ಹೋಳಿ ಹಬ್ಬಕ್ಕಾಗಿ ವಿಶೇಷ ರೈಲುಗಳು: ವೇಳಾಪಟ್ಟಿ, ದಿನಾಂಕ, ರೈಲಿನ ಸಂಖ್ಯೆ, ನಿಲುಗಡೆಗಳ ಕುರಿತು ಮಾಹಿತಿ ಪಡೆಯಿರಿ
ಮಾರ್ಚ್ 8 ರಂದು ಹೋಳಿ ಆಚರಿಸಲಾಗುವುದು. ಈ ಸಮಯದಲ್ಲಿ ಪ್ರಯಾಣದ ಬೇಡಿಕೆಯಲ್ಲಿ ಹೆಚ್ಚಳವನ್ನು ರೈಲು ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಈ ಕಾರಣಕ್ಕಾಗಿಯೇ ವಿಶೇಷ ರೈಲುಗಳನ್ನು ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನವದೆಹಲಿ, ಫೆಬ್ರವರಿ 15: ಹೋಳಿ ಸೇರಿದಂತೆ ಮುಂಬರುವ ರಜಾದಿನಗಳಲ್ಲಿ ನಿರೀಕ್ಷಿತವಾಗಿ ರೈಲುಗಳಲ್ಲಿ ದಟ್ಟಣೆ ಹೆಚ್ಚಿರುತ್ತದೆ. ಇದನ್ನು ನಿಯಂತ್ರಿಸಲು ಭಾರತೀಯ ರೈಲ್ವೇ ಸಿದ್ಧವಾಗಿದೆ. ಹೋಳಿ ಋತುವಿನಲ್ಲಿ ಪ್ರಯಾಣಿಕರನ್ನು ನಿರ್ವಹಿಸಲು ಹಲವಾರು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ವಿಶೇಷ ರೈಲುಗಳನ್ನು ಭಾರತೀಯ ರೈಲ್ವೇ ಘೋಷಿಸಿದೆ. ಮಾರ್ಚ್ 8 ರಂದು ಹೋಳಿ ಆಚರಿಸಲಾಗುವುದು. ಈ ಸಮಯದಲ್ಲಿ ಪ್ರಯಾಣದ ಬೇಡಿಕೆಯಲ್ಲಿ ಹೆಚ್ಚಳವನ್ನು ರೈಲು ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಈ ಕಾರಣಕ್ಕಾಗಿಯೇ ವಿಶೇಷ ರೈಲುಗಳನ್ನು ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಮಧ್ಯಪ್ರದೇಶ, ಕೇರಳ ಮತ್ತು ಇತರ ರಾಜ್ಯಗಳಿಗೆ ಪ್ರಯಾಣಿಕರು ಭೇಟಿ ನೀಡುತ್ತಾರೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ರೈಲು ಸೌಕರ್ಯವನ್ನು ಸುಧಾರಿಸಲು ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಹೋಳಿ ವಿಶೇಷ ರೈಲುಗಳು: ವೇಳಾಪಟ್ಟಿ
ಮಾರ್ಚ್ 10 ರಿಂದ ಮಾರ್ಚ್ 24 ರವರೆಗೆ, ಪ್ರತಿ ಶುಕ್ರವಾರ ಮಧ್ಯಾಹ್ನ 3:30 ಕ್ಕೆ, ರೈಲು ಸಂಖ್ಯೆ 05271 ಮುಜಫರ್‌ಪುರ-ಯಶವಂತಪುರ ಹೋಳಿ ವಿಶೇಷವು ಮುಜಫರ್‌ಪುರದಿಂದ ಹೊರಟು ಹಲವಾರು ನಿಲ್ದಾಣಗಳ ಮೂಲಕ ಸಾಗಿ ಭಾನುವಾರ ಸಂಜೆ 4:30 ಕ್ಕೆ ಬೆಂಗಳೂರಿನ ಯಶವಂತಪುರಕ್ಕೆ ಆಗಮಿಸುತ್ತದೆ.

ಮಾರ್ಚ್ 13 ರಿಂದ ಮಾರ್ಚ್ 27 2023 ರ ವರೆಗೆ, ಪ್ರತಿ ಸೋಮವಾರ ಬೆಳಿಗ್ಗೆ 7:30 ಕ್ಕೆ, ರೈಲು ಸಂಖ್ಯೆ 05272 ಯಶವಂತಪುರ-ಮುಜಾಫರ್‌ಪುರ ಸಾಪ್ತಾಹಿಕ ಹೋಳಿ ವಿಶೇಷವು ಹೊರಟು ಬುಧವಾರ ಮಧ್ಯಾಹ್ನ ಮುಜಫರ್‌ಪುರಕ್ಕೆ ತಲುಪುತ್ತದೆ.
ಮಾರ್ಚ್ 9 ರಿಂದ ಮಾರ್ಚ್ 23 ರವರೆಗೆ, ರೈಲು ಸಂಖ್ಯೆ 03255 ಪಾಟ್ನಾ-ಆನಂದ್ ವಿಹಾರ್ ಸೂಪರ್‌ಫಾಸ್ಟ್ ಹೋಳಿ ವಿಶೇಷ ರೈಲು ಪ್ರತಿ ಗುರುವಾರ ಮತ್ತು ಭಾನುವಾರ ರಾತ್ರಿ 10:00 ಗಂಟೆಗೆ ಪಾಟ್ನಾದಿಂದ ಹೊರಡಲಿದ್ದು, ಹಲವಾರು ನಿಲ್ದಾಣಗಳಲ್ಲಿ ನಿಲುಗಡೆ ಮಾಡಿದ ನಂತರ ಮರುದಿನ ಮಧ್ಯಾಹ್ನ 3:00 ಗಂಟೆಗೆ ಆನಂದ್ ವಿಹಾರ್‌ಗೆ ಆಗಮಿಸುತ್ತದೆ.
ಮಾರ್ಚ್ 10 ರಿಂದ ಮಾರ್ಚ್ 24, 2023 ರ ವರೆಗೆ, ರಾತ್ರಿ 11:30 ಕ್ಕೆ, ಶುಕ್ರವಾರ ಮತ್ತು ಸೋಮವಾರದಂದು, ರೈಲು ಸಂಖ್ಯೆ 03256 ಆನಂದ್ ವಿಹಾರ್‌ನಿಂದ ಹೊರಟು ಪಾಟ್ನಾಕ್ಕೆ ಪ್ರಯಾಣಿಸಿ, ಮರುದಿನ ಸಂಜೆ 5:20 ಕ್ಕೆ ತಲುಪುತ್ತದೆ. .

ಮಾರ್ಚ್ 9 ಮತ್ತು ಮಾರ್ಚ್ 16, 2023 ರಂದು, 12.10 ಗಂಟೆಗೆ ಹೊರಡುವ ಬರೌನಿ-ಪುಣೆ ಸಾಪ್ತಾಹಿಕ ಹೋಳಿ ವಿಶೇಷವು ಸುಮಾರು 10.30 ಗಂಟೆಗೆ ಪುಣೆಗೆ ಆಗಮಿಸಲಿದೆ.
ಮಾರ್ಚ್ 11 ಮತ್ತು ಮಾರ್ಚ್ 18, 2023 ರಂದು, ಶನಿವಾರ, ರೈಲು ಸಂಖ್ಯೆ 05280 ಪುಣೆಯಿಂದ ಬರೌನಿಗೆ ಬೆಳಿಗ್ಗೆ 5:00 ಗಂಟೆಗೆ ಹೊರಟು ಮಧ್ಯಾಹ್ನ 1:00 ಗಂಟೆಗೆ ಬರೌನಿಗೆ ಆಗಮಿಸುತ್ತದೆ.












Click it and Unblock the Notifications