Ration Card: ಈ ನಿಯಮ ಅಳವಡಿಸಿಕೊಂಡರೆ ರೇಷನ್ ಕಾರ್ಡ್ ಇಲ್ಲದೆ ಪಡಿತರ ಪಡೆಯಬಹದು
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದು ಪಡಿತರ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿದೆ. ಇನ್ನು ಇಷ್ಟು ದಿನ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪಡೆಯಲು ಕಡ್ಡಾಯವಾಗ ಕಾರ್ಡ್ ತೆಗೆದುಕೊಂಡು ಹೋಗಬೇಕಿತ್ತು. ಆದರೆ ಇದೀಗ ಈ ನಿಮ್ಮ ಮೊಬೈಲ್‌ನಲ್ಲಿ ಈ ಒಂದೇ ಒಂದು ಆಪ್ ಅಳವಡಿಸಿಕೊಂಡರೆ ಯಾವುದೇ ಕಾರ್ಡ್ ಒಯ್ಯದೆ ಪಡಿತರ ಪಡೆಯಬಹುದಾಗಿದೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.
ಭಾರತ ಸರ್ಕಾರವು ಫಲಾನುಭವಿಗಳಿಗೆ ಅನೂಕೂಲವಾಗವಂತೆ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ತಂದಿದೆ. ಈ ಮೂಲಕ ಫಲಾನುಭವಿಗಳಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ಇನ್ಮುಂದೆ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ರೇಷನ್ ಕಾರ್ಡ್ ಕೊಂಡೊಯ್ಯುವ ಅವಶ್ಯಕತೆ ಇಲ್ಲ. ಅತ್ಯಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರ ಮೇರಾ ರೇಷನ್ 2.0 ಎಂಬ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.

ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಫಲಾನುಭವಿಗಳು ತಮ್ಮ ಪಡಿತರವನ್ನು ಡಿಜಿಟಲ್ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್‌ನಲ್ಲಿ ಸಿಗಲಿದೆ. ಡೌನ್‌ಲೋಡ್ ಮಾಡಿದ ನಂತರ ಲಾಗಿನ್ ಆಗಿ. ಬಳಿಕ ಫಲಾನುಭವಿಯ ಡಿಜಿಟಲ್ ರೇಷನ್ ಕಾರ್ಡ್ ಅಪ್ಲಿಕೇಶನ್‌ನಲ್ಲಿ ಲಭ್ಯ ಆಗುತ್ತದೆ. ಈ ಕಾರ್ಡ್ ಅನ್ನು ಪಡಿತರ ಅಂಗಡಿಯವರಿಗೆ ತೋರಿಸಿ ಪಡಿತರ ಪಡೆಯಬಹುದಾಗಿದೆ.
ಈ ಹೊಸ ವ್ಯವಸ್ಥೆಯಿಂದ ಫಲಾನುಭವಿಗಳು ರೇಷನ್ ಕಾರ್ಡ್ ಕಳೆದುಕೊಂಡಿದ್ದರೂ ಅಥವಾ ಅದನ್ನು ಮನೆಯಲ್ಲಿ ಬಿಟ್ಟುಬಂದಿದ್ದರೂ ಪಡಿತರ ಪಡೆಯಲು ತುಂಬಾ ಸಹಾಯಕವಾಗಲಿದೆ. ಹಳೆಯ ಪದ್ಧಯತಿಲ್ಲಿ ಪಡಿತರ ಅಂಗಡಿಗೆ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ಈಗ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಮೇರಾ ರೇಷನ್ 2.0 ಅಪ್ಲಿಕೇಷನ್ ಮೂಲಕ ಈ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲಾಗಿದೆ.
ಈ ಹೊಸ ಅಪ್ಲಿಕೇಶನ್ ಪರಿಚಯದಿಂದ ಫಲಾನುಭವಿಗಳು ಹಳೆಯ ಪದ್ಧತಿಯ ಸಮಸ್ಯೆಗಳಿಂದ ಮುಕ್ತರಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸುಲಭವಾಗಿ ತಮ್ಮ ಪಡಿತರವನ್ನು ಪಡೆಯಬಹುದಾಗಿದೆ. ಇದು ಡಿಜಿಟಲ್ ಭಾರತ ದೃಷ್ಟಿಯಿಂದ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರೆ ತಪ್ಪಾಗಲಾರದು. ಹೊಸ ಪರಿಹಾರವು ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿ ಪರಿಣಾಮಕಾರಿಕತೆಯನ್ನು ಒಳಗೊಳ್ಳುವುದಲ್ಲದೆ, ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಎಲ್ಲಾರಿಗೂ ತಲುಪಿಸಲು ಸಹಕಾರಿ ಆಗಿದೆ.
ಮೇರಾ ರೇಷನ್ 2.0ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು ತ್ವರಿತವಾಗಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications