Road Accident: ಭೀಕರ ರಸ್ತೆ ಅಪಘಾತ; ಆರು ಮಂದಿ ಸಜೀವ ದಹನ
ಅಮರಾವತಿ, ಮೇ. 14 : ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೈದರಾಬಾದ್ - ವಿಜಯವಾಡ ಹೆದ್ದಾರಿಯಲ್ಲಿ ಮೇ 15 ರ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಾಪಟ್ಲಾದಿಂದ ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ ಹೋಗುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಜೀವ ದಹನವಾಗಿದ್ದಾರೆ. ಈ ರಸ್ತೆ ಭೀಕರ ಅಪಘಾತದಲ್ಲಿ 32 ಮಂದಿ ಗಾಯಗೊಂಡಿದ್ದು, ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿಡಿಯೋ ಉಸಿರುಗಟ್ಟಿಸುವಂತಿದೆ.

ಭೀಕರ ಅಪಘಾತದ ದೃಶ್ಯಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿವೆ. ವಿಡಿಯೋದಲ್ಲಿ ಬಸ್ ಬೆಂಕಿಗೆ ಆಹುತಿಯಾಗಿರುವುದನ್ನು ಕಾಣಬಹುದು. ಬಸ್ - ಟ್ರಕ್ ಡಿಕ್ಕಿಯಿಂದ ಉಂಟಾದ ಬೆಂಕಿ ಎಷ್ಟು ತೀವ್ರವಾಗಿದೆ ಎಂದರೆ ಬಸ್ ಮತ್ತು ಟ್ರಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಅಪಘಾತದಲ್ಲಿ ಬಸ್ ಮತ್ತು ಟ್ರಕ್ ಸುಟ್ಟು ಭಸ್ಮವಾದ ದೃಶ್ಯ ನೋಡಿದರೇ ಅಪಘಾತದ ತೀವ್ರತೆ ಎದ್ದು ಕಾಣುತ್ತಿದೆ. ಇನ್ನೊಂದು ವಿಡಿಯೋದಲ್ಲಿ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುತ್ತಿರುವುದನ್ನು ಕಾಣಬಹುದು. ಬಸ್‌ನಲ್ಲಿ ಇರುವವರು ಬಾಪಟ್ಲದಿಂದ ಮತ ಚಲಾಯಿಸಿ ಹಿಂತಿರುಗುತ್ತಿದ್ದರು ಎಂದು ಹೇಳಲಾಗಿದೆ. ರಸ್ತೆ ಅಪಘಾತದ ವೇಳೆ ಬಸ್‌ನಲ್ಲಿ 42 ಮಂದಿ ಪ್ರಯಾಣಿಸುತ್ತಿದ್ದರು.
ಬಸ್‌ನಲ್ಲಿ 42 ಮಂದಿ ಪ್ರಯಾಣ
ಖಾಸಗಿ ಬಸ್ ಬಾಪಟ್ಲಾ ಜಿಲ್ಲೆಯ ಚಿನ್ನಗಂಜಾಂನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು. ನಂತರ ಹೈದರಾಬಾದ್ - ವಿಜಯವಾಡ ಹೆದ್ದಾರಿಯ ಚಿಲಕಲೂರಿಪೇಟೆ ಮಂಡಲದ ಬಳಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಕೂಡಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ.
5 individuals burned alive, many injured as a private bus collides with a lorry and catches fire in #Chilakaluripet Mandal, #Palnadu district. The bus was carrying 40 passengers returning to #Hyderabad from #Bapatla district after casting their votes. #BusFire #BusAccident pic.twitter.com/rnycRD4jQt
— Glint Insights Media (@GlintInsights) May 15, 2024
ಅಪಘಾತದ ವೇಳೆ ಬಸ್‌ನಲ್ಲಿ 42 ಮಂದಿ ಪ್ರಯಾಣಿಸುತ್ತಿದ್ದರು ಎಂದು ಗಾಯಾಳುಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ ಟ್ರಕ್ ಮತ್ತು ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಹ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ 8 ವರ್ಷದ ಬಾಲಕಿಯೂ ಸೇರಿದ್ದಾಳೆ.
ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಾಹಿತಿಯೂ ಬಹಿರಂಗವಾಗಿದೆ. ಮೃತರು ಬಾಪಟ್ಲಾ ಜಿಲ್ಲೆಯ ನಿವಾಸಿಗಳು. ಮೃತರಲ್ಲಿ 35 ವರ್ಷದ ಬಸ್ ಚಾಲಕ ಅಂಜಿ, 65 ವರ್ಷದ ಉಪ್ಪಗುಂದೂರು ಕಾಶಿ, 55 ವರ್ಷದ ಉಪ್ಪಗುಂದೂರು ಲಕ್ಷ್ಮಿ ಮತ್ತು 8 ವರ್ಷದ ಮುಪ್ಪರಾಜು ಖ್ಯಾತಿ ಶಾಸ್ತ್ರಿ ಎಂಬ ಬಾಲಕಿ ಸೇರಿದ್ದಾರೆ. ಉಳಿದ ಇಬ್ಬರ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ.
ಈ ಅಪಘಾತದಲ್ಲಿ 32 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಲಕಲೂರಿಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇದಾದ ಬಳಿಕ ಉತ್ತಮ ಚಿಕಿತ್ಸೆಗಾಗಿ ಗುಂಟೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications