ಸ್ನೇಹಿತರೊಂದಿಗೆ ಸಹಕರಿಸಲು ಪತ್ನಿಗೆ ಪೀಡಿಸುತ್ತಿದ್ದ ರಾಕ್ಷಸ ಅರೆಸ್ಟ್

Posted By:
Subscribe to Oneindia Kannada

ಹೈದರಾಬಾದ್, ಮಾರ್ಚ್ 14: ಇಲ್ಲಿನ ಪೊಲೀಸ್ ಠಾಣೆಯೊಂದಕ್ಕೆ ದೂರು ನೀಡಿರುವ 21 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು, ತನ್ನ ಪತಿಯು ಆತನ ಸ್ನೇಹಿತರೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ್ದಾಳೆಂದು ಎನ್ ಡಿ ಟಿವಿ ವರದಿ ಮಾಡಿದೆ.

ಮತ್ತೂ ಆಘಾತಕಾರಿ ವಿಚಾರವೆಂದರೆ, ಪತಿಯ ತಾಯಿಯೂ ಆತನ ತಾಳಕ್ಕೆ ತಕ್ಕಂತೆ ಕುಣಿಯಬೇಕೆಂದು ಮಹಿಳೆಗೆ ಬಲವಂತಪಡಿಸಿದ್ದಾಳೆದು ಸಂತ್ರಸ್ತ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

Hyderabad Woman Says Husband Forced Her cooperate With his Friends

ದೂರಿನ ಪ್ರಕಾರ, ಕಳೆದ ವರ್ಷ ಏಪ್ರಿಲ್ ನಲ್ಲಿ ಆಕೆಗೆ ವಿವಾಹವಾಗಿದೆ. ಆನಂತರ ಆತ ಉನ್ನತ ವ್ಯಾಸಂಗಕ್ಕಾಗಿ, ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಇದೇ ವರ್ಷ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದಿಂದ ವಾಪಸ್ಸಾಗಿದ್ದಾನೆ.

ಆದರೆ, ಭಾರತಕ್ಕೆ ಬಂದ ಕೂಡಲೇ ಆತನ ಕಿರುಕುಳ ಶುರುವಾಗಿದೆ. ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಮಹಿಳೆಯರು ಪತಿ ಮಾತ್ರವಲ್ಲದೆ, ಹಲವಾರು ವ್ಯಕ್ತಿಗಳೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಹಾಗೆಯೇ ನೀನೂ ಇಟ್ಟುಕೊಳ್ಳಬೇಕು. ಹಾಗಾಗಿ, ನನ್ನ ಸ್ನೇಹಿತರೊಡನೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿರಬೇಕು ಎಂದೆಲ್ಲಾ ಪೀಡಿಸುತ್ತಿದ್ದ ಎನ್ನಲಾಗಿದೆ.

ಇಷ್ಟೇ ಅಲ್ಲ, ವಿದೇಶದಲ್ಲಿದ್ದಾಗಲೂ ಪತ್ನಿಗೆ ಆಗಾಗ ಫೋನು ಮಾಡುತ್ತಿದ್ದ ಆತ ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳುಹಿಸುವಂತೆ ಕೇಳುತ್ತಿದ್ದ. ಆತ ಆ ಚಿತ್ರಗಳನ್ನು ರಹಸ್ಯವಾಗಿ ಕಾಪಾಡುತ್ತಾನೆಂದು ಭ್ರಮಿಸಿದ್ದ ಪತ್ನಿಯು ಅದರಂತೆ ನಡೆದುಕೊಂಡಾಗ ಆ ಚಿತ್ರ ಅಥವಾ ವೀಡಿಯೋಗಳನ್ನು ಆತ ತನ್ನ ಸ್ನೇಹಿತರಿಗೆ ರವಾನಿಸುತ್ತಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ದೂರಿನನ್ವಯ, ಮಹಿಳೆಯ ಪತಿ ಹಾಗೂ ಆತನ ತಾಯಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 21-year-old woman from Hyderabad has told the police that her husband has forced her into having cooperated his friends.
Please Wait while comments are loading...