ಒಂದು ಏಟಿಗೆ ಎರಡು ಏಟು : ಅಜಿತನ ತಿರುಗೇಟು

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಸೆ.30: 'ಒಂದು ಏಟಿಗೆ ಎರಡು ಏಟು' ಎಂಬ ನೀತಿಯನ್ನು ಗಡಿ ಭದ್ರತಾ ಪಡೆಗಳಿಗೆ ತಿಳಿಸಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ ಎಸ್ ಎ) ಅಜಿತ್ ಡೋವಲ್. ಗಡಿಯಾಚೆಗಿನ ಕಿರುಕುಳವನ್ನು ಹತ್ತಿಕ್ಕಲು ಅಜಿತ್ ಅನುಸರಿಸಿದ ತಂತ್ರಗಳು ಎನ್ಎಸ್ಎ ನೀತಿ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇದರ ಪರಿಣಾಮವೇ ಪಾಕಿಸ್ತಾನದ ಗಡಿಭಾಗದಲ್ಲಿ ನಡೆದ ಸರ್ಜಿಕಲ್ ಸ್ಟೈಕ್.

ಮಿಲಿಟರಿ ಕಾರ್ಯಾಚರಣೆಯ ಪ್ರಧಾನ ನಿರ್ದೇಶಕರು ಗುರುವಾರ ನೀಡಿದ ಮಾಹಿತಿಯನ್ನು ಗಮನಿಸಿದರೆ ಈ ನಾಜೂಕಾದ ದಾಳಿಯ ಹಿಂದಿನ ಶಕ್ತಿ ಅಜಿತ್ ಡೋವಲ್ ಎಂದು ತಿಳಿದು ಬರುತ್ತದೆ. ಅತ್ಯಂತ ಸೂಕ್ಷ್ಮವಾಗಿ ತಂತ್ರ ಹೆಣೆದು ಪೂರ್ವ ನಿಯೋಜಿತವಾಗಿ ದಾಳಿ ನಡೆಸಲಾಗಿದೆ.

They fire one, you fire two- How Doval changed India's policy on Pakistan

ಯುಎಸ್ ಬೆಂಬಲ ಸಿಕ್ಕಿತು: ಅಜಿತ್ ಡೋವಲ್ ಹಾಗೂ ಯುಎಸ್ ನ ಸುಸಾನ್ ರೈಸ್ ನಡುವೆ ಇತ್ತೀಚೆಗೆ ನಡೆದ ಮಾತುಕತೆಯಲ್ಲಿ ಉರಿಯಲ್ಲಿ ನಡೆದ ಉಗ್ರರ ದಾಳಿ ಅದಕ್ಕೆ ಭಾರತ ಪ್ರತಿಕ್ರಿಯಿಸಬೇಕಾಗಿರುವ ರೀತಿಯ ಬಗ್ಗೆ ಚರ್ಚೆ ನಡೆಯಿತು. ಭಾರತ ತನ್ನ ಯೋಜನೆಯನ್ನು ಮೆಚ್ಚಿದ ಯುಎಸ್, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ಇದೆ ಎಂದಿತ್ತು.

ಭಾರತದ ಕಾರ್ಯಾಚರಣೆಯನ್ನು ಯುಎಸ್ ವಕ್ತಾರ ಜಾನ್ ಕಿರ್ಬಿ ಕೂಡಾ ಟೀಕಿಸಿಲ್ಲ. ಉರಿ ಆಘಾತಕ್ಕೆ ಭಾರತ ನೀಡಿದ ಪ್ರತ್ಯುತ್ತರ ಭಯೋತ್ಪಾದನೆ ವಿರುದ್ಧವಾಗಿರುವುದರಿಂದ ಯುಎಸ್ ಬೆಂಬಲಿಸುತ್ತದೆ. ಆದರೆ, ಉಭಯ ಬಣಗಳು ನಿಯಂತ್ರಣದಲ್ಲಿರಲಿ ಎಂದಿದ್ದರು.

ಭಾರತದ ನಿಯಮದಲ್ಲಿ ಅಕ್ರಮಣಕಾರಿ: ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ವಿಷಯದಲ್ಲಿ ಭಾರತ ಅನುಸರಿಸುತ್ತಿದ್ದ ಅಲಿಪ್ತ ನೀತಿಯನ್ನು ಬದಿಗೊತ್ತಿ, ಭಾರತದ ನೀತಿ ನಿಯಮಗಳಲ್ಲಿ ಆಕ್ರಮಣಕಾರಿ ಬದಲಾವಣೆ ತರುವಲ್ಲಿ ಅಜಿತ್ ಡೋವಲ್ ಯಶಸ್ವಿಯಾಗಿದ್ದಾರೆ. ಗಡಿ ಭದ್ರತೆ ವಿಷಯದಲ್ಲಿ, ಭಯೋತ್ಪಾದನೆ ಹತ್ತಿಕ್ಕುವಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂಬ ಕಟ್ಟಾಜ್ಞೆ ಭಾರತೀಯ ಸೈನಿಕರಿಗೆ ಸಿಕ್ಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Fire at will. If they fire one, you fire two." This is what Ajit Doval, the National Security Advisor had told the Border Security Force last year after Pakistan resorted to cross border firing. The surgical strike that was carried out by India on Wednesday night once again reflects the NSA's policy that Pak
Please Wait while comments are loading...