Railways: ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ: ಹೌರಾ ಬದಲು ಶಾಲಿಮಾರ್‌ಗೆ ಶಿಫ್ಟ್ ಆಯ್ತು ಮೈಸೂರು ಎಕ್ಸ್‌ಪ್ರೆಸ್
ಬೆಂಗಳೂರು: ಹಬ್ಬಗಳು ಎದುರಾಗುತ್ತಿದ್ದಂತೆ ನೈಋತ್ಯ ರೈಲ್ವೆ ವಲಯದಿಂದ ವಿಶೇಷ ರೈಲು, ಹೆಚ್ಚುವರಿ ಟ್ರಿಪ್ ರೈಲು ಸೇವೆ ನೀಡುತ್ತಲೇ ಬಂದಿದೆ. ಇದೀಗ ಹೌರಾ-ಮೈಸೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಟರ್ಮಿನಲ್ ಬದಲಾವಣೆ ಮಾಡಲಾಗಿದೆ. ಜೊತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಘಟಪ್ರಭಾ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ಪ್ರಾಯೋಗಿಕ ನಿಲುಗಡೆ ಮಾಡಲಾಗುತ್ತದೆ. ಯಾವೆಲ್ಲ ರೈಲುಗಳು ಇಲ್ಲಿ ನಿಲ್ಲಲಿವೆ ಎಂಬ ಮಾಹಿತಿ ಮುಂದಿದೆ.
ಮೊದಲಿಗೆ ಹೌರಾ-ಮೈಸೂರು-ಹೌರಾ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22817/22818) ಟರ್ಮಿನಲ್ ಅನ್ನು ಹೌರಾದಿಂದ ಶಾಲೀಮಾರ್‌ಗೆ ಬದಲಾಯಿಸಿರುವುದಾಗಿ ದಕ್ಷಿಣ ಪೂರ್ವ ರೈಲ್ವೆಯು ತಿಳಿಸಿದೆ.

ಶಾಲಿಮಾರ್‌ನಲ್ಲಿ ಪ್ರಯಾಣ ಕೊನೆ
ಹೌರಾ-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22817) ಅಕ್ಟೋಬರ್ 30 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಹೌರಾ ಬದಲಿಗೆ ಶಾಲೀಮಾರ್‌ನಿಂದ ಹೊರಡಲಿದೆ, ಹಾಗೆಯೇ ಮೈಸೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22818) ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಹೌರಾದ ಬದಲಿಗೆ ಶಾಲಿಮಾರ್‌ನಲ್ಲಿ ಪ್ರಯಾಣ ಕೊನೆಗೊಳಿಸಲಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಶಾಲೀಮಾರ್-ಮೈಸೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22817) ಹೌರಾದಿಂದ ಸಂಜೆ 4 ಗಂಟೆಗೆ ಹೊರಡುವ ಬದಲಿಗೆ ಶಾಲೀಮಾರ್‌ನಿಂದ 4:10 ಗಂಟೆಗೆ ಹೊರಡುತ್ತದೆ.
ಅದೇ ರೀತಿ ಮೈಸೂರು-ಶಾಲೀಮಾರ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22818) ಹೌರಾಗೆ ಬೆಳಗ್ಗೆ 11:10 ಗಂಟೆಗೆ ತಲುಪುವ ಬದಲಿಗೆ ಶಾಲೀಮಾರ್‌ಗೆ 10:40 ಗಂಟೆಗೆ ತಲುಪಲಿದೆ. ಮೈಸೂರು-ಸಂತ್ರಾಗಾಚಿ-ಮೈಸೂರು ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ
ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು (SWR) ಈ ಕೆಳಗಿನ ರೈಲುಗಳಿಗೆ ಘಟಪ್ರಭಾ ನಿಲ್ದಾಣದಲ್ಲಿ ಮುಂದಿನ ಸೂಚನೆ ಬರುವವರೆಗೂ ಪ್ರಾಯೋಗಿಕ ನಿಲುಗಡೆ ನೀಡಲು ನಿರ್ಧರಿಸಲಾಗಿದೆ.
* ಅಜೇರ್-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16531) ಆಗಸ್ಟ್ 24ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಘಟಪ್ರಭಾ ನಿಲ್ದಾಣಕ್ಕೆ ಬೆಳಗ್ಗೆ 08:28ಕ್ಕೆ ಆಗಮಿಸಿ, 08:30 ಇಲ್ಲಿಂದ ಹೊರಡುತ್ತದೆ.
* ಕೆಎಸ್‌ಆರ್ ಬೆಂಗಳೂರು-ಅಜೇರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16532) ಆಗಸ್ಟ್ 28ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಘಟಪ್ರಭಾ ನಿಲ್ದಾಣಕ್ಕೆ ಬೆಳಗ್ಗೆ 10:48 ಕ್ಕೆ ಆಗಮಿಸಿ ಅಲ್ಲಿಂದ ಮುಂದೆ 10:50 ಕ್ಕೆ ಪ್ರಯಾಣ ಬೆಳೆಸುತ್ತದೆ.
* ಅಜೇರ್-ಮೈಸೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16209) ಅಗಸ್ಟ್ 28ರಿಂದ ಪ್ರಯಾಣ ಆರಂಭಿಸುತ್ತದೆ. ಅಲ್ಲಿಂದ ಜಾರಿಗೆ ಬರುವಂತೆ ಘಟಪ್ರಭಾ ನಿಲ್ದಾಣಕ್ಕೆ ಬೆಳಗ್ಗೆ 08:28 ಗಂಟೆಗೆ ಆಗಮಿಸಿ 08:30 ಕ್ಕೆ ಹೊರುಡುತ್ತದೆ.
* ಮೈಸೂರು-ಅಜೇರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16210) ಆಗಸ್ಟ್ 25 ರಿಂದ ಆರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಘಟಪ್ರಭಾ ನಿಲ್ದಾಣಕ್ಕೆ ಬೆಳಗ್ಗೆ 10:48 ಗಂಟೆಗೆ ಬಂದು,10:50 ಕ್ಕೆ ನಿರ್ಗಮಿಸಲಿದೆ.
* ಗಾಂಧಿಧಾಮ್-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (20685) ಆಗಸ್ಟ್ 25 ರಿಂದ ಆರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಘಟಪ್ರಭಾ ನಿಲ್ದಾಣಕ್ಕೆ 08:28 ಕ್ಕೆ ಆಗಮಿಸಿ, 08:30ಕ್ಕೆ ನಿರ್ಗಮಿಸಲಿದೆ.
* ಕೆಎಸ್‌ಆರ್ ಬೆಂಗಳೂರು-ಗಾಂಧಿಧಾಮ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (20686) ಆಗಸ್ಟ್ 29ರಿಂದ ಆರಂಭವಾಗಲಿರುವ ಪ್ರಯಾಣದಿಂದ ಜಾರಿಗೆ ಬರುವಂತೆ ಘಟಪ್ರಭಾ ನಿಲ್ದಾಣಕ್ಕೆ 10:48 ಕ್ಕೆ ಆಗಮಿಸಿ, 10:50 ಕ್ಕೆ ನಿರ್ಗಮಿಸಲಿದೆ.
* ಜೋದ್‌ಪುರ-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16533) ಪ್ರಯಾಣ ಆಗಸ್ಟ್ 26 ರಿಂದ ಆರಂಭವಾಗಲಿದೆ. ಅಲ್ಲಿಂದ ಜಾರಿಗೆ ಬರುವಂತೆ ಘಟಪ್ರಭಾ ನಿಲ್ದಾಣಕ್ಕೆ 08:28 ಕ್ಕೆ ಬಂದು 08:30 ಗಂಟೆಗೆ ಹೋಗುತ್ತದೆ.
* ಕೆಎಸ್‌ಆರ್ ಬೆಂಗಳೂರು-ಜೋದ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16534) ಪ್ರಯಾಣ ಆಗಸ್ಟ್ 30ರಿಂದ ಆರಂಭವಾಗಲಿದ್ದು, ಈ ರೈಲು ಘಟಪ್ರಭಾ ನಿಲ್ದಾಣಕ್ಕೆ 10:48 ಕ್ಕೆ ಆಗಮಿಸಿ 10:50 ಕ್ಕೆ ಹೊರಡುತ್ತದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.


Click it and Unblock the Notifications
