ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಬಂತು 542 ಕೋಟಿ: ಬಾಂಡ್ ಮೂಲಕ ಬೊಕ್ಕಸ ತುಂಬಿಸಿಕೊಂಡ ರಾಜಕೀಯ ಪಕ್ಷಗಳು!

|
Google Oneindia Kannada News

ನವದೆಹಲಿ, ನವೆಂಬರ್ 03: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಅಣಿಯಾಗುತ್ತಿದೆ. ರಾಜ್ಯ ಚುನಾವಣೆಗಳು ಎದುರಾಗುತ್ತಿರುವ ಬೆನ್ನಲ್ಲೇ ಪಕ್ಷಗಳ ನಿಧಿ ಸಂಗ್ರಹಣೆಯು ಜೋರಾಗಿ ನಡೆಯುತ್ತಿದೆ. ಈ ತಿಂಗಳ ಆರಂಭದಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟದ ಮೂಲಕ ಪಕ್ಷಗಳು 542.25 ಕೋಟಿ ರೂಪಾಯಿಗಳನ್ನು ಪಡೆದಿರುವುದು ವರದಿ ಮೂಲಕ ಗೊತ್ತಾಗಿದೆ.

ಕಳೆದ ಅಕ್ಟೋಬರ್ 1 ಮತ್ತು 10 ರ ನಡುವಿನ 22 ನೇ ಆವೃತ್ತಿಯ ಮಾರಾಟದ ಸಮಯದಲ್ಲಿ 545.25 ಕೋಟಿ ಮೌಲ್ಯದ 741 ಎಲೆಕ್ಟೋರಲ್ ಬಾಂಡ್‌ಗಳನ್ನು ಎಸ್‌ಬಿಐ ಮಾರಾಟ ಮಾಡಿದ್ದರೆ, ಪಕ್ಷಗಳು ನಿಗದಿತ ಅವಧಿಯಲ್ಲಿ 542.25 ಕೋಟಿ ಮೌಲ್ಯದ 738 ಬಾಂಡ್‌ಗಳನ್ನು ಪಡೆದುಕೊಂಡಿವೆ. ಇದೇ ವರ್ಷದ ಜುಲೈನ ಹಿಂದಿನ ಮಾರಾಟದಲ್ಲಿ 389.50 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟ ಮಾಡಲಾಗಿತ್ತು.

ಕಾಂಗ್ರೆಸ್ ಟಿಕೆಟ್ ಬೇಕೆಂದರೆ ಪಕ್ಷದ ಕಟ್ಟಡ ಕಾಮಗಾರಿಗೆ 2 ಲಕ್ಷ ರೂ. ಡೊನೇಷನ್ ಕಡ್ಡಾಯ!ಕಾಂಗ್ರೆಸ್ ಟಿಕೆಟ್ ಬೇಕೆಂದರೆ ಪಕ್ಷದ ಕಟ್ಟಡ ಕಾಮಗಾರಿಗೆ 2 ಲಕ್ಷ ರೂ. ಡೊನೇಷನ್ ಕಡ್ಡಾಯ!

2018 ರಿಂದ ಚುನಾವಣಾ ಬಾಂಡ್ ಅಸ್ತಿತ್ವಕ್ಕೆ ಬಂದ ನಂತರದಿಂದ ಇತ್ತೀಚಿನವು ಸೇರಿದಂತೆ 22 ಹಂತಗಳಲ್ಲಿ ಮಾರಾಟ ಮಾಡಲಾಗಿದೆ. ಈ ಸಮಯದಲ್ಲಿ 10,791.47 ಕೋಟಿ ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದ್ದು, 10,767.88 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿವೆ. ಅದೇ ರೀತಿ ನಗದೀಕರಿಸದ ಬಾಂಡ್‌ಗಳು 23.59 ಕೋಟಿ ರೂಪಾಯಿಗಳಾಗಿದ್ದು, ಅವುಗಳನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ.

ಯಾವ ಶಾಖೆಯಲ್ಲಿ ಅತಿಹೆಚ್ಚು ಬಾಂಡ್ ಮಾರಾಟ?

ಯಾವ ಶಾಖೆಯಲ್ಲಿ ಅತಿಹೆಚ್ಚು ಬಾಂಡ್ ಮಾರಾಟ?

ಸಾಮಾಜಿಕ ಕಾರ್ಯಕರ್ತ ಕಮೋಡೋರ್ ಲೋಕೇಶ್ ಬಾತ್ರಾ (ನಿವೃತ್ತ)ರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, ಹೈದರಾಬಾದ್ ಎಸ್ ಬಿಐ ಶಾಖೆಯು 117 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಿರುವುದೇ ಅತಿ ಹೆಚ್ಚಾಗಿದ್ದು, 115 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಿರುವ ಚೆನ್ನೈ ಶಾಖೆಯು ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಅದೇ ರೀತಿ ಗಾಂಧಿ ನಗರ ಶಾಖೆ 81.50 ಕೋಟಿ, ದೆಹಲಿ ಶಾಖೆ 75.70 ಕೋಟಿ, ಕೋಲ್ಕತ್ತಾ ಶಾಖೆ 76.10 ಕೋಟಿ, ಮುಂಬೈ ಶಾಖೆ 40.25 ಕೋಟಿ, ಜೈಪುರ ಶಾಖೆ 15.70 ಕೋಟಿ, ಚಂಡೀಗಢ ಶಾಖೆ 8 ಕೋಟಿ, ಲಕ್ನೋ ಶಾಖೆ 8 ಕೋಟಿ, ಲಕ್ನೋ ಶಾಖೆಯಲ್ಲಿ 8 ಕೋಟಿ ಹಾಗೂ ಬೆಂಗಳೂರು ಶಾಖೆಯಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳು ಮಾರಾಟವಾಗಿವೆ.

ಯಾವ ಶಾಖೆಯಲ್ಲಿ ಅತಿಹೆಚ್ಚು ಬಾಂಡ್ ವಿತ್ ಡ್ರಾ?

ಯಾವ ಶಾಖೆಯಲ್ಲಿ ಅತಿಹೆಚ್ಚು ಬಾಂಡ್ ವಿತ್ ಡ್ರಾ?

ಬಾಂಡ್‌ಗಳನ್ನು ನೀಡಿರುವ ಬ್ಯಾಂಕ್ ಶಾಖೆಯಲ್ಲಿ ಹೈದರಬಾದ್ ಶಾಖೆಯು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅದೇ ರೀತಿ ಅತಿ ಹೆಚ್ಚು ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿರುವ ಶಾಖೆ ಯಾವುದು ಎಂಬುದನ್ನು ಗಮನಿಸಿದಾಗ ದೆಹಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ದೆಹಲಿ ಶಾಖೆಯಲ್ಲಿ 285.15 ಕೋಟಿ ರೂ, ಕೋಲ್ಕತ್ತಾ ಶಾಖೆಯಲ್ಲಿ 143.10 ಕೋಟಿ ರೂ, ಮತ್ತು ಹೈದರಾಬಾದ್ ಶಾಖೆಯಲ್ಲಿ ರೂ. 67 ಕೋಟಿ ರೂ, ಗ್ಯಾಂಗ್ಟಾಕ್ ಶಾಖೆಯಲ್ಲಿ 2 ಕೋಟಿ ರೂ, ಚೆನ್ನೈ ಶಾಖೆಯಲ್ಲಿ 10 ಕೋಟಿ ರೂ, ಮತ್ತು ಭುವನೇಶ್ವರದ ಎಸ್‌ಬಿಐ ಶಾಖೆಯಲ್ಲಿ 35 ಕೋಟಿ ರೂಪಾಯಿ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಲಾಗಿದೆ.

25 ಖಾತೆಗಳನ್ನು ಓಪನ್ ಮಾಡಿದ್ದೇ ಬಾಂಡ್ ಎನ್‌ಕ್ಯಾಶ್ ಮಾಡಲು!

25 ಖಾತೆಗಳನ್ನು ಓಪನ್ ಮಾಡಿದ್ದೇ ಬಾಂಡ್ ಎನ್‌ಕ್ಯಾಶ್ ಮಾಡಲು!

ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡುವ ಉದ್ದೇಶಕ್ಕಾಗಿ 25 ರಾಜಕೀಯ ಪಕ್ಷಗಳು ತಮ್ಮ ಖಾತೆಯನ್ನು ತೆರೆದಿವೆ ಎಂದು ಎಸ್‌ಬಿಐ ಹೇಳಿದೆ. ಸರಿಯಾದ ಅನುಮೋದನೆಯನ್ನು ಪಡೆದ ನಂತರ ಶಾಖೆಗಳಲ್ಲಿ ಖಾತೆಗಳನ್ನು ತೆರೆಯಲಾಗುತ್ತಿದೆ ಎಂದು ಎಸ್‌ಬಿಐ ತಿಳಿಸಿದೆ. ಚುನಾವಣಾ ಬಾಂಡ್‌ಗಳ ಕಾನೂನುಬದ್ಧತೆಯ ಬಗ್ಗೆ ಪ್ರಶ್ನೆಗಳ ಮಧ್ಯೆ, ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದ ಹಣಕಾಸು ಕಾಯಿದೆ 2017 ರ ನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿಯನ್ನು ಡಿಸೆಂಬರ್ 6ರಂದು ಸುಪ್ರೀಂ ಕೋರ್ಟ್ ಮತ್ತಷ್ಟು ವಿಚಾರಣೆಗೆ ನಿಗದಿಪಡಿಸಿದೆ.

ಬಾಂಡ್ ಮಾರಾಟದಿಂದ ಹೆಚ್ಚುವರಿ ಕಮಿಷನ್ ಬಿಲ್

ಬಾಂಡ್ ಮಾರಾಟದಿಂದ ಹೆಚ್ಚುವರಿ ಕಮಿಷನ್ ಬಿಲ್

ಜುಲೈನಲ್ಲಿ ಹಿಂದಿನ ಆರ್‌ಟಿಐ ಪ್ರಕಾರ, ಜಿಎಸ್‌ಟಿ ಹೊರತುಪಡಿಸಿ ಎಸ್‌ಬಿಐ 25.44 ಲಕ್ಷ ರೂಪಾಯಿಗಳ ಕಮಿಷನ್ ಬಿಲ್ ಅನ್ನು ಪಡೆದುಕೊಂಡಿದೆ. 20ನೇ ಹಂತದ ಬಾಂಡ್ ಮಾರಾಟಕ್ಕೆ ಇನ್ನೂ 42.30 ಕೋಟಿ ರೂ.ಗಳನ್ನು ಪಡೆಯಬೇಕಿದೆ ಎಂದು ಹೇಳಿದೆ. ಎಸ್‌ಬಿಐ ಜಿಎಸ್‌ಟಿ ಜೊತೆಗೆ ಒಟ್ಟು ಬಾಕಿ ಇರುವ 67.74 ಕೋಟಿ ಕಮಿಷನ್ ಬಿಡುಗಡೆಗೆ ವ್ಯವಸ್ಥೆ ಮಾಡುವಂತೆ ಹಣಕಾಸು ಸಚಿವಾಲಯವನ್ನು ಕೇಳಿದೆ.

ಏಪ್ರಿಲ್ 1 ಮತ್ತು 10ರ ನಡುವಿನ ಬಾಂಡ್ ಮಾರಾಟದ 20ನೇ ಆವೃತ್ತಿಯಲ್ಲಿ, 648.48 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ. ಅದನ್ನು ಪಕ್ಷಗಳು ಸಂಪೂರ್ಣವಾಗಿ ಪಡೆದುಕೊಂಡಿದ್ದು ಆಗಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ಜನವರಿ 1 ಮತ್ತು 10ರ ನಡುವಿನ ಬಾಂಡ್ ಮಾರಾಟದ 19ನೇ ಆವೃತ್ತಿಯಲ್ಲಿ 1,213.26 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಪೈಕಿ 40 ಲಕ್ಷ ರೂ ಮೌಲ್ಯದ ಬಾಂಡ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಬಾಂಡ್ ಅನ್ನು ಪಕ್ಷಗಳು ಎನ್‌ಕ್ಯಾಶ್ ಮಾಡಿಕೊಂಡಿದ್ದವು.

ಆದಾಯ ಹೆಚ್ಚಿಸಿಕೊಂಡ ಬಿಜೆಪಿ!

ಆದಾಯ ಹೆಚ್ಚಿಸಿಕೊಂಡ ಬಿಜೆಪಿ!

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 2019-20ರಲ್ಲಿ ನಾಲ್ಕು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎನ್‌ಸಿಪಿ ಮತ್ತು 14 ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಚುನಾವಣಾ ಬಾಂಡ್‌ಗಳ ಮೂಲಕ 3,441.31 ಕೋಟಿ ರೂಪಾಯಿಗಳನ್ನು ಗಳಿಸಿವೆ ಎಂದು ವರದಿ ಮಾಡಿದೆ.

ಎಡಿಆರ್ ಪ್ರಕಾರ, ನಾಲ್ಕು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ಶೇಕಡಾ 62.92ರಷ್ಟು ಅಂದರೆ 2,993.82 ಕೋಟಿ ರೂಪಾಯಿ ಹಣವು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯಿಂದಲೇ ಸಂಗ್ರಹವಾಗಿದೆ. 2019-20ರಲ್ಲಿ ಆಡಳಿತಾರೂಢ ಬಿಜೆಪಿಯ ಆದಾಯವು ಶೇ.50.34 ರಷ್ಟು ಏರಿಕೆಯಾಗಿದ್ದು, 3,623.28 ಕೋಟಿ ರೂ.ಗೆ ತಲುಪಿದೆ. ಇದೇ ಅವಧಿಯಲ್ಲಿ ಇತರ ಮೂರು ರಾಷ್ಟ್ರೀಯ ಪಕ್ಷಗಳು ಸಿಪಿಐ(ಎಂ), ಸಿಪಿಐ ಮತ್ತು ಬಿಎಸ್‌ಪಿಗಳು ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಗೊತ್ತಾಗಿದೆ.

English summary
How Political Parties raised 542 crore via electoral bonds ahead of state assembly elections; read here to know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X