ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರ್ಮು ರಾಷ್ಟ್ರಪತಿಯಾದರೆ ಒಂದೇ ಕಲ್ಲಿನಲ್ಲಿ ಮೂರುಹಕ್ಕಿ ಹೊಡೆಯಬಹುದೇ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ. ಜೂನ್ 13: ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗೆ ಇನ್ನು ಒಂದೂವರೆ ತಿಂಗಳಿನಲ್ಲಿ ಉತ್ತರ ದೊರೆಯಲಿದೆ. ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಇದೀಗ ಬಿರುಸಿನ ಚಟುವಟಿಕೆ ಆರಂಭವಾಗಿದ್ದು. ಆಡಳಿತ ಪಕ್ಷ ಬಿಜೆಪಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂಬುದು ಈಗಲೂ ಕಗ್ಗಂಟಾಗಿಯೇ ಉಳಿದಿದೆ.

ರಾಷ್ಟ್ರಪತಿ ಚುನಾವಣೆ: ಶಿವಸೇನೆ ಸತತ ಮೂರನೇ ಬಾರಿ ಬಿಜೆಪಿಗೆ ಕೈಕೊಡುತ್ತಾ?ರಾಷ್ಟ್ರಪತಿ ಚುನಾವಣೆ: ಶಿವಸೇನೆ ಸತತ ಮೂರನೇ ಬಾರಿ ಬಿಜೆಪಿಗೆ ಕೈಕೊಡುತ್ತಾ?

ಹಲವು ಪ್ರಮುಖರ ಹೆಸರು ಬಿಜೆಪಿ ಪಾಳೇಯದಲ್ಲಿ ಕೇಳಿಬರುತ್ತಿದ್ದರೂ, ಯಾವಾಗಲೂ ಅಚ್ಚರಿ ನೀಡುವುದರಲ್ಲಿ ನಿಸ್ಸೀಮರಾದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ಅನಿರೀಕ್ಷಿತ ಅಭ್ಯರ್ಥಿಯನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸಬಹುದು ಎಂಬುದು ಹಲವರ ಊಹೆ.

ಮುಂದಿನ ರಾಷ್ಟ್ರಪತಿ: ಬಿಜೆಪಿ ಪಟ್ಟಿಯಲ್ಲಿ ನಾಲ್ಕು ಹೆಸರುಮುಂದಿನ ರಾಷ್ಟ್ರಪತಿ: ಬಿಜೆಪಿ ಪಟ್ಟಿಯಲ್ಲಿ ನಾಲ್ಕು ಹೆಸರು

ಸುಷ್ಮಾ ಸ್ವರಾಜ್, ಟಿ.ಸಿ.ಗೆಹ್ಲೋಟ್, ಮುಂತಾದ ಗಣ್ಯಾತಿಗಣ್ಯರ ಹೆಸರು ರಾಷ್ಟ್ರಪತಿ ಗಾದಿಗೆ ಕೇಳಿಬರುತ್ತಿದ್ದರೂ, ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರನ್ನೇ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳು ನಿಚ್ಛಳವಾಗಿದೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇ ಆದಲ್ಲಿ, ಬಿಜೆಪಿಗೆ ಹಲವು ರೀತಿಯಲ್ಲಿ ಉಪಯೋಗವಾಗಲಿದೆ.

ರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿ ಯಾರು..?ರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿ ಯಾರು..?

ಓಡಿಶಾದ ಉಪರ್ಭೇದ ಎಂಬ ಗ್ರಾಮದ 58 ವರ್ಷದ ಮುರ್ಮು ಶಾಸಕರಾಗಿಯೂ ಕೆಲಸ ನಿರ್ವಹಿಸಿದವರು, ಸದ್ಯಕ್ಕೆ ಜಾರ್ಖಂಡ್ ನ ರಾಜ್ಯಪಾಲರಾಗಿರುವ ಇವರು ರಾಷ್ಟ್ರಪತಿಯಾದರೆ ಈ ಸಾಧನೆ ಮಾಡಿದ ಭಾರತದ ಮೊದಲ ಬುಡಕಟ್ಟು ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಬುಡಕಟ್ಟು ಜನಾಂಗದ ವಿಶ್ವಾಸ ಗಳಿಸಬಹುದು

ಬುಡಕಟ್ಟು ಜನಾಂಗದ ವಿಶ್ವಾಸ ಗಳಿಸಬಹುದು

ಈಗಾಗಲೇ ಬುಡಕಟ್ಟು ಸಮಾಜದ ವಿಶ್ವಾಸವನ್ನು ತೆಗೆದುಕೊಳ್ಳಲು ಹೆಣಗುತ್ತಿರುವ ಬಿಜೆಪಿಗೆ ದ್ರೌಪದಿ ಮುರ್ಮು, ಬುಡಕಟ್ಟು ಸಮುದಾಯದ ಮತವನ್ನು ಬಿಜೆಪಿಯತ್ತ ಸೆಳೆಯಲು ಸಹಾಯಕರಾಗುವುದು ಖಂಡಿತ. ಬುಡಕಟ್ಟು ಸಮುದಾಯಕ್ಕೆ ಬಿಜೆಪಿ ಕುರಿತು ಹೆಚ್ಚೇನೂ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಿರುವಾಗ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ, ಮುಂಬರುವ ಚುನಾವಣೆಗಳಲ್ಲಿ ಮತಕೇಳುವುದಕ್ಕೂ ಒಂದು ಅಸ್ತ್ರ ಸಿಕ್ಕಂತಾಗುತ್ತದೆ. ಬುಡಕಟ್ಟು ಜನಾಂಗದ ಪ್ರತಿನಿಧಿಯನ್ನು ದೇಶದ ಉನ್ನತ ಹುದ್ದೆಗೆ ಆರಿಸಿದ ಕೀರ್ತಿ ಬಿಜೆಪಿಗೆ ಸಿಕ್ಕಂತಾಗುತ್ತದೆ.

ಭಾರತದ ರಾಷ್ಟ್ರಪತಿ ಅಯ್ಕೆ ಮಾಡುವ ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?ಭಾರತದ ರಾಷ್ಟ್ರಪತಿ ಅಯ್ಕೆ ಮಾಡುವ ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?

ಮಹಿಳೆಯರ ಮತ ಸೆಳೆಯಬಹುದು

ಮಹಿಳೆಯರ ಮತ ಸೆಳೆಯಬಹುದು

ಕೇವಲ ಬುಡಕಟ್ಟು ಜನಾಂಗ ಮಾತ್ರವಲ್ಲದೆ, ಮಹಿಳೆಯರನ್ನು ಓಲೈಸುವುದಕ್ಕೂ ಮುರ್ಮು ಆಯ್ಕೆ ಸಹಾಯಕವಾಗಲಿದೆ. ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಮಹಿಳೆಯನ್ನು ಆರಿಸಿದ ಹೆಗ್ಗಳಿಕೆಯೂ ಬಿಜೆಪಿಗೆ ದಕ್ಕಲಿದೆ.

ದಲಿತರ ಓಲೈಕೆ

ದಲಿತರ ಓಲೈಕೆ

ದ್ರೌಪದಿ ಮುರ್ಮು ದಲಿತ ಸಮುದಾಯದವರೂ ಆಗಿರುವುವದರಿಂದ, ದಲಿತ ಪರ ಎನ್ನುವ ವಿಪಕ್ಷ ಗಳಿಗೂ ಅವರ ವಿರುದ್ಧ ಮತ ಚಲಾಯಿಸುವುದು ಕಷ್ಟವಾಗಬಹುದು. ದಲಿತ ವಿರೋಧಿ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಬಿಜೆಪಿಗೂ ಮುರ್ಮು ಆಯ್ಕೆಯಿಂದ ಆ ಲೇಬಲ್ ಕಳಚಿಕೊಳ್ಳುವುದು ಸುಲಭವಾಗಬಹುದು. ಒಟ್ಟಿನಲ್ಲಿ ಮುರ್ಮು ಆಯ್ಕೆಯಿಂದ ಬಿಜೆಪಿ ಒಂದೇ ಕಲ್ಲಿನಲ್ಲಿ ಬುಡಕಟ್ಟು ಸಮುದಾಯ, ಮಹಿಳೆ ಮತ್ತು ದಲಿತ ಎಂಬ ಮೂರು ಹಕ್ಕಿಯನ್ನು ಹೊಡೆಯಬಹುದು ಎಂಬ ಲೆಕ್ಕಾಚಾರ ಹಾಕುತ್ತಿರುವುದು ದಿಟ.

ಇನ್ಯಾರಿದ್ದಾರೆ ಪಟ್ಟಿಯಲ್ಲಿ

ಇನ್ಯಾರಿದ್ದಾರೆ ಪಟ್ಟಿಯಲ್ಲಿ

ಮುರ್ಮು ಅವರೊಂದಿಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತನ್ವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರು ರಾಷ್ಟ್ರಪತಿ ಅಭ್ಯರ್ಥಿ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಆದರೆ ಅರುಣ್ ಜೇಟ್ಲಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸುವ ಸಾಧ್ಯತೆಗಳು ಕಡಿಮೆ ಇವೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ಅಧಿಸೂಚನೆಯ ದಿನಾಂಕ: ಜೂನ್ 14, 2017
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 28
ನಾಮಪತ್ರ ಪರಿಶೀಲನೆ: ಜೂನ್ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ: ಜುಲೈ 1
ಚುನಾವಣಾ ದಿನಾಂಕ: ಜುಲೈ 17 (ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ)
ಫಲಿತಾಂಶದ ದಿನಾಂಕ: ಜುಲೈ 20

ಅಭ್ಯರ್ಥಿ ಆಯ್ಕೆಗಾಗಿ ತ್ರಿಸದಸ್ಯ ಪೀಠ

ಅಭ್ಯರ್ಥಿ ಆಯ್ಕೆಗಾಗಿ ತ್ರಿಸದಸ್ಯ ಪೀಠ

ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಚಿಸಿದ ತ್ರಿಸದಸ್ಯ ಸಮಿತಿಯಲ್ಲಿ ಘಟಾನುಘಟಿಗಳಾದ ಗೃಹ ಸಚಿವ ರಾಜನಾಥ್ ಸಿಂಗ್, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು, ವಿತ್ತ ಸಚಿವ ಅರುಣ್ ಜೇಟ್ಲಿ ಇದ್ದು, ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇವರ ತೀರ್ಮಾನವೇ ಅಂತಿಮವಾಗಲಿದೆ.

English summary
The race to Rasina Hill is hotting up and the BJP has set up a panel to chose a candidate who will be the next President of India. With several names doing the rounds, including that of Najma Heptullah, many say that Narendra Modi's surprise pick could be Jharkhand Governor Draupadi Murmu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X