ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿನ ಸಗಣಿ, ಗೋಮೂತ್ರದಿಂದ ಗುಣಮುಖವಾಗುತ್ತದೆಯೇ ಕೊರೊನಾವೈರಸ್?

|
Google Oneindia Kannada News

ಕೋಲ್ಕತ್ತಾ, ಆಗಸ್ಟ್.13: ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಹಸುವಿನ ಸಗಣಿ ಮತ್ತು ಗೋಮೂತ್ರವೇ ಮದ್ದು ಎನ್ನುವುದು ಎಲ್ಲಿಯೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ಮೇಘಾಲಯ ರಾಜ್ಯಪಾಲ ತಥಾಗತ್ ರಾಯ್ ಅವರು ಸ್ಪಷ್ಟಪಡಿಸಿದ್ದಾರೆ.

Recommended Video

Corona vaccine ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ | Oneindia Kannada

ಗೋವಿನ ಸಗಣಿ ಮತ್ತು ಗೋಮೂತ್ರವನ್ನು ಕೊವಿಡ್-19 ಸೋಂಕಿತರು ಬಳಸಬೇಕು ಎನ್ನುವ ಬಗ್ಗೆ ಪ್ರಚಾರವನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ. 'ದಿ ಪ್ರಿಂಟ್' ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಥಾಗತ್ ರಾಯ್ ಮಾತನಾಡಿದ್ದಾರೆ.

'ಅಂತಿಮ ಪ್ರಯೋಗಕ್ಕೂ ಮುನ್ನವೇ ರಷ್ಯಾದ ಕೊರೊನಾ ಲಸಿಕೆಗೆ ಅನುಮೋದನೆ''ಅಂತಿಮ ಪ್ರಯೋಗಕ್ಕೂ ಮುನ್ನವೇ ರಷ್ಯಾದ ಕೊರೊನಾ ಲಸಿಕೆಗೆ ಅನುಮೋದನೆ'

ಜಾಧವಪುರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ 74 ವರ್ಷದ ತಥಾಗತ್ ರಾಯ್, ಮೇಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಬಿಜೆಪಿಯವರು ಗೋವಿನ ಸಗಣಿ ಮತ್ತು ಗೋಮೂತ್ರದ ಬಗ್ಗೆ ಅನಗತ್ಯ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕೆಲವು ನಾಯಕರಿಂದ ಅಮಾನವೀಯ ವಿಚಾರಕ್ಕೆ ಪ್ರಚಾರ

ಕೆಲವು ನಾಯಕರಿಂದ ಅಮಾನವೀಯ ವಿಚಾರಕ್ಕೆ ಪ್ರಚಾರ

ಕೊರೊನಾವೈರಸ್ ಸೋಂಕಿತರು ಗೋವಿನ ಮೂತ್ರ ಮತ್ತು ಸಗಣಿಯನ್ನು ಸೇವಿಸುವುದರಿಂದ ಸೋಂಕು ನಿವಾರಣೆ ಆಗುತ್ತದೆ ಎಂದು ಕೆಲವು ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಈ ವಿಚಾರವನ್ನು ಕೇಳಿ ಮನಸಿಗೆ ತುಂಬ ಬೇಸರ ಹಾಗೂ ನೋವುಂಟಾಗುತ್ತದೆ. ಈ ರೀತಿ ಅಮಾನವೀಯ ವಿಚಾರವನ್ನು ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಹಸುವಿನ ಹಾಲಿನಲ್ಲಿ ಚಿನ್ನ ಸಿಗುತ್ತದೆ ಎಂದು ಪ್ರಸ್ತಾಪಿಸುವಂತಹ ಈ ಎಲ್ಲಾ ಹೇಳಿಕೆಗಳು ಪಕ್ಷವನ್ನು ನಗಿಸುವ ಸಂಗತಿಯಾಗಿದೆ ಎಂದು ರಾಜ್ಯಪಾಲ ತಘಾಗತ್ ರಾಯ್ ತಿಳಿಸಿದ್ದಾರೆ.

ಕೊವಿಡ್-19ಗೆ ಗೋಮೂತ್ರ, ಗೋವಿನ ಸಗಣಿ ಮದ್ದು

ಕೊವಿಡ್-19ಗೆ ಗೋಮೂತ್ರ, ಗೋವಿನ ಸಗಣಿ ಮದ್ದು

ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಸಾರ್ವಜನಿಕವಾಗಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದರು. ಗೋವಿನ ಮೂತ್ರ ಮತ್ತು ಸಗಣಿಯಿಂದಾಗಿ ಒಬ್ಬ ಕೊರೊನಾವೈರಸ್ ಸೋಂಕಿತನು ಗುಣಮುಖನಾಗಿರುವ ಬಗ್ಗೆ ಹೇಳಿಕೆ ನೀಡುತ್ತಾರೆ. ಅಲ್ಲದೇ ಕಳೆದ ಗೋವಿನ ಹಾಲಿನಲ್ಲಿ ಚಿನ್ನ ಸಿಗುತ್ತದೆ ಎಂಬ ರೀತಿಯಾದ ಹೇಳಿಕೆಗಳನ್ನು ನೀಡಿದ್ದು, ನಗು ಹುಟ್ಟಿಸುವಂತಿದೆ. ಗೋವಿನ ಕುರಿತು ಈ ರೀತಿಯ ಪ್ರಚಾರ ಮಾಡುತ್ತಿರುವುದು ವೈಯಕ್ತಿಕವಾಗಿ ಮನಸಿಗೆ ತುಂಬಾ ನೋವು ತರಿಸುತ್ತದೆ ಎಂದು ತಥಾಗತ್ ರಾಯ್ ತಿಳಿಸಿದ್ದಾರೆ.

ರಾಜಕೀಯ ಸಿದ್ದಾಂತದಿಂದ ಕಮ್ಯುನಿಸ್ಟ್ ಹಿಂಸಾಚಾರ

ರಾಜಕೀಯ ಸಿದ್ದಾಂತದಿಂದ ಕಮ್ಯುನಿಸ್ಟ್ ಹಿಂಸಾಚಾರ

ಗೋವಿನ ಕುರಿತು ನಡೆಸುತ್ತಿರುವ ಈಗಿನ ಅಭಿಯಾನವು ನನಗೆ ವೈಯಕ್ತಿಕ ತುಂಬಾ ನೋವು ಮತ್ತು ಅವಮಾನ ಉಂಟುಮಾಡಿದೆ. ನಾನು ಟ್ವಿಟರ್ ನಲ್ಲಿ ಸಕ್ರಿಯನಾಗಿದ್ದು, ರಾಜಕೀಯ ಸಿದ್ಧಾಂತ ಮತ್ತು ಅವಲೋಕನಗಳ ಬಗ್ಗೆ ಪ್ರತಿಕ್ರಿಯಿಸುತ್ತಿದ್ದೇನೆ. ಈ ಹಿಂದೆ ಕಮ್ಯುನಿಸ್ಟ್ ಹಿಂಸಾಚಾರಗಳು ಪಶ್ಚಿಮ ಬಂಗಾಳ ಸೇರಿದಂತೆ ರಾಜ್ಯಗಳಲ್ಲಿ ಹೇಗೆ ವಿಪತ್ತು ಸೃಷ್ಟಿಸಿದವು ಎಂಬುದರ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದೇನೆ ಎಂದು ತಥಾಗತ್ ರಾಯ್ ತಿಳಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಕೆಟ್ಟ ಭಾಷೆಯಲ್ಲಿ ತಮ್ಮ ಮೇಲೆ ದಾಳಿ

ಸಾಮಾಜಿಕ ತಾಣದಲ್ಲಿ ಕೆಟ್ಟ ಭಾಷೆಯಲ್ಲಿ ತಮ್ಮ ಮೇಲೆ ದಾಳಿ

ಕೆಲವು ದಿನಗಳ ಹಿಂದೆ, ನಾನು ಯುರೋಪಿಯನ್ ನ್ಯೂರೋಲಾಜಿಕಲ್ ಜರ್ನಲ್‌ನಲ್ಲಿ ಕಂಡುಕೊಂಡ ಸಂಶೋಧನೆಯ ಲಿಂಕ್ ಒಂದನ್ನು ಶೇರ್ ಮಾಡಿದ್ದೆನು. ಅದರಲ್ಲಿ ಲೆನಿನ್ ಸಿಫಿಲಿಸ್ ‌ನಿಂದ ಮೃತಪಟ್ಟಿರುವ ಬಗ್ಗೆ ಉಲ್ಲೇಖಿಸಿತ್ತು. ಇದನ್ನು ಒಪ್ಪಿಕೊಳ್ಳಲಾಗದೇ ಕೆಲವರು ನನ್ನ ಮೇಲೆ ಕೆಟ್ಟ ಭಾಷೆಯಿಂದ ದಾಳಿ ಮಾಡಿದರು. ಹಸುವಿನ ಸಗಣಿ ಸೇವಿಸುವುದು ಮತ್ತು ಗೋಮೂತ್ರ ಕುಡಿಯುವಂತೆ ನನಗೆ ಹೇಳಿದ್ದರು. ಈ ಅಸಂಬದ್ಧತೆಯನ್ನು ನಾನು ಏಕೆ ಸಹಿಸಿಕೊಳ್ಳಬೇಕು? ಈ ನಿರ್ದಿಷ್ಟ ವಿಷಯ ನನಗೆ ಅಪಾರ ನೋವನ್ನುಂಟು ಮಾಡಿತು ಎಂದು ತಥಾಗತ್ ರಾಯ್ ತಿಳಿಸಿದರು.

English summary
How Cow Dung And Urine Cures Coronavirus: Meghalaya Governor Tathagata Roy Questioned To Promoters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X