ಶಾರುಕ್-ಅನುಷ್ಕಾ ಜೋಡಿಯ ಸಿನಿಮಾ ಹಾಡು ಬಿಡುಗಡೆ, ಗುಜರಾತಿನ ಮಳೆ

Posted By:
Subscribe to Oneindia Kannada

ಮುಂಗಾರು ಮಳೆಗೆ ಗುಜರಾತ್ ತತ್ತರಿಸಿ ಹೋಗಿದೆ. ಅಹ್ಮದಾಬಾದ್ ನಲ್ಲಿ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣ ಸಣ್ಣ ಕೆರೆ ಕಂಡಂತೆ ಭಾಸವಾಗುತ್ತದೆ. ಇನ್ನು ರಸ್ತೆಗಳಲ್ಲಿ ವಾಹನವೇ ಕಾಣಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಕಾಣಿಸಿಕೊಂಡರೂ ಯಾಕಪ್ಪಾ ರಸ್ತೆಗೆ ತಂದ್ವಿ ಎಂದು ತಮ್ಮನ್ನೇ ಶಪಿಸಿಕೊಳ್ಳುತ್ತಾ ಮನೆ ತಲುಪುವುದರೊಳಗೆ ಸಾಕುಬೇಕಾಗುತ್ತದೆ.

ತಮಿಳುನಾಡಿನ ರಾಮೇಶ್ವರಂನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮಾರಕ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ನಾಗರಪಂಚಮಿಗೆ ಪೂರ್ವಭಾವಿಯಾಗಿ ದಂಗಲ್ ಅಖಾಡಕ್ಕೆ ಸಿದ್ಧವಾಗಿರುವ ಕುಸ್ತಿಪಟುಗಳನ್ನು ನೋಡುವುದಕ್ಕೆ ಖುಷಿ ಎನಿಸುತ್ತದೆ. ಮುಂಗಾರು ಸಂಸತ್ ಅಧಿವೇಶನ ನಡೆಯುತ್ತಿದ್ದು, ರಾಹುಲ್ ಗಾಂಧಿ ಮಾಧ್ಯಮದವರ ಜತೆಗೆ ಮಾತನಾಡಿದ್ದಾರೆ.

ರಾಮೇಶ್ವರಂನಲ್ಲಿ ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ

ಬಿಹಾರದಲ್ಲಿ ರಾತ್ರೋರಾತ್ರಿ ದೋಸೆ ಮಗುಚಿ ಹಾಕಿದ ಹಾಗೆ ಆಡಳಿತ ನಡೆಸುತ್ತಿದ್ದ ಆರ್ ಜೆಡಿ ವಿಪಕ್ಷ ಸ್ಥಾನದಲ್ಲೂ, ಇನ್ನು ವಿಪಕ್ಷ ಸ್ಥಾನದಲ್ಲಿ ಕೂರುತ್ತಿದ್ದ ಬಿಜೆಪಿ ಆಡಳಿತ ನಡೆಸುವ ಸರಕಾರದ ಜತೆ ಕಾಣಿಸಿಕೊಂಡಿವೆ. ಎಲ್ಲ ನಿತೀಶ್ ಕುಮಾರ್ ಮಹಿಮೆ. ಒಟ್ಟಿನಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆ ಬಿಜೆಪಿ ವಿರುದ್ಧ ಬಡಿದಾಡಬೇಕು ಅಂದುಕೊಳ್ತಿದ್ದವರೆಲ್ಲ ಶಪಿಸುವಂತಾಯಿತು.

ಇನ್ನಷ್ಟು ಸುದ್ದಿ-ಚಿತ್ರಗಳಿಗೆ ಓದಿ-ನೋಡಿ.

ಆಣೆ ಮಾಡಿ ಹೇಳ್ತೀವಿ, ಇದು ವಿಮಾನ ನಿಲ್ದಾಣ

ಆಣೆ ಮಾಡಿ ಹೇಳ್ತೀವಿ, ಇದು ವಿಮಾನ ನಿಲ್ದಾಣ

ನೀರಿನ ಮಧ್ಯೆ ಸಾಲಾಗಿ ವಿಮಾನಗಳು ನಿಂತಿವೆಯಲ್ಲಾ, ಇದು ಅಹ್ಮದಾಬಾದ್ ನ ಸರ್ದಾರ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೃಶ್ಯ. ಮುಂಗಾರಿನ ಭಾರೀ ಮಳೆಗೆ ಗುರುವಾರ ನಿಲ್ದಾಣ ಕಂಡುಬಂದಿದ್ದು ಹೀಗೆ.

ಆಟೋ ಒಯ್ಯಲು ಹರಸಾಹಸ

ಆಟೋ ಒಯ್ಯಲು ಹರಸಾಹಸ

ಅಹ್ಮದಾಬಾದ್ ನ ಬಡಾವಣೆಯೊಂದರಲ್ಲಿ ಮಳೆಗೆ ರಸ್ತೆಯಲ್ಲಿ ನೀರು ತುಂಬಿಹೋಗಿದೆ. ನೀರಿನ ಮಧ್ಯೆ ಸಿಕ್ಕಿಕೊಂಡ ಆಟೋವೊಂದನ್ನು ತೆಗೆದುಕೊಂಡು ಹೋಗಲು ಹರಸಾಹಸ ಪಡುತ್ತಿರುವುದು.

ದಂಗಲ್ ಅಖಾಡ

ದಂಗಲ್ ಅಖಾಡ

ಜಬ್ಬಲ್ ಪುರ್ ನಲ್ಲಿ ನಾಗರಪಂಚಮಿಗೆ ಪೂರ್ವಭಾವಿಯಾಗಿ ದಂಗಲ್ ಅಖಾಡಕ್ಕೆ ಸಿದ್ಧವಾಗಿದ್ದ ಕುಸ್ತಿಪಟುಗಳು.

ಸ್ಮಾರಕ ಭವನದಲ್ಲೊಂದು ಅಚ್ಚರಿ

ಸ್ಮಾರಕ ಭವನದಲ್ಲೊಂದು ಅಚ್ಚರಿ

ತಮಿಳುನಾಡಿನ ರಾಮೇಶ್ವರಂನ ಪೈಕರುಂಬುನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ಮಾರಕಭವನದ ಉದ್ಘಾಟನೆ ವೇಳೆ ಕಲಾಂ ಅವರ ಕಲಾಕೃತಿಯೊಂದನ್ನು ಅಚ್ಚರಿಯಿಂದ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ.

ಮಾಧ್ಯಮದವರ ಜತೆ ಮಾತುಕತೆ

ಮಾಧ್ಯಮದವರ ಜತೆ ಮಾತುಕತೆ

ನವದೆಹಲಿಯ ಸಂಸತ್ ನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಧ್ಯಮದವರ ಮಾತನಾಡಿದರು.

ಸಿಟ್ಟು ತರಿಸಿದ ನಿತೀಶ್ ನಗು ಇದೇ ಇರಬಹುದಾ?

ಸಿಟ್ಟು ತರಿಸಿದ ನಿತೀಶ್ ನಗು ಇದೇ ಇರಬಹುದಾ?

ಬಿಹಾರದಲ್ಲಿ ಗುರುವಾರ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಹಾಡುಗಳ ಬಿಡುಗಡೆ

ಹಾಡುಗಳ ಬಿಡುಗಡೆ

ಮುಂಬೈನಲ್ಲಿ ನಡೆದ ಜಬ್ ಹ್ಯಾರಿ ಮೆಟ್ ಸೆಜಲ್ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ನಟ ಶಾರುಕ್ ಖಾನ್, ಅನುಷ್ಕಾ ಶರ್ಮಾ, ನಿರ್ದೇಶಕ ಇಮ್ತಿಯಾಜ್ ಆಲಿ ಕಾಣಿಸಿಕೊಂಡರು.

ವಿಕೆಟ್ ಪಡೆದ ಸಂಭ್ರಮ

ವಿಕೆಟ್ ಪಡೆದ ಸಂಭ್ರಮ

ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ದಿನ ಧನುಷ್ಕ್ ಗುಣತಿಲಕ ಅವರ ವಿಕೆಟ್ ಪಡೆದ ಮೊಹಮ್ಮದ್ ಶಮಿ ಸಂಭ್ರಮಿಸಿದ ಬಗೆ ಇದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat rain, Sharukh Khan new movie audio release, Bihar political drama and other event represent through PTI photos.
Please Wait while comments are loading...