ಮಾನವ ಗುರಾಣಿ ಕೇಸ್: 10 ಲಕ್ಷ ಪರಿಹಾರ ದೇಶದ್ರೋಹಿಗಳಿಂದ ಕೊಡಿಸಿ

ಕಾಶ್ಮೀರದ ಮಾನವ ಗುರಾಣಿ ಘಟನೆಗೆ ಸಂಬಂಧಿಸಿದಂತೆ, ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಆದೇಶ. ಸಾಮಾಜಿಕ ತಾಣದಲ್ಲಿ ಆಯೋಗದ ತೀರ್ಪಿನ ವಿರುದ್ದ ಆಕ್ರೋಶ

ಅತ್ತ ಅಮರನಾಥ್ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರ ಅಟ್ಟಹಾಸ, ಇತ್ತ ದೇಶದೊಳಗೆ ಇದ್ದುಕೊಂಡು ಶತ್ರು ರಾಷ್ಟ್ರಗಳನ್ನು ಬೆಂಬಲಿಸುತ್ತಿರುವ ಪ್ರತ್ಯೇಕತಾವಾದಿಗಳಿಗೆ ಬಿಸಿಮುಟ್ಟಿಸಲು ಸೇನಾಧಿಕಾರಿಗಳು ಕ್ರಮ ತೆಗೆದುಕೊಂಡರೆ ಅದಕ್ಕೂ ಟೀಕೆ, ಪ್ರತಿಭಟನೆ, ದಂಡ!!

ಭಾರೀ ವಿವಾದಕ್ಕೊಳಗಾಗಿದ್ದ ಕಾಶ್ಮೀರದ ಮಾನವ ಗುರಾಣಿ ಘಟನೆಗೆ ಸಂಬಂಧಿಸಿದಂತೆ, ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ಸರ್ಕಾರಕ್ಕೆ ಆದೇಶಿಸಿದೆ.

ಮಾನವ ಹಕ್ಕುಗಳ ಆಯೋಗದ ತೀರ್ಪಿಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಪ್ರತ್ಯೇಕತಾವಾದಿಗಳು ಮತ್ತು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸುವ ದೇಶದ್ರೋಹಿಗಳಿಂದ ಚಂದಾ ವಸೂಲಿ ಮಾಡಿ ಕೊಡಿಸಿ ಎನ್ನುವ ಅಭಿಪ್ರಾಯ ಅಲ್ಲಲ್ಲಿ ವ್ಯಕ್ತವಾಗುತ್ತಿದೆ.

ಇತ್ತ ಕೇಂದ್ರ ಸರಕಾರ, ಮಾನವ ಹಕ್ಕುಗಳ ಆಯೋಗ ಅದ್ಯಾವ ಆಧಾರದ ಮೇಲೆ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ ಎಂದು ಆಶ್ಚರ್ಯವಾಗುತ್ತಿದೆ, ಆಯೋಗದ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಮಾನವ ಹಕ್ಕುಗಳ ಆಯೋಗದ ಈ ತೀರ್ಪು ಇಡೀ ಸೇನೆಯನ್ನೇ ಅವಮಾನಿಸಿದಂತೆ, ಆಯೋಗದ ತೀರ್ಪಿನಿಂದ ಕಲ್ಲು ತೂರಾಟ ನಡೆಸುವವರ ಸಂಖ್ಯೆ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದೆ ಓದಿ..

ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಮಾನವ ಗುರಾಣಿ

ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಮಾನವ ಗುರಾಣಿ

ಏಪ್ರಿಲ್ ಒಂಬತ್ತರಂದು ನಡೆದಿದ್ದ ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ, ಸೇನಾ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಪ್ರತ್ಯೇಕತಾವಾದಿಗಳು ಅಡ್ಡಿ ಮಾಡುತ್ತಿದ್ದರು. ಆ ಸಮಯದಲ್ಲಿ ದೇಶದ್ರೋಹಿಗಳಿಗೆ ಬಿಸಿಮುಟ್ಟಿಸಲು ಕರ್ತವ್ಯದಲ್ಲಿದ್ದ ಮೇಜರ್ ಗೊಗೋಯಿ, ಫಾರೂಕ್ ಅಹ್ಮದ್ ಎನ್ನುವ ಯುವಕನನ್ನು ಸೇನಾ ಜೀಪಿನ ಬ್ಯಾನೆಟಿಗೆ ಕಟ್ಟಿ ಹತ್ತೊಂಬತ್ತು ಹಳ್ಳಿಗಳಲ್ಲಿ ಮೆರವಣಿಗೆ ನಡೆಸಿದ್ದರು.

ಹತ್ತು ಲಕ್ಷ ಪರಿಹಾರಕ್ಕೆ ಆದೇಶ

ಹತ್ತು ಲಕ್ಷ ಪರಿಹಾರಕ್ಕೆ ಆದೇಶ

ಸೇನೆಯ ಕ್ರಮವನ್ನು ವಿರೋಧಿಸಿ ಹೋರಾಟಗಾರರು ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು. ಯಾವುದೇ ತಪ್ಪಿತಸ್ಥನಿಗೂ ಶಿಕ್ಷೆ ನೀಡಲು ಕೆಲವೊಂದು ಕಾನೂನು ದೇಶದಲ್ಲಿದೆ. ಫಾರೂಕ್ ಅವರನ್ನು ಸೇನೆ ನಡೆಸಿಕೊಂಡ ರೀತಿ ಮಾನವ ಸಮಾಜ ಒಪ್ಪಿಕೊಳ್ಳುವಂತದಲ್ಲ, 10ಲಕ್ಷ ರೂಪಾಯಿ ಪರಿಹಾರವನ್ನು ಮುಂದಿನ 6ವಾರದೊಳಗೆ ನೀಡುವಂತೆ ಮಾನವ ಹಕ್ಕುಗಳ ಆಯೋಗ, ಜಮ್ಮು, ಕಾಶ್ಮೀರ ಸರಕಾರಕ್ಕೆ ಸೂಚಿಸಿದೆ.

ಮೇಜರ್ ಗೊಗೋಯಿ ನಿರ್ಧಾರ ಶ್ಲಾಘಿಸಿದ್ದ ಸೇನಾ ಕೋರ್ಟ್

ಮೇಜರ್ ಗೊಗೋಯಿ ನಿರ್ಧಾರ ಶ್ಲಾಘಿಸಿದ್ದ ಸೇನಾ ಕೋರ್ಟ್

ಮೇಜರ್ ಗೊಗೋಯಿ ನಿರ್ಧಾರವನ್ನು ಸೇನಾ ಕೋರ್ಟ್ ಶ್ಲಾಘಿಸಿ ಕ್ಲೀನ್ ಚಿಟ್ ನೀಡಿತ್ತು. ಮಾನವ ಹಕ್ಕುಗಳ ಆಯೋಗದ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ದು ಈ ಸಂಬಂಧ ಹೇಳಿಕೆಯನ್ನು ನೀಡಿ, ಇಡೀ ದೇಶಕ್ಕೆ ಗೊಗೋಯಿ ತೆಗೆದುಕೊಂಡ ನಿರ್ಧಾರಕ್ಕೆ ಹೆಮ್ಮೆಯಿದೆ ಎಂದು ನಾಯ್ಡು ಹೇಳಿದ್ದಾರೆ. (ಚಿತ್ರದಲ್ಲಿ ಮೇಜರ್ ಗೊಗೋಯಿ)

ಆಯೋಗದ ಆದೇಶವನ್ನು ಖಂಡಿಸುತ್ತೇವೆ

ಮಾನವ ಹಕ್ಕುಗಳ ಆಯೋಗದ ಆದೇಶವನ್ನು ನಾನು ಖಂಡಿಸುತ್ತೇನೆ, ಇದು ಭಾರತದ ಸೇನೆಗೆ ಮಾಡಿದ ಅವಮಾನ ಎನ್ನುವ ಟ್ವೀಟ್

ಆಯೋಗದ ಅಂಧತ್ವದ ಆದೇಶ

ಮಾನವ ಹಕ್ಕುಗಳ ಆಯೋಗದ ಅಂಧತ್ವದ ಆದೇಶ, ನೇಣಿಗೆ ಹಾಕಬೇಕಾದವನಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ.

ಅಮರನಾಥ್ ಯಾತ್ರಾರ್ಥಿಗಳ ಮೇಲೆ ಗುಂಡಿನ ದಾಳಿ

ಅಮರನಾಥ್ ಯಾತ್ರೆಯಲ್ಲಿ ಸಾವನ್ನಪ್ಪಿದವರಿಗೆ ಮಾನವ ಹಕ್ಕುಗಳ ಆಯೋಗ ಎಷ್ಟು ಪರಿಹಾರ ಕೊಡಬೇಕೆಂದು ಆದೇಶ ನೀಡುತ್ತೆ, ಪಾಕಿಸ್ತಾನ ಪರಿಹಾರ ನೀಡಬೇಕೆಂದು ಆಯೋಗ ಒತ್ತಾಯಿಸುತ್ತದಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+