ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 6 : 'ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ' ಎಂದು ಜಮ್ಮು-ಕಾಶ್ಮೀರದಲ್ಲಿ ಬುಧವಾರ ಸೆರೆ ಸಿಕ್ಕ ಉಗ್ರ ವಿಚಾರಣೆ ವೇಳೆ ಹೇಳಿದ್ದಾನೆ. ಸೆರೆಸಿಕ್ಕ ಉಗ್ರನ ಹೆಸರು ಉಸ್ಮಾನ್ ಅಲ್ಲ ಮೊಹಮದ್ ನವೀದ್ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸೆರೆಸಿಕ್ಕ ಉಗ್ರ ತನ್ನ ಹೆಸರು ಕಾಸಿಂ, ಉಸ್ಮಾನ್ ಖಾನ್, ಮೊಹಮದ್ ನವೀದ್ ಎಂದು ಹೇಳಿದ್ದ. ಆದರೆ, ಅಂತಿಮವಾಗಿ ಆತನ ಹೆಸರು ನವೀದ್ ಎಂದು ತಿಳಿದುಬಂದಿದೆ. ಇಂದು ರಾಷ್ಟ್ರೀಯ ತನಿಖಾ ದಳದ ತಂಡ ಜಮ್ಮುವಿಗೆ ತೆರಳಲಿದ್ದು, ನವೀದ್ ವಿಚಾರಣೆ ನಡೆಸಲಿದೆ. [ಸೆರೆಸಿಕ್ಕ ನವೀದ್ ಯಾರು?]

terrorist

ನವೀದ್ ಸಹೋದರ ಉಪನ್ಯಾಸಕ : ಪಾಕಿಸ್ತಾನದ ಫೈಸ್ಲಾಬಾದ್ ಮೂಲದನಾದ ನವೀಬ್ ತಂದೆ ಯೂಸೂಫ್ ಮೊಹಮದ್. ನವೀದ್‌ಗೆ ಇಬ್ಬರು ಸಹೋದರರು. ಒಬ್ಬರು ಉಪನ್ಯಾಸಕರಾಗಿ ಮತ್ತೊಬ್ಬರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. [ಪಂಜಾಬಿನಲ್ಲಿ ಉಗ್ರರನ್ನು ಕೊಂದ ಯೋಧರು : ಚಿತ್ರಗಳು]

ನಾನು ಕೊಲ್ಲಲು ಬಂದಿದ್ದೆ : 'ನಾನು ಇಲ್ಲಿಗೆ ಕೊಲ್ಲಲು ಬಂದಿದ್ದೆ ಸಾಯಲು ಅಲ್ಲ, ಆದಷ್ಟು ಜನರನ್ನು ಕೊಂದು ತಪ್ಪಿಸಿಕೊಂಡು ಹೋಗುಲು ಯೋಜನೆ ರೂಪಿಸಿದ್ದೆವು' ಎಂದು ನವೀದ್ ಹೇಳಿದ್ದಾನೆ. ಗುರುದಾಸ್‌ ಪುರ್‌ನಲ್ಲಿ ನಡೆದ ಕೃತ್ಯದ ಬಗ್ಗೆಯೂ ನವೀದ್‌ ನಿಂದ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.

ಹಿಂದುಗಳ ಮೇಲೆ ದಾಳಿ : 'ಹಿಂದುಗಳ ಮೇಲೆ ಮಾತ್ರ ದಾಳಿ ಮಾಡಿ ಎಂದು' ತರಬೇತಿ ಸಮಯದಲ್ಲಿ ನಮಗೆ ಹೇಳಿದ್ದರು. ನಾನು ಲಷ್ಕರ್ ಎ ತೋಯ್ಬಾ ಸಂಘಟನೆಯ ಭಾಗವಾಗಿದ್ದೆ ಎಂದು ನವೀಬ್ ಒಪ್ಪಿಕೊಂಡಿದ್ದಾನೆ. 10 ದಿನಗಳ ಹಿಂದೆ ಭಾರತದ ಗಡಿಯೊಳಕ್ಕೆ ನುಸುಳಿ ಬಂದಿದ್ದೆವು' ಎಂದು ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

English summary
The terrorist arrested at Udhampur Mohammad Naved said that 'I came to kill not die'. although it was very clear that the Lashkar had sent him to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X