ಉತ್ತರ ಪ್ರದೇಶದಲ್ಲಿ ಬಿಜೆಪಿ ನಿರುತ್ತರ, ಧೂಳಿಂದ ಮೇಲೆದ್ದ ಎಸ್ ಪಿ

Posted By:
Subscribe to Oneindia Kannada

ಇದು ಖಂಡಿತವಾಗಿಯೂ ಎಚ್ಚರಿಕೆಯ ಗಂಟೆ. ಉತ್ತರಪ್ರದೇಶದ ಗೋರಖ್ ಪುರ ಹಾಗೂ ಫುಲ್ ಪುರ್ ನ ಲೋಕಸಭಾ ಸ್ಥಾನಗಳಿಗೆ ಬುಧವಾರ ನಡೆಯುತ್ತಿರುವ ಉಪ ಚುನಾವಣೆಯ ಮತ ಎಣಿಕೆಯು ಖಂಡಿತವಾಗಿಯೂ ಕೇಸರಿ ಪಕ್ಷಕ್ಕೆ ಆತಂಕ ಆಗಬೇಕಾದಂಥದ್ದು.

ಏಕೆಂದರೆ, ಗೋರಖ್ ಪುರ ಲೋಕಸಭೆ ಕ್ಷೇತ್ರದಿಂದ ಸತತ ಐದು ಬಾರಿಗೆ ಸಂಸದರಾಗಿ ಆಯ್ಕೆ ಆಗಿದ್ದರು ಯೋಗಿ ಆದಿತ್ಯನಾಥ್. ಈಗ ಸ್ವತಃ ಯೋಗಿ ಆದಿತ್ಯನಾಥ್ ಅವರೇ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದಾರೆ. ಮುಂಚಿಗಿಂತಲೂ ಹೆಚ್ಚು ಪ್ರಬಲ ಎಂದೇ ಅಂದುಕೊಂಡರೂ ಆ ಕ್ಷೇತ್ರದಲ್ಲೇ ಈಗ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.

ಉ.ಪ್ರ. ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಎಸ್ ಪಿ ಮುನ್ನಡೆ, ಗದ್ದಲ

ಇನ್ನು ಫುಲ್ ಪುರ್ ನಲ್ಲಿ ಕೂಡ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆಯಲ್ಲಿದ್ದು, ಬಿಜೆಪಿಯ ಕೇಶವ ಪ್ರಸಾದ್ ಮೌರ್ಯ ಅಲ್ಲಿಂದ ಜಯಿಸಿದ್ದರು. ಎರಡೂ ಸ್ಥಾನಗಳು ತೆರವಾಗಿದ್ದರಿಂದ ಉಪ ಚುನಾವಣೆ ನಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಭಾರೀ ಅಂತರದಿಂದಲೇ ಜಯಿಸಿದ್ದರು. ಆದರೆ ಈಗಿನ ಉಪಚುನಾವಣೆ ಫಲಿತಾಂಶ ಉಲ್ಟಾ ಹೊಡೆದಿದೆ.

How BJP struggling in Uttar Pradesh LS by polls?

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಳೆದ ಲೋಕಸಭಾ ಚುನಾವಣೆ ವೇಳೆ ಎರಡೂ ಕ್ಷೇತ್ರಗಳಲ್ಲಿ ಬಂದಿದ್ದ ಫಲಿತಾಂಶದ ವಿವರ ಇಲ್ಲಿದೆ.

ಗೋರಖ್ ಪುರ ಲೋಕಸಭಾ ಕ್ಷೇತ್ರ
ಬಿಜೆಪಿ: 5,39,127
ಸಮಾಜವಾದಿ ಪಕ್ಷ : 2,26,344
ಬಹುಜನ ಸಮಾಜ ಪಕ್ಷ :176412
ಕಾಂಗ್ರೆಸ್: 45719

ಫುಲ್ ಪುರ್ ಲೋಕಸಭಾ ಕ್ಷೇತ್ರ
ಬಿಜೆಪಿ: 5,03,564
ಸಮಾಜವಾದಿ ಪಕ್ಷ : 1,95,256
ಬಹುಜನ ಸಮಾಜ ಪಕ್ಷ : 1,63,710
ಕಾಂಗ್ರೆಸ್: 58,127

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How BJP struggling in Uttar Pradesh LS by polls? Here is the comparison with 2014 LS polls. Gorakhpur and Phulpur LS constituency both won by BJP with more than 3 lakh votes. But, in by polls saffron party is trailing in vote counting.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ