ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ, ಆರೋಗ್ಯ ದಾಖಲೆಗಳಿಗೆ ಈಗ ಡಿಜಿಲಾಕರ್‌ ಸೌಲಭ್ಯ

|
Google Oneindia Kannada News

ನವದೆಹಲಿ, ನವೆಂಬರ್ 16: ಡಿಜಿಲಾಕರ್ ಬಳಕೆದಾರರು ಈಗ ಆಸ್ಪತ್ರೆ ಹಾಗೂ ಆರೋಗ್ಯ ದಾಖಲೆಗಳನ್ನು ಡಿಜಿಟಲ್‌ನಲ್ಲಿ ಸಂಗ್ರಹಿಸಬಹುದು ಮತ್ತು ಅವುಗಳನ್ನು 'ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ'ಗೆ ಲಿಂಕ್ ಮಾಡಿಕೊಂಡು ಡಿಜಿಟಲ್‌ ಪೇಪರ್‌ವರ್ಕ್‌ ಮೂಲಕ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಹೌದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಅಧಿಕೃತ ದಾಖಲೆ ವಿನಿಮಯ ವೇದಿಕೆಯಾದ ಡಿಜಿಲಾಕರ್ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ)ನೊಂದಿಗೆ 2ನೇ ಹಂತದ ಹೊಸ ಆಪ್‌ಡೇಟ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಈ ಸೇವೆಯನ್ನು ಸಾರ್ವಜನಿಕವಾಗಿ ಲಭ್ಯಗೊಳಿಸಲಾಗಿದೆ.

ರೈಲ್ವೆಯಲ್ಲಿ ಆಹಾರ ಖರೀದಿಗೆ ಡಿಜಿಟಲ್‌ ವಹಿವಾಟಿಗೆ ಉತ್ತೇಜನ ರೈಲ್ವೆಯಲ್ಲಿ ಆಹಾರ ಖರೀದಿಗೆ ಡಿಜಿಟಲ್‌ ವಹಿವಾಟಿಗೆ ಉತ್ತೇಜನ

ಇನ್ನು ಸಾರ್ವಜನಿಕವಾಗಿ ಬಳಕೆದಾರರು (ಡಿಜಿಲಾಕರ್) ಈಗ ಡಿಜಿಲಾಕರ್‌ನಲ್ಲಿ ವ್ಯಾಕ್ಸಿನೇಷನ್ ದಾಖಲೆಗಳು, ವೈದ್ಯರ ಪ್ರಿಸ್ಕ್ರಿಪ್ಷನ್‌ಗಳು, ಲ್ಯಾಬ್ ವರದಿಗಳು, ಆಸ್ಪತ್ರೆಯ ಡಿಸ್ಚಾರ್ಜ್ ಸಾರಾಂಶಗಳು ಮುಂತಾದ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಬಹುದು ಮತ್ತು ಪ್ರವೇಶಿಸಬಹುದು.

How to link health records with ABHA account using DigiLocker app

ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಯನ್ನು ಆಸ್ಪತ್ರೆಗಳಿಗೆ ಲಿಂಕ್‌ ಮಾಡಬಹುದು

ಡಿಜಿಲಾಕರ್ ಈ ಹಿಂದೆ ಎಬಿಡಿಎಮ್‌ (ABDM) ನೊಂದಿಗೆ ಲೆವೆಲ್ 1 ಏಕೀಕರಣವನ್ನು ಪೂರ್ಣಗೊಳಿಸಿತ್ತು. ಈ ಯೋಜನೆಯ ಪ್ಲಾಟ್‌ಫಾರ್ಮ್ ತನ್ನ 130 ಮಿಲಿಯನ್ ಬಳಕೆದಾರರಿಗೆ ಎಬಿಎಚ್‌ಎ(ABHA) ಅಥವಾ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ರಚನೆ ಸೌಲಭ್ಯವನ್ನು ಸೇರಿಸಲಾಯಿತು.

ಆದರೆ, ಇತ್ತೀಚಿನ ಏಕೀಕರಣವು ಈಗ ಡಿಜಿಲಾಕರ್ ವೈಯಕ್ತಿಕ ಆರೋಗ್ಯ ದಾಖಲೆ (PHR) ಅಪ್ಲಿಕೇಶನ್‌ನಂತೆ ಬಳಸಲು ಬಳಕೆದಾರರನ್ನು ಸಕ್ರಿಯಗೊಳಿಸುತ್ತದೆ. ಹೆಚ್ಚುವರಿಯಾಗಿ ಆಯುಷ್ಮಾನ್ ಭಾರತ್ ಹೆಲ್ತ್‌ ಅಕೌಂಟ್‌ (ABHA) ನಂಬರ್ ಹೊಂದಿರುವವರು ತಮ್ಮ ಆರೋಗ್ಯ ದಾಖಲೆಗಳನ್ನು ವಿವಿಧ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನೋಂದಾಯಿತ ಆರೋಗ್ಯ ಸೌಲಭ್ಯಗಳಾದ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಂದ ಲಿಂಕ್ ಮಾಡಬಹುದು ಮತ್ತು ಅವುಗಳನ್ನು ಡಿಜಿಲಾಕರ್ ಮೂಲಕ ಪ್ರವೇಶಿಸಬಹುದು.

How to link health records with ABHA account using DigiLocker app

ಬಳಕೆದಾರರು ತಮ್ಮ ಹಳೆಯ ಆರೋಗ್ಯ ದಾಖಲೆಗಳನ್ನು ಆ್ಯಪ್‌ನಲ್ಲಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬಹುದು. ಹೆಚ್ಚುವರಿಯಾಗಿ, ಅವರು ABDM ನೋಂದಾಯಿತ ಆರೋಗ್ಯ ವೃತ್ತಿಪರರೊಂದಿಗೆ ಆಯ್ದ ದಾಖಲೆಗಳನ್ನು ಹಂಚಿಕೊಳ್ಳಬಹುದು.

ಡಿಜಿಲಾಕರ್ ವೈಶಿಷ್ಟ್ಯಗಳು

*ಡಿಜಿಲಾಕರ್ ಆಧಾರ್ ಒದಗಿಸಿದ ದೃಢೀಕರಣ ಸೇವೆಗಳನ್ನು ಬಳಸುವುದರಿಂದ ಎಲ್ಲಾ ದಾಖಲೆಗಳಿಗೆ ಸುರಕ್ಷಿತ ಪ್ರವೇಶವನ್ನು ಒದಗಿಸುತ್ತದೆ.

*ಭೌತಿಕ ದಾಖಲೆಗಳನ್ನು ಸಾಗಿಸುವ ಅಗತ್ಯವಿಲ್ಲವಿರುವುದಿಲ್ಲ. ಡಿಜಿಲಾಕರ್ ಭಾರತೀಯ ನಿವಾಸಿಗಳಿಗೆ ಎಲ್ಲಾ ಸರ್ಕಾರಿ ಏಜೆನ್ಸಿಗಳಲ್ಲಿ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಇದರಿಂದಾಗಿ, ಎಲ್ಲಾ ಸಮಯದಲ್ಲೂ ಭೌತಿಕ ದಾಖಲೆಗಳನ್ನು ಸಾಗಿಸುವ ಅಗತ್ಯವನ್ನು ತೆಗೆದುಹಾಕುತ್ತದೆ.

*ಡಿಜಿಲಾಕರ್ ಪೇಪರ್‌ವರ್ಕ್‌ನ ಅಗತ್ಯವನ್ನು ಕಡಿಮೆ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ ಮತ್ತು ಸರ್ಕಾರಿ ಏಜೆನ್ಸಿಗಳಲ್ಲಿ ಸ್ವೀಕರಿಸಿದ ದಾಖಲೆಗಳನ್ನು ವಿಂಗಡಿಸುವಲ್ಲಿ ತೊಡಗಿರುವ ದೈಹಿಕ ಶ್ರಮವನ್ನು ಕಡಿಮೆ ಮಾಡುತ್ತದೆ.

English summary
The cloud-based storage platform DigiLocker has completed the second phase of integration with the Ayushman Bharat Digital Mission (ABDM).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X