Get Updates
Get notified of breaking news, exclusive insights, and must-see stories!

Himachal Pradesh Results 2022: ಕಾಂಗ್ರೆಸ್‌ಗೆ ನಿರ್ಣಾಯಕ ವಿಜಯ, ಜನರಿಗೆ ರಾಹುಲ್ ಗಾಂಧಿ ಧನ್ಯವಾದ

ಶಿಮ್ಲಾ, ಡಿಸೆಂಬರ್‌, 08: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022 ಮತ ಎಣಿಕೆ ನಡೆದಿದ್ದು, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಭಾರಿ ಮುನ್ನಡೆ ಸಾಧಿಸಿದೆ. ಇದೇ ಖುಷಿಯಲ್ಲಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, ಹಿಮಾಚಲ ಪ್ರದೇಶದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ಹಾಗೂ ನಿಮಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಶೀಘ್ರವಾಗಿ ಈಡೇರಿಸಲಾಗುವುದು ಎಂದು ಜನರಿಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಜನರ ಆಶೀರ್ವಾದ, ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ನಮ್ಮ ಪಕ್ಷ ಬಿಜೆಪಿ ವಿರುದ್ಧ ಭಾರಿ ಮುನ್ನಡೆ ಸಾಧಿಸಿದೆ. ನಾವು ಪಟ್ಟ ಪರಿಶ್ರಮಕ್ಕೆ ಇಂದು ಫಲ ಸಿಕ್ಕಂತಾಗಿದೆ. ಕಾಂಗ್ರೆಸ್‌ ಭಾರಿ ಮುನ್ನಡೆ ಸಾಧಿಸಲು ಕಾರಣರಾದ ನಿಮ್ಮೆಲ್ಲರಿಗೂ ಧನ್ಯವಾದ ಎಂದು ರಾಹುಲ್‌ ಗಾಂಧಿ ತಮ್ಮ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇನ್ನು ಹಿಮಚಲ ಪ್ರದೇಶದಲ್ಲಿ ಗೆದ್ದ ಅಭ್ಯರ್ಥಿಗಳನ್ನು ಬಜೆಪಿಯವರು ಎಲ್ಲಿ ತಮ್ಮತ್ತ ಸೆಳೆಯುತ್ತಾರೆಯೋ ಅನ್ನುವ ಚಿಂತೆ ಕಾಂಗ್ರೆಸ್‌ನಲ್ಲಿ ಕಾಡತೊಡಗಿದೆ. ಆದ್ದರಿಂದ ಮುಂಚೆಯೇ ಗೆದ್ದ ಅಭ್ಯರ್ಥಿಗಳಿಗೆ ರಾಜಸ್ಥಾನದ ಕಡೆಗೆ ಪ್ರಯಾಣ ಬೆಳೆಸುವಂತೆ ಕಾಂಗ್ರೆಸ್‌ ಸೂಚನೆ ನೀಡಿತ್ತು. ಇದೀಗ ಕಾಂಗ್ರೆಸ್‌ ಪಕ್ಷ ತಮ್ಮ ಅಭ್ಯರ್ಥಿಗಳನ್ನು ಉಳಿಸಿಕೊಳ್ಳಲು ಮುಂದಾಗಿದೆ.

ರಾಜ್ಯದಲ್ಲಿ ಸಮಸ್ಯೆಗಳ ಸರಮಾಲೆ

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯೊಳಗೆ ಸಮಸ್ಯೆಗಳ ಸರಮಾಲೆಗಳೇ ಕಂಡುಬಂದಿದ್ದವು. ನಂತರ ಗುಜರಾತ್‌ನಲ್ಲಿ ಪಕ್ಷವು ಭಿನ್ನವಾಗಿ ಬದಲಾವಣೆಗಳನ್ನು ಮಾಡಿತ್ತು. ಆಗಿನಿಂದ ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್ ಅವರನ್ನೇ ಸಿಎಂ ಆಗಿ ಉಳಿಸಿಕೊಂಡರು. ಜೈರಾಮ್ ಠಾಕೂರ್ ಅವರ ವಿರುದ್ಧ ಯಾವುದೇ ದೊಡ್ಡಮಟ್ಟದ ದೂರುಗಳು ದಾಖಲಾಗದಂತೆ ಬಿಜೆಪಿ ನಾಯಕರು ನೋಡಿಕೊಂಡಿದ್ದರು. ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಹಿಮಾಚಲ ಪ್ರದೇಶಕ್ಕೆ ಸೇರಿರುವುದರಿಂದ ರಾಜ್ಯ ನಾಯಕತ್ವದ ಮೇಲೆ ಹಿಡಿತ ಸಾಧಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮತ್ತು ರಾಜ್ಯ ನಾಯಕರ ಮೇಲೆ ಇದುವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ.

HP Results 2022: Rahul Gandhi thanks the people of Himachal Pradesh for the decisive victory

ಪ್ರಧಾನಿ ನರೇಂದ್ರ ಮೋದಿ ಪ್ಲಾನ್‌ ಉಲ್ಟಾ

ಇದೇ ವೇಳೆ ಪ್ರಚಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ರಾಜ್ಯದಲ್ಲಿನ ಮತದಾರರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳ ನಡುವೆ ವ್ಯತ್ಯಾಸಗಳ ಬಗ್ಗೆ ಗಮನಿಸಿದ್ದಾರೆ. ಜನರು ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪರವಾಗಿ ನಿಂತಿದ್ದರು. ಆದರೂ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಾಗ ರಾಜ್ಯದಲ್ಲಿ ನಾಯಕತ್ವದ ಕೊರತೆ ಎದ್ದು ಕಂಡಿದೆ. ಇದು ಬಿಜೆಪಿ ಹಿನ್ನೆಡೆಗೆ ಕಾರಣವಾಗಿದೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಪಕ್ಷವನ್ನು ನೋಡುವುದಾದರೆ, ಗುಜರಾತ್‌ಗಿಂತ ಹಿಮಾಚಲದಲ್ಲಿ ಪಕ್ಷವು ಹೆಚ್ಚು ಪ್ರಭಾವಶಾಲಿಯಾಗಿದೆ ಎನ್ನುವ ಮಾಹಿತಿ ಇತ್ತೀಚಿನ ವರದಿಗಳ ಮೂಲಕ ತಿಳಿದುಬಂದಿತ್ತು. ಆದರೆ ಗುಜರಾತ್‌ನಲ್ಲಿನ ಕಾಂಗ್ರೆಸ್‌ನ ಪ್ರಭಾವಶಾಲಿಯಲ್ಲಿ ಹಿಂದೆ ಉಳದಿದೆ. ಹಿಮಾಚಲದಲ್ಲಿ ಮಾತ್ರ ಕಾಂಗ್ರೆಸ್‌ ಗದ್ದುಗೆ ಏರಲು ಮೊದಲಿನಿಂದಲೂ ತಯಾರಿಗಳನ್ನು ನಡೆಸುತ್ತಲೇ ಬಂದಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅಲ್ಲಿನ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿದ್ದರು. ಹೀಗೆ ಜನರ ಸಮಸ್ಯೆಗಳ ಬಗ್ಗೆ ಆಲಿಸಿದ್ದು, ಪಕ್ಷ ಮುನ್ನಡೆ ಸಾಧಿಸಲು ಕಾರಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+