ಕೊಲ್ಕತ್ತ: ಹಿಂದೂ ಪರ ಸಂಘಟನೆ ಸದಸ್ಯರಿಂದ ಪತ್ರಕರ್ತರ ಮೇಲೆ ಹಲ್ಲೆ

Posted By:
Subscribe to Oneindia Kannada

ಕೊಲ್ಕತ್ತ, ಫೆಬ್ರವರಿ 14: ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾದ ಮುಸ್ಲಿಂರನ್ನು ಮಾತನಾಡಿಸಲು ಪ್ರಯತ್ನ ಮಾಡಿದ್ದಕ್ಕೆ ಹಿಂದೂ ಸಂಹತಿ ಸಂಘಟನೆ ಸದಸ್ಯರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.

ನಗರದ ಧಾರ್ಮಾತಲಾ ಪ್ರದೇಶದ ಒಂದೇ ಕುಟುಂಬದ 14 ಮಂದಿ ಮುಸ್ಲಿಂರು ಹಿಂದೂ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಹಿಂದೂ ಸಮಿತಿ ಹೇಳಿತ್ತು. ಇದರ ಸತ್ಯಾ ಸತ್ಯತೆ ತಿಳಿಯಲು ಮತಾಂತರ ಆಗಿದ್ದಾರೆ ಎಂದು ಹೇಳಲಾದ ಮುಸ್ಲಿಂರನ್ನು ಮಾತನಾಡಿಸಲು ಪತ್ರಕರ್ತರು ತೆರಳಿದಾಗ ಹಿಂದೂ ಸಂಘಟನೆ ಸದಸ್ಯರು ಗೂಂಡಾ ಗಿರಿ ತೋರಿಸಿ 20ಕ್ಕೂ ಹೆಚ್ಚು ಪತ್ರಕರ್ತರನ್ನು ಥಳಿಸಿದ್ದಾರೆ. ಘಟನೆಯಲ್ಲಿ ಹಲವು ಪತ್ರಕರ್ತರಿಗೆ ಗಾಯಗಳಾಗಿವೆ.

ಹಿಂದೂ ಸಂಹತಿ ಸಂಘಟನೆಯ ಅಧ್ಯಕ್ಷ ತಪನ್ ಘೋಷ್ ಮತ್ತು ಕಾರ್ಯಕ್ರಮದ ಆಯೋಜಕರು ಅಲ್ಲಿಯೇ ಇದ್ದರೂ ಕೂಡ ಅವರು ಪತ್ರಕರ್ತರ ನೆರವಿಗೆ ಬರದೇ ಥಳಿಸುತ್ತಿದ್ದವರನ್ನು ಹುರಿದುಂಬಿಸುತ್ತಿದ್ದರು ಎಂದು ಹಲ್ಲೆಗೆ ಒಳಗಾದ ಪತ್ರಕರ್ತರು ಹೇಳಿದ್ದಾರೆ ಎಬಿಪಿ ಆನಂದ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಹಿಂದೂ ಸಂಘಟನೆ ಕಾರ್ಯಕರ್ತರಿಂದ ಯುವತಿಗೆ ಲೈಂಗಿಕ ದೌರ್ಜನ್ಯ?

Hindutva outfits attacked journalists in Kolkata

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆಯನ್ನು ಖಂಡಿಸಿದ್ದು, ತ್ವರಿತ ತನಿಖೆಗೆ ಆದೇಶ ನೀಡಿದ್ದಾರೆ. ಘಟನೆ ಸಂಬಂಧ ಈಗಾಗಲೇ ಮೂರು ಜನರನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The journalists were reportedly beaten up when they went to talk to members of a Muslim family, who allegedly converted to Hinduism.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ