ್ ಕುಟುಂಬದಿಂದ ಬಂದವಳು. ಇಂದಿರಾಗಾಂಧಿ ನಿಧನರಾದಾಗ ನಾವು ಇಡೀ ದಿನ ಊಟ ಮಾಡಿರಲಿಲ್ಲ. ನಾಲ್ಕು ದಿನ ಅಳುತ್ತಿದ್ದೆವು. ರಾಜೀವ್ ಗಾಂಧಿ ಸತ್ತಾಗಲೂ ಮೂರು ದಿನ ಕಣ್ಣೀರು ಹಾಕಿದ್ದೇವೆ. ಆದರೆ ನಾನು ಅವರನ್ನು ಕೊಂದ ಆರೋಪವನ್ನು ಹೊತ್ತಿದ್ದೇನೆ. ಆ ಆರೋಪವನ್ನು ತೆರವುಗೊಳಿಸಿದರೆ ಮಾತ್ರ ನಾನು ವಿಶ್ರಾಂತಿ ಪಡೆಯಲು ಸಾಧ್ಯ'' ಎಂದು ನಳಿನಿ ಶ್ರೀಹರನ್ ಹೇಳಿದ್ದಾರೆ.

I cried for days when Rajiv Gandhi died: Nalini Sriharan

ನಳಿನಿ ಅವರು ನಿರಪರಾಧಿ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಮಾಜಿ ಪ್ರಧಾನಿ ಹತ್ಯೆಯ ಹಿಂದೆ ಯಾರಿದ್ದಾರೆಂದು ತಿಳಿದಿದ್ದರೆ ಉತ್ತರಿಸಲು ನಿರಾಕರಿಸಿದ್ದಾರೆ. "ನಾನು ಅಂಥ ಯಾರನ್ನೂ ಸೂಚಿಸಲು ಸಾಧ್ಯವಿಲ್ಲ. ನನಗೆ ಆರೋಪಿಸುವ ಅಭ್ಯಾಸವಿಲ್ಲ. ಹಾಗೆ ಮಾಡಿದ್ದರೆ 32 ವರ್ಷ ಜೈಲಿನಲ್ಲಿ ಇರುತ್ತಿರಲಿಲ್ಲ. ನನಗೆ ಅವರು ಯಾರು ಎಂದು ಗೊತ್ತಿಲ್ಲ" ಎಂದು ಅವರು ಹೇಳಿದ್ದಾರೆ.

ನಳಿನಿಯ ಹೇಳಿಕೆ ನಿವೃತ್ತ ಪೊಲೀಸ್ ಅಧಿಕಾರಿ ಅನುಸೂಯಾ ಅರ್ನೆಸ್ಟ್ ಡೈಸಿರನ್ನು ಕೆರಳಿಸಿದೆ. ''ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ನಳಿನಿ ಮಾತನಾಡುತ್ತಿದ್ದಾರೆ. ತಾನು ನಿರಪರಾಧಿ ಆರೋಪಿ ಅಲ್ಲ ಎಂದು ಆಕೆ ಹೇಳಿದರೆ ನ್ಯಾಯಾಲಯದ ಆದೇಶವನ್ನು ಮರುಪರಿಶೀಲಿಸಿ ನಿಜವಾದ ಅಪರಾಧಿಗಳನ್ನು ಕಂಡುಹಿಡಿಯಲು ಮತ್ತೊಂದು ತನಿಖೆಯನ್ನು ಪ್ರಾರಂಭಿಸಬೇಕು'' ಎಂದು ಅನುಸೂಯಾ ಹೇಳಿದರು. ಹತ್ಯೆ ಸಂದರ್ಭದಲ್ಲಿದ್ದ ಘಟನಾ ಸ್ಥಳದಲ್ಲಿದ್ದ ಅರ್ನೆಸ್ಟ್ ಅವರು ಬಾಂಬ್ ಸ್ಫೋಟದ ಪರಿಣಾಮ ಮೂರು ಬೆರಳುಗಳನ್ನು ಕಳೆದುಕೊಂಡಿದ್ದಾರೆ.

I cried for days when Rajiv Gandhi died: Nalini Sriharan

ನಮ್ಮ ಮಗಳು ವಾಸಿಸುವ ಸ್ಥಳಕ್ಕೆ ಮುರುಗನ್‌ನನ್ನು ಕಳುಹಿಸಿ: ನಳಿನಿ

ಸೋಮವಾರ ನಳಿನಿ ಶ್ರೀಹರನ್ ಅವರು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ನಾಲ್ವರು ಅಪರಾಧಿಗಳು ಇರುವ ತಿರುಚ್ಚಿ ವಿಶೇಷ ಶಿಬಿರಕ್ಕೆ ಭೇಟಿ ನೀಡಿದರು. ಈ ವಿಶೇಷ ಶಿಬಿರದಲ್ಲಿ ಮುರುಗನ್, ಸಂತನ್, ರಾಬರ್ಟ್ ಪಾಯಸ್ ಮತ್ತು ಜಯಕುಮಾರ್ ಇದ್ದರು. ಈ ನಾಲ್ವರೂ ಪ್ರಸ್ತುತ ಗಡಿಪಾರು ಎದುರಿಸುತ್ತಿದ್ದಾರೆ. ಅವರು ಹೋಗಲು ಬಯಸುವ ದೇಶಗಳಿಗೆ ಕಳುಹಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ನಳಿನಿ ಒತ್ತಾಯಿಸಿದರು.

''ನಮ್ಮ ಮಗಳು ಹರಿತಾ ವಾಸಿಸುವ ದೇಶಕ್ಕೆ ಮುರುಗನ್ (ಅವಳ ಪತಿ) ಅವರನ್ನು ಕಳುಹಿಸುವಂತೆ ನಾನು ಜಿಲ್ಲಾಧಿಕಾರಿಯನ್ನು ಕೇಳಿದೆ. ಸಂತಾನ್ ಶ್ರೀಲಂಕಾಕ್ಕೆ ಹೋಗಲು ಬಯಸುತ್ತಾರೆ, ಉಳಿದ ಇಬ್ಬರು ಇನ್ನೂ ನಿರ್ಧರಿಸಿಲ್ಲ"ಎಂದು ನಳಿನಿ ಹೇಳಿದರು.

English summary
Cried for days when Rajiv Gandhi died, says convict Nalini Sriharan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X