Get Updates
Get notified of breaking news, exclusive insights, and must-see stories!

Parliament Security Breach: ಕಲಾಪದ ವೇಳೆ ಸಂಸತ್‌ಗೆ ನುಗ್ಗಿದ ಅಪರಿಚಿತರು, ಸಂಸತ್‌ ದಾಳಿ ನೆನಪಿಸಿದ ಘಟನೆ

ನವದೆಹಲಿ, ಡಿಸೆಂಬರ್‌ 13: ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿರುವ ವೇಳೆ ಅಪಚಿರಿತ ವ್ಯಕ್ತಿಗಳು ನುಗ್ಗಿದ ಘಟನೆ ನಡೆದಿದೆ. ಅಪರಿಚಿತರ ಪ್ರವೇಶದಿಂದ ಕಲಾಪದಿಂದ ಸಂಸದರು ಓಡಿ ಹೋಗಿದ್ದಾರೆ. ಸಂಸತ್ತಿನ ಗುಂಡಿನ ದಾಳಿ ನಡೆದ ದಿನವಾದ ಇವತ್ತೆ ಈ ಅಪಚಿತರ ಅನಿರೀಕ್ಷಿತ ಪ್ರವೇಶ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ, ಇದ್ದಕ್ಕಿದ್ದಂತೆ ಸುಮಾರು 20 ವರ್ಷ ವಯಸ್ಸಿನ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಹಾರಿದರು. ಅವರ ಕೈಯಲ್ಲಿ ಡಬ್ಬಿಗಳು ಇದ್ದವು. ಈ ಡಬ್ಬಿಗಳು ಹಳದಿ ಹೊಗೆಯನ್ನು ಹೊರಸೂಸುತ್ತಿದ್ದವು.

Unidentified persons entered the Lok Sabha during the proceedings

ಅವರಲ್ಲಿ ಒಬ್ಬರು ಸ್ಪೀಕರ್ ಪೀಠದ ಕಡೆಗೆ ಓಡಲು ಪ್ರಯತ್ನಿಸಿದರು. ಒಂದಷ್ಟು ಘೋಷಣೆಗಳನ್ನು ಕೂಗುತ್ತಿದ್ದರು. ಹೊಗೆ ವಿಷಕಾರಿಯಾಗಿರಬಹುದು. ಇದು 2001 ರಲ್ಲಿ ಸಂಸತ್ತಿನ ಮೇಲೆ ದಾಳಿಯಾದ ಡಿಸೆಂಬರ್ 13 ರಂದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಡಿಂಪಲ್ ಯಾದವ್, "ಇಲ್ಲಿಗೆ ಬರುವವರೆಲ್ಲರೂ ಒಂದು ಸಂದರ್ಶಕರು ಅಥವಾ ವರದಿಗಾರರು. ಅವರು ಟ್ಯಾಗ್‌ಗಳನ್ನು ಹೊಂದಿರುವುದಿಲ್ಲ. ಹಾಗಾಗಿ, ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂದು ನಾನು ಭಾವಿಸುತ್ತೇನೆ. ಇದು ಸಂಪೂರ್ಣ ಭದ್ರತಾ ಲೋಪ ಎಂದು ನಾನು ಭಾವಿಸುತ್ತೇನೆ. ಲೋಕಸಭೆಯೊಳಗೆ ಏನು ಬೇಕಾದರೂ ನಡೆಯಬಹುದಿತ್ತು ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ರಂಜನ್‌ ಚೌಧರಿ, "ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಹೊಗೆ ಬರುತ್ತಿರುವ ಏನನ್ನೋ ಎಸೆದರು. ಅವರನ್ನು ಸಂಸದರು ಹಿಡಿದರು, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದು ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ. ಇಂದು ನಾವು 2001 ರಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಜನರ ಮರಣ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇಂದೇ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ, "ಇದೊಂದು ಭಯಾನಕ ಅನುಭವ. ಅವರ ಗುರಿ ಏನು ಮತ್ತು ಅವರು ಏಕೆ ಹೀಗೆ ಮಾಡುತ್ತಿದ್ದಾರೆಂದು ಯಾರಿಗೂ ಊಹಿಸಲು ಸಾಧ್ಯವಾಗಲಿಲ್ಲ. ನಾವೆಲ್ಲರೂ ತಕ್ಷಣವೇ ಸದನದಿಂದ ಹೊರಬಂದೆವು, ಆದರೆ ಇದು ಭದ್ರತಾ ಲೋಪವಾಗಿತ್ತು. ಅವರು ಹೊಗೆ ಬಿಡುವ ಉಪಕರಣಗಳೊಂದಿಗೆ ಹೇಗೆ ಪ್ರವೇಶಿಸಿದರು? ಎಂದು ಪ್ರಶ್ನಿಸಿದ್ದಾರೆ.

Unidentified persons entered the Lok Sabha during the proceedings

ಸಾರಿಗೆ ಭವನದ ಎದುರು ಬಣ್ಣ ಹೊಗೆ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಪ್ರತಿಭಟನಾಕಾರರು, ಓರ್ವ ಪುರುಷ ಮತ್ತು ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸತ್ತಿನ ಹೊರಗೆ ಘಟನೆ ನಡೆದಿದೆ. ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಮಾತನಾಡಿ, ಯಾರಿಗೂ ಗಾಯಗಳಾಗಿಲ್ಲ. ಅವರು ಕೆಳಗೆ ಹಾರಿದಾಗ, ಹಿಂಭಾಗದ ಬೆಂಚುಗಳು ಖಾಲಿಯಾಗಿರಲಿಲ್ಲ, ಆದ್ದರಿಂದ ಅವರು ಸಿಕ್ಕಿಬಿದ್ದರು ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಸಂಸದ ಡ್ಯಾನಿಶ್ ಅಲಿ ಮಾತನಾಡಿ, ಸಾರ್ವಜನಿಕ ಗ್ಯಾಲರಿಯಿಂದ ಇಬ್ಬರು ಜಿಗಿದಿದ್ದು ಹೊಗೆ ಕಾಣಿಸಿಕೊಂಡಿದೆ. ಸುತ್ತಲೂ ಅವ್ಯವಸ್ಥೆ ಇತ್ತು. ಅವರಿಬ್ಬರನ್ನೂ ಭದ್ರತಾ ಅಧಿಕಾರಿಗಳು ಹಿಡಿದಿದ್ದಾರೆ" ಎಂದು ಹೇಳಿದ್ದಾರೆ.

ಸಭಾಧ್ಯಕ್ಷರ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರ್‌ವಾಲ್‌ ಮಾತನಾಡಿ, ''ಒಂದು ಲೋಪದೋಷ ಖಚಿತವಾಗಿದೆ. ಮೊದಲ ವ್ಯಕ್ತಿ ಕೆಳಗೆ ಬಿದ್ದಾಗ ಬಿದ್ದಿರಬಹುದು ಎಂದುಕೊಂಡಿದ್ದೆವು. ಆದರೆ ಎರಡನೇ ವ್ಯಕ್ತಿ ಕೆಳಗೆ ಬರಲು ಆರಂಭಿಸಿದಾಗ ನಾವೆಲ್ಲರೂ ಜಾಗರೂಕರಾಗಿದ್ದೇವೆ.

ಬೂಟುಗಳನ್ನು ತೆರೆಯಲು ಯತ್ನಿಸಿದ ವ್ಯಕ್ತಿ ನಂತರ ಏನೋ ಹೊರತೆಗೆದ ನಂತರ ಹೊಗೆ ಹೊರಬಿತ್ತು.ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಭಾಧ್ಯಕ್ಷರು ಹಾಗೂ ಜವಾಬ್ದಾರಿಯುತರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.ಇದೆಲ್ಲ ನಡೆದಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸದನಕ್ಕೆ ಆಗಮಿಸಿದ್ದರು ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+