School College Holidays: ಮುಂದಿನ ಆದೇಶದವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Holidays Annouced: ಭಾರತ ಸರ್ಕಾರ ಅಂದುಕೊಂಡಂತೆ ಪಾಕಿಸ್ತಾನ ಮೇಲೆ ಬುಧವಾರ ನಸುಕಿನ ಜಾವ ದಾಳಿ ಮಾಡಿದೆ. ಇತ್ತ ಗುರುವಾರ ಲಾಹೋರ್ ನಲ್ಲಿ ಒಂದಷ್ಟು ಸ್ಪೋಟಕಗಳು ಕೇಳಿ ಬಂದಿವೆ. ಭಾರತದ 31 ಜನರ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೆ ಪಾಕಿಸ್ತಾನ ಸಹ ಯುದ್ಧ ಮಾಡುವುದಾಗಿ ತಿಳಿಸಿತ್ತು. ಸದ್ಯಕ್ಕೆ ಯುದ್ಧ ಮಾಡುವ ಶಕ್ತಿ ಪಾಕಿಸ್ಥಾನಕ್ಕೆ ಇಲ್ಲ ಎನ್ನಲಾಗಿದೆ. ಹೀಗಿದ್ದರೂ ಮಕ್ಕಳು, ವಿದ್ಯಾರ್ಥಿಗಳ ಹಿತದೃಷ್ಟಿ ಮತ್ತು ಭದ್ರತೆ ಕಾರಣಕ್ಕಾಗಿ ಶಾಲೆ-ಕಾಲೇಜುಗಳಿಗೆ ಇಂದಿನಿಂದ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಲಾಗಿದೆ.
ಹೌದು ರಾಜಸ್ತಾನ ರಾಜ್ಯದ ಜೋಧಪುರ ನಗರ ಆಡಳಿತವು ಇಂದಿನಿಂದ ಮುಂದಿನ ಆದೇಶದವರೆಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿದೆ. ಜಿಲ್ಲಾಧಿಕಾರಿಗಳಾದ ಗೌರವ್ ಅಗರ್ವಾಲ್ ಅವರು ಅಂಗನವಾಡಿ ಒಳಗೊಂಡಂತೆ ಶಾಲಾ, ಕಾಲೇಜುಗಳಿಗೆ ಸಾರ್ವತ್ರಿಕೆ ರಜೆ ಘೋಷಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಪಾಕಿಸ್ತಾನ ಯಾವಾಗ ಬೇಕಾದರೂ ಭಾರತದ ಮೇಲೆ ಅಟ್ಯಾಕ್ ಮಾಡಲು ಬರುವ ಸಾಧ್ಯತೆ ಇದೆ. ಪಾಕಿಸ್ಥಾನ ಸೇನೆ ಅಥವಾ ಉಗ್ರರ ಪ್ರತಿ ದಾಳಿಗೆ ಕಾಯುತ್ತಿರುವ ಭಾರತ ಎರಡನೇ ಬಾರಿಗೆ ಬಲವಾಗಿ ದಾಳಿ ಮಾಡಲು ಸಜ್ಜಾಗಿದೆ. ಹೀಗಾಗಿ ಪಾಕ್ ಮತ್ತೆ ನಮ್ಮ ತಂಟೆಗೆ ಬರುವುದು ಸದ್ಯಕ್ಕೆ ಅನುಮಾನ ಎನ್ನಲಾಗಿತ್ತಿದೆ. ಇಂತಹ ಪ್ರಕ್ಷುಬ್ದ ಸಂದರ್ಭದಲ್ಲಿ ಮಕ್ಕಳು ಶಾಲೆಗೆ, ಕಾಲೇಜಿ ತೆರಳುವುದು ಸರಿಯಲ್ಲ ಎಂದು ಅರಿತು ರಜೆ ಘೋಷಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ಜೋಧಪುರ ಮಾತ್ರವಲ್ಲದೇ ನೆನ್ನೆಯೇ ರಾಜಸ್ತಾನದ ರಾಜ್ಯದ ಜೈಸಲ್ಮೇರ್ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿತ್ತು. ಮಕ್ಕಳು ಪೋಷಕರಿಗೆ ಸುರಕ್ಷಿತ ಸ್ಥಳದಲ್ಲಿರುವಂತೆ, ಸಣ್ಣ ಮಕ್ಕಳನ್ನು ಹೊರ ಬಡಿದಂತೆ ಎಚ್ಚರಿಕೆ ಸಹ ಶಾಲಾ ಆಡಳಿತ ಮಂಡಳಿ ತಿಳಿಸಿವೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಪ್ರವಾಸಿಗರನ್ನು ಹತ್ಯೆಗೈದ ಬಳಿಕ ಕಣಿವೆ ರಾಜ್ಯದಲ್ಲಿ ಸಹಜ ಸ್ಥಿತಿಯ ವಾತಾವರಣ ಇಲ್ಲದಾಗಿದೆ. ಭಯದಲ್ಲೇ ಜನ ಜೀವನ ನಡೆಸುವಂತಾಗಿದೆ. ಹೀಗಾಗಿ ಕಣಿವೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕೈಗೊಂಡಿದ್ದು, ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ. ಕಾಶ್ಮೀರ ವಿಶ್ವವಿದ್ಯಾಲಯವು ಮೇ 10 ರವರೆಗೆ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಮುಂದೂಡಿಕೆ ಮಾಡಿದೆ.
ಪಾಕಿಸ್ತಾನ ಮತ್ತು ಭಾರತದ ಮಧ್ಯ ಯುದ್ಧದ ಕಾರ್ಮೋಡ ಕವಿದಿದೆ. ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಮೇ 7ರಿಂದಲೇ ಜಮ್ಮು, ಸಾಂಬಾ, ಕಥುವಾ, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿನ ಎಲ್ಲಾ ಶಾಲೆಗಳು, ಕಾಲೇಜುಗಳು ಹಾಗು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ. ಕೆಲವು ಶೈಕ್ಷಣಿಕ ಸಂಸ್ಥೆಗಳು ಇಂದು ಗುರುವಾರದಿಂದ ಸ್ಥಗಿತಗೊಳಿಸಲು ಪ್ರಾರಂಭಿಸಿವೆ.












Click it and Unblock the Notifications