ರಾಷ್ಟ್ರಪತಿ ಸ್ಥಾನಕ್ಕೆ ಕೋವಿಂದ್ ರನ್ನು ಆಯ್ಕೆ ಮಾಡಿದ್ದು ಹೇಗೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ನವೆದೆಹಲಿ, ಜೂನ್ 20 : ಎಲ್ಲರನ್ನು ಅಚ್ಚರಿಗೆ ದೂಡುವಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿದ್ದಾರೆ.
ಬಿಹಾರದ ರಾಜ್ಯಪಾಲ ರಾಮನಾಥ್ ಕೋವಿಂದ್ ರನ್ನು ಆಯ್ಕೆ ಮಾಡುವ ಮೂಲಕ ಪ್ರತಿಪಕ್ಷಗಳು ಹಾಗಿರಲಿ, ಪಕ್ಷದ ಅನೇಕರಿಗೆ ಅಚ್ಚರಿ ಉಂಟು ಮಾಡಿದರು.

ಕೋವಿಂದ್ ರನ್ನು ಆಯ್ಕೆ ಮಾಡಲು ದಲಿತ ನಾಯಕ ಎಂಬುದು ಒಂದು ಕಾರಣವಾದರೆ, ಮತ್ತೊಂದು ರೈತನೊಬ್ಬನ ಮಗ, ಸಮರ್ಥ ಆಡಳಿತಗಾರ ಎಂಬ ಅಂಶಗಳು ಬೆಳಕಿಗೆ ಬಂದಿವೆ. ಎನ್ಡಿಎ ದಲಿತ ವಿರೋಧಿಯಲ್ಲ ಎಂಬ ಸಂದೇಶವನ್ನು ನೀಡುವ ಮೂಲಕ ಅನೇಕ ಬಾಯಿ ಮುಚ್ಚಿಸಿದ್ದಾರೆ.

How BJP chose Kovind as its candidate for the next President of India

ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಅವಿರೋಧ ಆಯ್ಕೆ ಸಾಧ್ಯತೆಯನ್ನು ಮೋದಿ ಅವರು ಮುಂದಿಟ್ಟಿದ್ದಾರೆ. ಈಗ ಕಾಂಗ್ರೆಸ್ ಪಕ್ಷವು, ಕೋವಿಂದ್ ಅವರ ಆಯ್ಕೆಯನ್ನು ವಿರೋಧಿಸಲಾಗದೆ, ದಲಿತ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಒತ್ತಡಕ್ಕೆ ಒಳಗಾಗಿದೆ.

ಸಮರ್ಥ ಕ್ಯಾಬಿನೆಟ್ -ಮೋದಿ ಬಲ : ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ಮಿತ್ರಪಕ್ಷಗಳು, ಆರೆಸ್ಸೆಸ್, ಜಾತಿ ಸಮೀಕರಣ, ಮುಂದಿನ ಚುನಾವಣೆ, ವಿಪಕ್ಷಗಳಿಗೆ ಆಘಾತ ಮುಂತಾದ ಅಂಶಗಳನ್ನು ಪರಿಗಣಿಸಿ ಅಮಿತ್ ಶಾ, ನರೇಂದ್ರ ಮೋದಿ ಹಾಗೂ ಮೋಹನ್ ಭಾಗ್ವತ್ ಅವರು ರಾಮ್ ನಾಥ್ ಕೋವಿಂದ್ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಪಕ್ಷದ ಸದಸ್ಯರ ಅಭಿಪ್ರಾಯ ಸಂಗ್ರಹ: ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಟಿಸಿ ಗೆಹ್ಲೋಟ್ ಹೆಸರು ಕೇಳಿ ಬಂದಿದೆ. ಆದರೆ, ಅನಿಲ್ ಮಾಧವ್ ಅವರ ನಿಧನದ ನಂತರ ಮೋದಿ ಅವರು ತಮ್ಮ ಕ್ಯಾಬಿನೆಟ್ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ವ್ಯಕ್ತಿ ಸಮರ್ಥರಿರಬೇಕು ಆದರೆ, ಅವರು ರಾಷ್ಟ್ರಪತಿಯಾಗುವುದರಿಂದ ತಮ್ಮ ಕ್ಯಾಬಿನೆಟ್ ಬಲ ಕುಗ್ಗಬಾರದು ಎಂಬ ಅಂಶ ಮೋದಿ ಅವರನ್ನು ಬಲವಾಗಿ ಕಾಡಿತ್ತು.

ರಕ್ಷಣಾ ಖಾತೆ ತೊರೆದು ಮನೋಹರ್ ಪಾರಿಕ್ಕರ್ ಅವರು ಗೋವಾ ಸಿಎಂ ಆಗಿ ಹೋಗಿದ್ದು ಹಲವರಿಗೆ ಅಚ್ಚರಿ ಮೂಡಿಸಿದರೂ ಅದು ತುಂಬಾ ಲೆಕ್ಕಾಚಾರದ ನಡೆಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Narendra Modi does not fail to surprise. On Monday the BJP announced on Monday that their candidate for the next President of India will be Ram Nath Kovind, the Governor of Bihar.How BJP chose Kovind as its candidate for the next President of India.
Please Wait while comments are loading...