ಆಸ್ಪತ್ರೆಗೆ ಹೋಗಲು 3 ಗಂಟೆ ಬೇಕಿತ್ತು, ಈಗ 4000ಕ್ಕೂ ಹೆಚ್ಚು ಜನರ ಮನೆಬಾಗಿಲಿಗೆ ಬಂತು ರೈಲ್ವೆ ಸಂಚಾರಿ ಆಸ್ಪತ್ರೆ

ಸಾಮಾನ್ಯವಾಗಿ ಸಣ್ಣಪುಟ್ಟ ಕಾಯಿಲೆಗಳಿಗೆ ಎರಡರಿಂದ ಮೂರು ಗಂಟೆಗಳ ಕಾಲ ಪ್ರಯಾಣಿಸಿ ಆಸ್ಪತ್ರೆಗೆ ಹೋಗುವುದು ಯಾರಿಗಾದರೂ ಕಷ್ಟದ ಕೆಲಸ. ಇದೇ ಕಾರಣಕ್ಕೆ ಗ್ರಾಮೀಣ ಭಾಗದ ಜನ ಹಾಗೂ ದೂರದ ಊರುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಆಸ್ಪತ್ರೆಗೆ ಹೋಗುವುದನ್ನೇ ಮುಂದೂಡುತ್ತಾರೆ.

ಈ ರೀತಿ ವಿಳಂಬ ಮಾಡಿದರೆ, ಮುಂದೆ ದೊಡ್ಡ ಆರೋಗ್ಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಭೂಸಾವಲ್ ರೈಲ್ವೆ ವಿಭಾಗವು 'ರುದ್ರ' ಎಂಬ ವಿನೂತನ ಸಂಚಾರಿ ಆಸ್ಪತ್ರೆಯನ್ನ ಪರಿಚಯಿಸಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ.

Hospital on Wheels How Indian Railways Rudra Reached 4000 People With An 8-Step Rural Plan

ಭೂಸಾವಲ್ ರೈಲ್ವೆ ವಿಭಾಗದ ವಿನೂತನ ಪ್ರಯತ್ನ 'ರುದ್ರ'

ಜನವರಿ 2025ರಲ್ಲಿ ಪ್ರಾರಂಭವಾದ ಈ ರುದ್ರ ಯೋಜನೆಯು, ಬಳಕೆಯಲ್ಲಿಲ್ಲದ ಹಳೆಯ ರೈಲ್ವೆ ಬೋಗಿಯೊಂದನ್ನ ಸುಸಜ್ಜಿತ ಸಂಚಾರಿ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ ಅದ್ಭುತ ಸಾಧನೆಯಾಗಿದೆ. ಭೂಸಾವಲ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪುನೀತ್ ಅಗರವಾಲ್ ಅವರ ನೇತೃತ್ವದಲ್ಲಿ ಈ ಯೋಜನೆ ರೂಪುಗೊಂಡಿದೆ. ದೂರದ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುವ ರೈಲ್ವೆ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಸುಲಭವಾಗಿ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಈ ರೈಲು ಆಸ್ಪತ್ರೆಯನ್ನು ಆರಂಭಿಸಲಾಯಿತು.

ಮಾರ್ಚ್ 2026ರ ವೇಳೆಗೆ ಈ 'ರುದ್ರ' ಆಸ್ಪತ್ರೆಯು 28 ವೈದ್ಯಕೀಯ ಶಿಬಿರಗಳನ್ನ ನಡೆಸಿ, 4,321 ಕ್ಕೂ ಹೆಚ್ಚು ಜನರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ.

ಸಂಚಾರಿ ಆಸ್ಪತ್ರೆಯ ಸೌಲಭ್ಯಗಳು

'ರುದ್ರ' ಕೇವಲ ಹೆಸರಿಗಷ್ಟೇ ಆಸ್ಪತ್ರೆಯಲ್ಲ. ಬದಲಿಗೆ ಇದರೊಳಗೆ ಇಸಿಜಿ, ರಕ್ತ ಪರೀಕ್ಷೆ, ವೈದ್ಯರ ಸಮಾಲೋಚನೆ ಕೊಠಡಿ ಹಾಗೂ ಅಗತ್ಯ ಔಷಧಿಗಳೆಲ್ಲವೂ ಲಭ್ಯವಿದೆ. ಈ ರೈಲು ವಿವಿಧ ನಿಲ್ದಾಣಗಳಿಗೆ ತೆರಳಿ 5 ರಿಂದ 6 ಗಂಟೆಗಳ ಕಾಲ ಅಲ್ಲಿಯೇ ನಿಲ್ಲುತ್ತದೆ. ಇದರಿಂದಾಗಿ ಆಸುಪಾಸಿನ ಜನರಿಗೆ ಯಾವುದೇ ಆತುರವಿಲ್ಲದೆ, ತಮ್ಮ ಬಿಡುವಿನ ವೇಳೆಯಲ್ಲಿ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ. ಈ ಸಂಚಾರಿ ಆಸ್ಪತ್ರೆಯಿಂದಾಗಿ ಎಷ್ಟೋ ಜನರಲ್ಲಿ ಆರಂಭಿಕ ಹಂತದಲ್ಲೇ ಗಂಭೀರ ಕಾಯಿಲೆಗಳನ್ನ ಪತ್ತೆಹಚ್ಚಿ, ಪ್ರಾಣಾಪಾಯದಿಂದ ಪಾರು ಮಾಡಲು ಸಾಧ್ಯವಾಗಿದೆ.

ಟೆಲಿಕನ್ಸಲ್ಟೇಶನ್ ಸೇವೆ

ರೈಲು ಆಸ್ಪತ್ರೆ ಒಂದು ಕಡೆ ಇದ್ದಾಗ, ಬೇರೆ ಊರಿನವರಿಗೆ ತುರ್ತು ಚಿಕಿತ್ಸೆ ಬೇಕಾದರೆ ಏನು ಮಾಡುವುದು? ಈ ಪ್ರಶ್ನೆಗೆ ಉತ್ತರವಾಗಿ 'ಟೆಲಿಕನ್ಸಲ್ಟೇಶನ್' ಸೇವೆಯನ್ನ ಪರಿಚಯಿಸಲಾಗಿದೆ. ಇದರಿಂದಾಗಿ ರೋಗಿಗಳು ರೈಲು ಆಸ್ಪತ್ರೆ ತಮ್ಮ ಊರಿನಲ್ಲಿ ಇಲ್ಲದಿದ್ದರೂ ವೈದ್ಯರೊಂದಿಗೆ ದೂರವಾಣಿ ಅಥವಾ ವಿಡಿಯೋ ಮೂಲಕ ಮಾತನಾಡಿ ಪ್ರಾಥಮಿಕ ಚಿಕಿತ್ಸೆ ಪಡೆಯಬಹುದು. ಜೊತೆಗೆ ರೋಗಿಗಳ ಡಿಜಿಟಲ್ ಆರೋಗ್ಯ ದಾಖಲೆಗಳನ್ನ ನಿರ್ವಹಿಸುವ ಮೂಲಕ ಮುಂದಿನ ಚಿಕಿತ್ಸೆಗೆ ಅನುವು ಮಾಡಿಕೊಡಲಾಗುತ್ತಿದೆ.

ಗ್ರಾಮೀಣ ಆರೋಗ್ಯ ಸೇವೆಗೆ 8-ಹಂತದ ಮಾದರಿ ಯೋಜನೆ

ರೈಲ್ವೆ ಇಲಾಖೆಯ ಈ 'ರುದ್ರ' ಮಾದರಿಯನ್ನು ಬಸ್ ಅಥವಾ ವ್ಯಾನ್ ಮೂಲಕ ನಮ್ಮ ಹಳ್ಳಿಗಳಿಗೂ ವಿಸ್ತರಿಸಬಹುದು ಎನ್ನುತ್ತಾರೆ ತಜ್ಞರು. ಇದಕ್ಕಾಗಿ 8 ಹಂತದ ಸರಳ ಯೋಜನೆಯನ್ನು ರೂಪಿಸಲಾಗಿದೆ:

1. ಯಾವ ಪ್ರದೇಶದಲ್ಲಿ ವೈದ್ಯಕೀಯ ಸೇವೆಯ ಕೊರತೆಯಿದೆ ಎಂಬುದನ್ನು ಮೊದಲು ಗುರುತಿಸಬೇಕು.

2. ವೈದ್ಯಕೀಯ ಸಿಬ್ಬಂದಿ, ಉಪಕರಣಗಳು ಮತ್ತು ಸೂಕ್ತ ವಾಹನವನ್ನ (ಬಸ್/ವ್ಯಾನ್) ಸಿದ್ಧಪಡಿಸಿಕೊಳ್ಳಬೇಕು.

3. ದೊಡ್ಡ ಮಟ್ಟದಲ್ಲಿ ಆರಂಭಿಸುವ ಮುನ್ನ ಸಣ್ಣ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನ ಜಾರಿಗೊಳಿಸಬೇಕು.

4. ಸಮಯ ಮತ್ತು ಸ್ಥಳದ ಆಯ್ಕೆ: ಜನರಿಗೆ ಸುಲಭವಾಗಿ ತಲುಪುವ ಸ್ಥಳ ಹಾಗೂ ಅವರಿಗೆ ಅನುಕೂಲವಾಗುವ ಸಮಯವನ್ನು ನಿಗದಿಪಡಿಸಬೇಕು.

5. ತಂಡದ ರಚನೆ: ನುರಿತ ವೈದ್ಯರು, ತಂತ್ರಜ್ಞರು ಮತ್ತು ಸ್ಥಳೀಯ ಆಡಳಿತದ ಸಮನ್ವಯ ಸಮಿತಿಯನ್ನ ರಚಿಸಬೇಕು.

6. ವಿದ್ಯುತ್, ನೀರು ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು.

7. ಸವಾಲುಗಳ ನಿರ್ವಹಣೆ: ಎದುರಾಗುವ ಅಡೆತಡೆಗಳನ್ನ ಮುಂಚಿತವಾಗಿಯೇ ಅಂದಾಜಿಸಿ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.

8. ತಂತ್ರಜ್ಞಾನದ ಬಳಕೆ: ಟೆಲಿಮೆಡಿಸಿನ್ ಮತ್ತು ಡಿಜಿಟಲ್ ರೆಕಾರ್ಡ್ಸ್ ಮೂಲಕ ಸೇವೆಯನ್ನ ಹೆಚ್ಚು ಜನರಿಗೆ ತಲುಪಿಸಬೇಕು.

ಜನರು ಆಸ್ಪತ್ರೆಗೆ ಹೋಗಲು ಸಾಧ್ಯವಾಗದಿದ್ದರೆ, ಆಸ್ಪತ್ರೆಯನ್ನೇ ಜನರ ಬಳಿಗೆ ಕೊಂಡೊಯ್ಯಬಹುದು ಎಂಬುದನ್ನ 'ರುದ್ರ' ಯಶಸ್ವಿಯಾಗಿ ಸಾಬೀತುಪಡಿಸಿದೆ. ಇಂಥ ಯೋಜನೆಗಳು ಹಳ್ಳಿ ಹಳ್ಳಿಗಳಿಗೂ ವಿಸ್ತರಣೆಯಾದರೆ, ಗ್ರಾಮೀಣ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಖಂಡಿತ ಸಾಧ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+