• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರುಚಿಕರ ಮ್ಯಾಗಿ ತಿಂದ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ?

By ಆಫ್ ಸ್ಟಂಪ್ಡ್
|

ಬೆಂಗಳೂರು, ಜೂ. 04 : ವರ್ಷಾನುಗಟ್ಟಲೆ ಸವಿಯುತ್ತಿರುವ ಮ್ಯಾಗಿ ನೂಡಲ್ಸ್ ತಿಂದ ಲಕ್ಷಾಂತರ ಜನರಲ್ಲಿ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ? ಮ್ಯಾಗಿ ನೂಡಲ್ಸ್ ತಿಂದದ್ದರಿಂದಲೇ ಆರೋಗ್ಯ ಹದಗೆಟ್ಟಿದೆ ಅಂತ ಎಷ್ಟು ದೂರುಗಳು ದಾಖಲಾಗಿವೆ? ಅಧಿಕಾರಿಗಳು ದೂರುತ್ತಿದ್ದಾರೆಯೇ ಹೊರತು ತಿನ್ನುತ್ತಿರುವವರು ಯಾಕೆ ದೂರು ನೀಡಿಲ್ಲ?

ಚಿಕ್ಕವರಿಂದ ಮುದುಕರವರೆಗೆ ಎಲ್ಲರಿಗೂ ನಾಲಿಗೆಗೆ ವಿಶಿಷ್ಟ ರುಚಿ ಹತ್ತಿಸಿರುವ, 'ಎರಡೇ ನಿಮಿಷ'ಗಳಲ್ಲಿ ತಯಾರಾಗುವ ಮ್ಯಾಗಿಯ ಕುರಿತು ಈ ಪ್ರಶ್ನೆಗಳಿಗೆ ನಿಖರವಾದ ಉತ್ತರ ದಕ್ಕಿಸಿಕೊಳ್ಳುವುದು ಬಲು ಕಷ್ಟ. ಮ್ಯಾಗಿಯಲ್ಲಿ ಪೌಷ್ಟಿಕಾಂಶವಿದೆ ಅಂತನೂ ಯಾರೂ ಹುಡುಕುವುದಿಲ್ಲ, ಅದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ ಎಂದು ಕೂಡ ಇಲ್ಲಿಯವರೆಗೆ ಯಾರೂ ಚಿಂತಿಸಿರಲಿಲ್ಲ.

ಎರಡೇ ನಿಮಿಷಗಳಲ್ಲಿ ತಯಾರಾಗುವ 'ಆರೋಗ್ಯಕರ ಆಹಾರ' ಮ್ಯಾಗಿ ನೂಡಲ್ಸ್ ಅನಾರೋಗ್ಯಕರ ಅಂತ ವಿವಾದ ಹುಟ್ಟಿಕೊಂಡಿದ್ದರಿಂದ, ಮ್ಯಾಗಿಯಲ್ಲಿ ಆರೋಗ್ಯ ಕೆಡಿಸುವ ಪದಾರ್ಥಗಳಿವೆ ಅಂತ ನಿಮಗೆ ಈಗ ಅರಿವಾಗಿದ್ದರೆ ಅದು ನಿಮ್ಮ ತಪ್ಪೇ ಹೊರತು ಬ್ರಾಂಡಿನದಲ್ಲ. ಮ್ಯಾಕ್ ಡೊನಾಲ್ಡ್ ಬರ್ಗರ್, ಕೆಎಫ್‌ಸಿ ಚಿಕನ್ ಅಥವಾ ಕೋಕಾಕೋಲಾದಂತೆ ಮ್ಯಾಗಿ ಕೂಡ ಪ್ರಶ್ನಾರ್ಹವೇ. ಆದರೆ, ಈ ಪರಿ ಇಡೀ ದೇಶ ತಿರುಗಿಬಿದ್ದಿರಲಿಲ್ಲ. [ಮ್ಯಾಗಿ ತಿನ್ನದಂತೆ ಸೈನಿಕರಿಗೆ ಎಚ್ಚರಿಕೆ!]

ರಾತ್ರೋರಾತ್ರಿ ಮ್ಯಾಗಿ ವಿಷಕಾರಿಯಾಯಿತೆ?

ಇದು ಇಂದು ನಿನ್ನೆಯದಲ್ಲ. 2014ರಲ್ಲೇ ಹದಿನೈದು ತಿಂಗಳ ಹಿಂದೆ ಉತ್ತರಪ್ರದೇಶದ ಆಹಾರ ಅಧಿಕಾರಿಯೊಬ್ಬರು ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಿದ್ದರು. ಅದರಲ್ಲಿ ಮೊನೊಸೋಡಿಯಂ ಗ್ಲುಟಮೇಟ್ ಮತ್ತು ಅಧಿಕ ಸೀಸ ಕಂಡುಬಂದಿತ್ತು. ನೆಸ್ಲೆ ಪ್ರತಿರೋಧ ಒಡ್ಡಿದ್ದರಿಂದ ಮ್ಯಾಗಿ ಸ್ಯಾಂಪಲ್ ಅನ್ನು ಕೋಲ್ಕತಾದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಎಂಎಸ್‌ಜಿ ಮತ್ತು ಸೀಸ್ ಅತ್ಯಧಿಕ ಇರುವುದು ಪತ್ತೆಯಾಗಿತ್ತು. ಆದರೆ, ಇದನ್ನೆಲ್ಲ ಕಂಡುಕೊಳ್ಳಲು ಒಂದೂವರೆ ವರ್ಷ ಏಕೆ ಬೇಕಾಯಿತು? [ವಿವಾದದ ಬಗ್ಗೆ ಟ್ವಿಟ್ಟಿಗರು ಏನನ್ನುತ್ತಾರೆ?]

ಏನಿದು ಎಂಎಸ್‌ಜಿ? ಅದು ಅಷ್ಟೊಂದು ಹಾನಿಕರವೆ?

ಮೊನೊಸೋಡಿಯಂ ಗ್ಲುಟಮೇಲ್ ಟೊಮೆಟೊ, ಗಿಣ್ಣು, ಮಶ್ರೂಮ್ ಮತ್ತಿತರ ಹಣ್ಣು ಮತ್ತು ತರಕಾರಿಗಳಲ್ಲಿ ಸ್ವಾಭಾವಿಕವಾಗಿ ಇರುವಂಥ ಅಮೈನೋ ಆಮ್ಲ. ರುಚಿಯನ್ನು ಹೆಚ್ಚಿಸುವಂಥ ಒಂದು ಪದಾರ್ಥ. ವರದಿಯ ಪ್ರಕಾರ, ಎಂಎಸ್‌ಜಿ ನಮ್ಮ ನರಕೋಶವನ್ನು ಉತ್ತೇಜಿಸಿ ನಾವು ತಿನ್ನುವ ಆಹಾರ ರುಚಿಕರವಾಗುವಂತೆ ಮಾಡುತ್ತದೆ. ಭಾರತದಲ್ಲಿ ತಯಾರಿಸಲಾಗುವ ಚೈನೀಸ್ ಆಹಾರದಲ್ಲಿ ಇದನ್ನು ಅಧಿಕವಾಗಿ ಬಳಸುತ್ತಾರೆ. [ನನಗೂ ಮ್ಯಾಗಿಗೂ ಸಂಬಂಧವಿಲ್ಲ : ಬಚ್ಚನ್]

ಇನ್ನು, ಸೀಸ ಎಷ್ಟು ಅನಾರೋಗ್ಯಕರ?

ಸೀಸ ಅತ್ಯಧಿಕ ಪ್ರಮಾಣದಲ್ಲಿದ್ದರೆ ಯಕೃತ್ತು, ಕರುಳು ಮುಂತಾದ ಅವಯವಗಳಿಗೆ ಹಾನಿಯುಂಟು ಮಾಡಬಲ್ಲದು ಎಂದು ಅಭಿಪ್ರಾಯ ತಿಳಿಸಿದ್ದಾರೆ ಉತ್ತರಪ್ರದೇಶದ ಎಫ್ಎಸ್‌ಡಿಎದ ಸಹಾಯಕ ಆಯುಕ್ತ (ಆಹಾರ ಸುರಕ್ಷತೆ) ಆಗಿರುವ ವಿಜಯ್ ಬಹಾದ್ದೂರ್. ಗಿರೀಶ್ ಶಹಾನೆ ಎಂಬುವವರು, ಮ್ಯಾಗಿಯಲ್ಲಿ ಅಷ್ಟೇ ಏಕೆ, ಆಯುರ್ವೇದದ ಅನೇಕ ಔಷಧಿಗಳಲ್ಲಿ ಸೀಸದ ಪ್ರಮಾಣ ಅಧಿಕವಾಗಿದೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ.

ಮ್ಯಾಗಿ ವಿರುದ್ಧದ ಯುದ್ಧ ಸದ್ಯಕ್ಕೆ ಅನಿಶ್ಚಿತತೆಯಲ್ಲಿದೆ. ದೆಹಲಿ ಸರಕಾರ ಹದಿನೈದು ದಿನಗಳ ಕಾಲ ಮ್ಯಾಗಿ ಮಾರಾಟವನ್ನು ನಿಷೇಧಿಸಿದ್ದರೆ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಮ್ಯಾಗಿಯಲ್ಲಿ ವಿಷಯುಕ್ತ ಅಂಶಗಳಿಲ್ಲ ಅಂತ ಷರಾ ಬರೆದಿದೆ. ಇನ್ನು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಮ್ಯಾಗಿಯನ್ನು ಪರೀಕ್ಷೆಗೊಡ್ಡಿವೆ. ಮ್ಯಾಗಿ ಸುತ್ತಮುತ್ತ ಉದ್ಭವಿಸಿರುವ ಈ ವಿವಾದದ ಕುರಿತು ಇಲ್ಲಿ ಮತ್ತಷ್ಟು ಮಾಹಿತಿ ಪಡೆಯಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How many have fallen sick after eating Maggi? How many people have complained against Maggi, tasty and favorite instant food of lakhs of people? Is it possible to find accurate answers to these questions? Then why so much furore about this food?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more