Get Updates
Get notified of breaking news, exclusive insights, and must-see stories!

Indian American: ಅಮೆರಿಕದಲ್ಲಿ ಪರದಾಡುತ್ತಿರುವ ಭಾರತದ ಮಹಿಳೆ!

ಹೈದರಾಬಾದ್: ಜಗತ್ತು ವಿಶಾಲವಾಗಿ ಬೆಳೆದಂತೆ ಪ್ರಪಂಚವೇ ಒಂದು ಹಳ್ಳಿಯಾಗಿದೆ ಅನ್ನೋ ಮಾತು ಜನಜನಿತ. ಆದರೆ ಬೇರೆ ದೇಶಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದರೆ ಸಹಾಯಕ್ಕೆ ಯಾರು ಬರ್ತಾರೆ? ಅನ್ನೋದು ಮಾತ್ರ ವಾಸ್ತವ ಪ್ರಶ್ನೆ. ಅಷ್ಟಕ್ಕೂ ಈ ಪ್ರಶ್ನೆಗೆ ಬಲವಾದ ಕಾರಣವಿದೆ. ಭಾರತ ಮೂಲದ ಮಹಿಳೆಯೊಬ್ಬರ ಪರದಾಟವಿದೆ. ಅಮೆರಿಕದಲ್ಲಿ ಓದಲು ಹೋಗಿ ನಿತ್ಯವೂ ನರಳುತ್ತಿರುವ ಅಬಲೆಯ ಸಂಕಟವೂ ಈ ಪ್ರಶ್ನೆಯಲ್ಲಿ ತುಂಬಿದೆ.

ಹೌದು, ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುತ್ತಿನ ನಗರಿ ಹೈದರಾಬಾದ್‌ನಿಂದ ತೆರಳಿದ್ದ ಮಹಿಳೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈದರಾಬಾದ್‌ ಮೂಲದ ಯುವತಿ ಸೈಯೆದಾ ಲುಲು ಮಿನ್ಹಾಜ್ ಜೈದಿ ಹೀಗೆ ಪರದಾಡುತ್ತಿರುವ ಮಹಿಳೆ. ಅಮೆರಿಕದ ಚಿಕಾಗೋದಲ್ಲಿ ತಮ್ಮ ವಸ್ತುಗಳನ್ನು ಕಳೆದುಕೊಂಡ ನಂತರ ಸೈಯೆದಾ ಖಿನ್ನತೆಗೆ ಒಳಗಾಗಿದ್ದು, ಅಮೆರಿಕದ ಬೀದಿ ಬೀದಿಯಲ್ಲಿ ನರಳುವ ಪರಿಸ್ಥಿತಿ ಎದುರಾಗಿದೆಯಂತೆ. ಖಿನ್ನತೆ ಜೊತೆಗೆ ಹಸಿವು ಕೂಡ ಯುವತಿಗೆ ಕಾಡುತ್ತಿದ್ದು, ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಈ ಘಟನೆ ಶತಕೋಟಿ ಭಾರತೀಯರ ಹೃದಯ ಬಿಗಿದಂತಿದೆ.

Hyderabad women is struggling in Chicago to reach home

ಮಗಳ ಬಗ್ಗೆ ಅಮ್ಮನಿಗೆ ಚಿಂತೆ

ಇನ್ನು ಮಗಳ ಸ್ಥಿತಿ ಬಗ್ಗೆ ಅಮ್ಮ ಚಿಂತಿತರಾಗಿದ್ದಾರೆ. ಸೈಯೆದಾ ಲುಲು ಮಿನ್ಹಾಜ್ ಜೈದಿ ಅವರ ತಾಯಿ ಸೈಯೆದಾ ವಹಾಜ್ ಫಾತಿಮಾ ಆತಂಕ ಹೊರಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು, ತಮ್ಮ ಪುತ್ರಿಯನ್ನು ಮತ್ತೆ ಭಾರತಕ್ಕೆ ಕರೆತರಲು ಸಹಾಯ ಮಾಡಿ ಎಂದು ಮನವಿ ಸಲ್ಲಿಸಿದ್ದಾರಂತೆ. ಈ ಕುರಿತು ಭಾರತ್ ರಾಷ್ಟ್ರ ಸಮಿತಿ ಹಿರಿಯ ನಾಯಕ ಖಲೀಕುರ್ ರೆಹಮಾನ್ ಟ್ವೀಟ್ ಮಾಡಿ, ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಳಿಕ ಘಟನೆ ಕೂಡ ದೇಶಾದ್ಯಂತ ಸಂಚಲನ ಸೃಷ್ಟಿಮಾಡಿದೆ. ಅಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆ ಪರಿಸ್ಥಿತಿ ಕಂಡು ಭಾರತೀಯರು ಮರುಗಿದ್ದಾರೆ. ಜೊತೆಗೆ ತಮ್ಮ ಮಗಳ ಪರಿಸ್ಥಿತಿ ಬಗ್ಗೆ ವಿದೇಶಾಂಗ ಸಚಿವರಿಗೆ ತಾಯಿ ಬರೆದ ಪತ್ರ ಕಣ್ಣೀರು ತರಿಸುತ್ತಿದೆ.

ತಾಯಿ ಬರೆದ ಪತ್ರದಲ್ಲಿ ಏನಿದೆ?

ಸೈಯೆದಾ ಜೈದಿ ಅವರ ತಾಯಿ ಸೈಯೆದಾ ಫಾತಿಮಾ ವಿದೇಶಾಂಗ ಸಚಿವರಿಗೆ ಬರೆದ ಪತ್ರದಲ್ಲಿ ಮಗಳ ಘೋರ ಪರಿಸ್ಥಿತಿ ಬಗ್ಗೆ ವಿವರಿಸಿದ್ದು, 'ಮೌಲಾ ಅಲಿ ನಿವಾಸಿಯಾಗಿರುವ ನನ್ನ ಮಗಳು ಸೈಯೆದಾ ಲುಲು ಮಿನ್ಹಾಜ್ ಜೈದಿ, ಅಮೆರಿಕದ ಡೆಟ್ರಾಯಿಟ್‌ನ TRINE ವಿವಿಯಿಂದ ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 2021ರ ಆಗಸ್ಟ್ ತಿಂಗಳಲ್ಲಿ ತೆರಳಿದ್ದರು ಮತ್ತು ನಮ್ಮ ಸಂಪರ್ಕದಲ್ಲಿದ್ದಳು. ಆದ್ರೆ ಕಳೆದ ಎರಡು ತಿಂಗಳಿಂದ ಆಕೆ ನಮ್ಮ ಸಂಪರ್ಕದಲ್ಲಿ ಇರಲಿಲ್ಲ..' ಎಂದು ಪತ್ರದಲ್ಲಿ ಮಾತು ಮುಂದುವರಿಸಿದ್ದಾರೆ.

'ನಮ್ಮ ಮಗಳನ್ನು ಕರೆದುಕೊಂಡು ಬನ್ನಿ'

'ಇತ್ತೀಚೆಗೆ ಇಬ್ಬರು ಹೈದರಾಬಾದಿ ಯುವಕರ ಮೂಲಕ ನನ್ನ ಮಗಳ ಸ್ಥಿತಿ ನಮಗೆ ಗೊತ್ತಾಗಿದೆ. ನಮ್ಮ ಮಗಳು ಖಿನ್ನತೆಗೆ ಒಳಗಾಗಿದ್ದು, ಆಕೆಯ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಈಗ ನಮ್ಮ ಮಗಳು ಅಮೆರಿಕದ ಚಿಕಾಗೋದ ರಸ್ತೆಯಲ್ಲಿ ಕಂಡುಬಂದಿದ್ದಾರೆ.' ಎಂದು ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಮಗಳನ್ನ ವಾಪಸ್ ಕರೆತರಲು ಮನವಿ ಮಾಡಿದ್ದಾರೆ. ಅಮೆರಿಕದಲ್ಲಿರುವ ಭಾರತದ ದೂತವಾಸ ಕಚೇರಿ ಹಾಗೂ ವಿದೇಶಾಂಗ ಸಚಿವರಿಗೆ ಈ ಮೂಲಕ ಮನವಿ ಮಾಡಿದ್ದಾರೆ ಸೈಯೆದಾ ಜೈದಿ ಅವರ ತಾಯಿ.

ಒಟ್ನಲ್ಲಿ ಸಾವಿರ ಸಾವಿರ ಕನಸು ಕಟ್ಟಿ ಓದಲು ಹೋಗಿದ್ದ ಮಗಳು ಈಗ ಅತಂತ್ರ ಸ್ಥಿತಿಯಲ್ಲಿ ನರಳುವಾಗ ತಾಯಿ ಪರದಾಡುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಂಡು, ಸಂಕಷ್ಟದಲ್ಲಿ ಸಿಲುಕಿರುವ ಭಾರತ ಮೂಲದ ಯುವತಿಯನ್ನ ರಕ್ಷಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಗ್ರಹಿಸುತ್ತಿದ್ದಾರೆ. ಅಲ್ಲದೆ ಖುಷಿ ಖುಷಿಯಾಗಿ ಮನೆಯಿಂದ ಹೋಗಿದ್ದ ತಮ್ಮ ಮಗಳ ಈಗಿನ ಪರಿಸ್ಥಿತಿ ಕಂಡು ಮನೆಯವರು ಕೂಡ ಪರದಾಡುತ್ತಿದ್ದು, ಆದಷ್ಟು ಬೇಗ ತಮ್ಮ ಪುತ್ರಿ ಮನೆಗೆ ಬರುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+