Holiday And Bonus: ಪೊಲೀಸರಿಗೆ 7 ದಿನ ರಜೆ ಮತ್ತು ₹10,000 ಬೋನಸ್ ಘೋಷಣೆ
Holiday And Bonus: 2025ರ ಜನವರಿ ಆರಂಭದಿಂದಲೂ ಸರ್ಕಾರಿ ಶಾಲಾ-ಕಾಲೇಜು, ಕಚೇರಿಗಳಿಗೆ ಸಾಲು ರಜೆಗಳ ಹಬ್ಬದೂಟವೇ ಸಿಕ್ಕಂತಾಗಿದೆ. ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ಹಿನ್ನೆಲೆ ರಜೆಗಳನ್ನು ನೀಡಲಾಗಿತ್ತು. ಇನ್ನು ಇದೀಗ ಈ ಭಾಗದ ಪೊಲೀಸ್ ಅಧಿಕಾರಿಗಳಿಗೆ ಬೋನಸ್ ಸಹಿತ 7 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಉತ್ತರದ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಭಕ್ತರ ದಂಡೇ ಹರಿದುಬಂದ ಹಿನ್ನೆಲೆ ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಶಿಕ್ಷಕರು ಮಾತ್ರ ಶಾಲಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯನ್ನು ನಡೆಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಫೆಬ್ರವರಿ 26ರಂದು ಮಹಾಕುಂಭಮೇಳೆ ಮುಕ್ತಾಯವಾಗಿದ್ದು, ಇಷ್ಟು ದಿನಗಳ ಕಾಲ ಭಕ್ತರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಹಾಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಂಡ ಪೊಲೀಸರಿಗೆ ಸರ್ಕಾರವು ವಿಶೇಷ ಘೋಷಣೆ ಮಾಡಿದೆ.

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಭದ್ರತೆಗೆ ನಿಯೋಜಿಸಿದ್ದ 75,000 ಪೊಲೀಸರಿಗೆ ತಲಾ 10,000 ರೂಪಾಯಿ ಬೋನಸ್ ಹಾಗೂ 7 ದಿನ ರಜೆ ನೀಡುವುದಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ. ಅಲ್ಲದೆ, ಐಸಿಹಾಸಿಕ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಅವರು ಅತ್ಯಂತ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿದ್ದಾರೆ. 45 ದಿನಗಳ ಕಾಲ ಪ್ರಯಾಗ್‌ರಾಜ್‌ನತ್ತ ಹರಿದುಬಂದ ಜನಸಾಗರವನ್ನು ಯಶಸ್ವುಯಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಕುಂಭಮೇಳದ ವೇಳೆ ಜನರು ಎಷ್ಟೇ ನೂಕಾಟ, ತಳ್ಳಾಟ ಮುಂದುವರೆಸಿದರೂ ಪೊಲೀಸರು ಮಾತ್ರ ತಮ್ಮ ತಾಳ್ಮೆ ಕಳೆದುಕೊಳ್ಳದೆ ಕರ್ತವ್ಯ ನಿಷ್ಠೆಯನ್ನೂ ಮೆರೆದಿದ್ದಾರೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ ಸಕಾರಗೊಂಡಿದೆ ಅಂದರೆ ಅದು ಪೊಲೀಸರ ಸಾಂಘಿಕ ಪ್ರಯತ್ನದಿಂದಾಗಿ ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳ ಒಂದು ನಂಬಿಕೆಯ ಕಾರ್ಯಕ್ರಮ ಆಗಿರಲಿಲ್ಲ. ಉತ್ತರ ಪ್ರದೇಶದ ಆರ್ಥಿಕತೆಯೂ ತುಂಬಾ ವೃದ್ಧಿಯಾಗಿದೆ. ಪ್ರಯಾಗ್‌ರಾಜ್‌ನ ಮೂಲಸೌಕರ್ಯಕ್ಕೆ ಸರ್ಕಾರ 7,500 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದಕ್ಕೆ ಪರ್ಯಾಯವಾಗಿ 3.5 ಲಕ್ಷ ಕೋಟಿ ರೂಪಾಯಿ ಆದಾಯ ಹರಿದುಬಂದಿದೆ ಎಂದು ಹೇಳಿದ್ದಾರೆ.
ಒಂದಾನೊಂದು ಕಾಲದಲ್ಲಿ ಮಾಫಿಯಾ, ದಂಧೆ ನಿಯಂತ್ರಣಾ ಮಾಡುತ್ತಿದ್ದ ಪೊಲೀಸ್ ಇಲಾಖೆಯಲ್ಲಿ ತುಂಬಾ ಪರಿವರ್ತನೆ ಕಂಡುಬಂದಿದೆ. ಇದೀಗ ಮಿತ್ರ ಪೊಲೀಸ್ ಆಗಿ ಅವರು ಬದಲಾಗಿದ್ದಾರೆ. ಈ ಬಗ್ಗೆ ಜನರಿಂದಲೂ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ಹರಿಯಾಣದ ಶಾಲಾ ವಿದ್ಯಾರ್ಥಿಗಳಿಗೆ ದೊಡ್ಡ ಶುಭ ಸುದ್ದಿಯೊಂದು ಇದೆ. ಹರಿಯಾಣ ಸರ್ಕಾರ ಮಾರ್ಚ್ ತಿಂಗಳ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಇದರನ್ವಯ ಮಾರ್ಚ್ ತಿಂಗಳಿನಲ್ಲಿ ಶಾಲೆಗಳು 8 ದಿನಗಳ ಕಾಲ ಮುಚ್ಚಲ್ಪಡುತ್ತವೆ ಎಂದು ತಿಳಿದುಬಂದಿದೆ.
ಮಾರ್ಚ್ ತಿಂಗಳ ರಜೆಗಳ ಪಟ್ಟಿ
* ಮಾರ್ಚ್ 02 - ಭಾನುವಾರ
* ಮಾರ್ಚ್ 08 - ಎರಡನೇ ಶನಿವಾರ
* ಮಾರ್ಚ್ 09 - ಭಾನುವಾರ
* ಮಾರ್ಚ್ 14 - ಹೋಳಿ, ಶುಕ್ರವಾರ
* ಮಾರ್ಚ್ 16 - ಭಾನುವಾರ
* ಮಾರ್ಚ್ 23 - ಭಾನುವಾರ
* ಮಾರ್ಚ್ 30 - ಭಾನುವಾರ
* ಮಾರ್ಚ್ 31 - ಈದ್ ಉಲ್ ಫಿತರ್, ಸೋಮವಾರ
ಶಾಲಾ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 2:30ರ ವರೆಗೆ ಈ ರಾಜ್ಯದಲ್ಲಿ ತರಗತಿಗಳು ನಡೆಯುತ್ತವೆ. ಇನ್ನು ಹರಿಯಾಣದಲ್ಲಿ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಮುಗಿದ ಬಳಿಕ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ನಂತರ, ಮುಂದಿನ ಹಂತದಲ್ಲಿ ಶಾಲೆಗಳು ಏಪ್ರಿಲ್ 01, 2025ರಿಂದ ತೆರೆಯಲ್ಪಡುತ್ತವೆ ಎಂದು ತಿಳಿದುಬಂದಿದೆ.












Click it and Unblock the Notifications