ಝಾಕಿರ್ ನಾಯಕ್ ಕೇಸ್ : ಗೃಹ ಸಚಿವಾಲಯದ 3 ಅಧಿಕಾರಿಗಳ ಅಮಾನತು

Posted By:
Subscribe to Oneindia Kannada

ನವದೆಹಲಿ, ಸೆ. 02: ಇಸ್ಲಾಮ್ ಧರ್ಮ ಪ್ರಚಾರಕ ಝಾಕಿರ್ ನಾಯಕ್ಗೆ ಸಂಬಂಧಪಟ್ಟಿರುವ ವಿವಾದಿತ ಸರ್ಕಾರೇತರ ಸಂಸ್ಥೆ(ಎನ್ ಜಿಒ) ಯ ಲೈಸನ್ ನವೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ಮೂವರು ಕಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಮೂವರು ಅಧಿಕಾರಿಗಳು, ಝಾಕಿರ್ ನಾಯಕ್ ಅವರ ಎನ್ ಜಿಒಗೆ ವಿದೇಶಿ ದೇಣಿಗೆ ಪರವಾನಗಿಯನ್ನು ನವೀಕರಿಸಿ ಕೊಟ್ಟ ಆರೋಪ ಹೊತ್ತಿದ್ದಾರೆ.

3 Home Ministry Officials Suspended Over Renewal Of Zakir Naik's NGO Licence

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಲೈಸನ್ ಆಗಸ್ಟ್ 19ರಂದು ನವೀಕರಣಗೊಂಡಿದೆ. ಇದು ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯದ ಕಣ್ಣಿಗೆ ಕಾಣದಂತೆ ನಡೆದ ಕಾರ್ಯವಾಗಿದೆ.

ಗೃಹ ಸಚಿವಾಲಯದ ವಿದೇಶೀಯರ ವಿಭಾಗದ ಜಂಟಿ ಕಾರ್ಯದರ್ಶಿ ಜಿ.ಕೆ.ದ್ವಿವೇದಿ ಮತ್ತು ಇತರ ಮೂವರು ಅಧಿಕಾರಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪ ಹೊರೆಸಿದ್ದಾರೆ.

ಝಾಕಿರ್ ನಾಯಕ್ ಅವರ ಎನ್ಜಿಒ ವಿರುದ್ಧ ಪ್ರಕರಣ ಬಾಕಿ ಇದ್ದರೂ ಸಹ ಎಫ್ ಸಿಆರ್ಎ ಪರವಾನಗಿ ನವೀಕರಿಸಿದ್ದಾರೆ. ಹಾಗಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Three junior officials of the Union Home Ministry were removed on Thursday after it was found that the Foreign Contribution Regulation Act license of a non-profit headed by Salafi preacher Zakir Naik -- who is currently being probed for allegedly motivating acts of terror -- had been renewed as an oversight.
Please Wait while comments are loading...