ಜಿಎಸ್ ಟಿ ಯಶಸ್ವಿ ಸಾಧ್ಯವೇ ಇಲ್ಲ ಎಂದಿದ್ದ ಮೋದಿ ವಿಡಿಯೋ ಬಿಡುಗಡೆ

ನವದೆಹಲಿ, ಜೂನ್ 30: ಅಗತ್ಯ ಮೂಲಸೌಕರ್ಯ ಇಲ್ಲದೆ ಜಿಎಸ್ ಟಿ ಯಶಸ್ವಿ ಆಗೋದಿಕ್ಕೆ ಸಾಧ್ಯವೇ ಇಲ್ಲ ಎಂದು ನರೇಂದ್ರ ಮೋದಿ ಅವರು ಹೇಳಿದಂಥ ವಿಡಿಯೋ ಹರಿದಾಡುತ್ತಿದೆ. ಜಿಎಸ್ ಟಿ ಜಾರಿಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿವೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ನವರು ನರೇಂದ್ರ ಮೋದಿ ಅವರ ಹಳೆ ವಿಡಿಯೋವೊಂದನ್ನು ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಜಿಎಸ್ ಟಿ ಬಗ್ಗೆ ನರೇಂದ್ರ ಮೋದಿಜೀ ಹಾಗೂ ಬಿಜೆಪಿಯವರ ಆಲೋಚನೆ ಇದು ಎಂಬ ಶೀರ್ಷಿಕೆ ಹಾಕಿ ವಿಡಿಯೋ ಕ್ಲಿಪ್ ವೊಂದನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಆ ವಿಡಿಯೋ ಕ್ಲಿಪ್ ನಲ್ಲಿ ಮೋದಿ, "ಜಿಎಸ್ ಟಿ ಪ್ರಶ್ನೆಗೆ ಬರೋದಾದರೆ, ಇದು ಬಿಜೆಪಿಯ ಹಾಗೂ ಗುಜರಾತ್ ಸರಕಾರದ ದೃಷ್ಟಿಕೋನ. ಆರಂಭದಿಂದಲೂ ಹೇಳುತ್ತಿರುವಂತೆ ಜಿಎಸ್ ಟಿ ಯಶಸ್ವಿ ಆಗಲು ಸಾಧ್ಯವೇ ಇಲ್ಲ" ಎಂದಿದ್ದಾರೆ.

Hours before GST rollout, Congress tweets old video clips of PM Modi saying, 'GST can never be successful'

"ಮೋದಿ ಜೀ ನಿಮ್ಮ ಮಾತುಗಳನ್ನೇ ಎಷ್ಟು ಬೇಗ ಮರೆತಿರಿ. ಸರಿಯಾದ ಮೂಲಸೌಕರ್ಯ ಅಭಿವೃದ್ಧಿಪಡಿಸದೆ ಜಿಎಸ್ ಟಿ ಜಾರಿಗೆ ಹೇಗೆ ಮುಂದಾದಿರಿ?" ಎಂಬ ಶೀರ್ಷಿಕೆ ನೀಡಿ ಮತ್ತೊಂದು ವಿಡಿಯೋ ಕ್ಲಿಪ್ ಹಾಕಲಾಗಿದೆ.

ಅದರಲ್ಲಿ ನರೇಂದ್ರ ಮೋದಿ ಅವರು, ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಇಲ್ಲದೆ ಜಿಎಸ್ ಟಿ ಜಾರಿ ಅಸಾಧ್ಯ ಎಂದು ಹೇಳಿದ್ದಾರೆ. ಇಡೀ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಜಾಲ ಸೃಷ್ಟಿ ಆಗುವವರೆಗೆ ಜಿಎಸ್ ಟಿ ಜಾರಿ ಸಾಧ್ಯವಿಲ್ಲ. ಏಕೆಂದರೆ ಅದರ ರಚನೆಯೇ ಹಾಗೆ ಆಗಿದೆ ಎಂದು ಮೋದಿ ಹೇಳಿದ್ದಾರೆ.

ಸದ್ಯದ ಜಿಎಸ್ ಟಿ ಸ್ವರೂಪದಿಂದ ದೇಶದ ಸಣ್ಣ ಹಾಗೂ ಮಧ್ಯಮ ಪ್ರಮಾಣದ ವರ್ತಕರು ನಾಶವಾಗುತ್ತಾರೆ. ಇದರಿಂದ ದೊಡ್ಡ ಪ್ರಮಾಣದ ನಿರುದ್ಯೋಗ ಸೃಷ್ಟಿ ಆಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕೇನ್ ದೆಹಲಿಯಲ್ಲಿ ತಿಳಿಸಿದ್ದಾರೆ.

ಈಗಿರುವ ಜಿಎಸ್ ಟಿ ಗೊಂದಲಮಯವಾಗಿದೆ. ಅದರಲ್ಲಿ ಎರಡಕ್ಕಿಂತ ಹೆಚ್ಚು ಸ್ಲ್ಯಾಬ್ ಇರಲೇಬಾರದು ಎಂದು ಅವರು ಹೇಳಿದ್ದಾರೆ. ಇನ್ನು ಸಿಂಗಾಪೂರ್ ಹಾಗೂ ಮಲೇಷ್ಯಾಗಳಲ್ಲಿರುವಂತೆ ಒಂದೇ ರೀತಿಯ ಜಿಎಸ್ ಟಿ ಉದಾಹರಣೆಯನ್ನು ಮಾಕೇನ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+