ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ vs ಹಿಂದುತ್ವವಾದಿ: ರಾಹುಲ್‌ ಗಾಂಧಿಯ ಹೊಸ ವಿವರಣೆ

|
Google Oneindia Kannada News

ನವದೆಹಲಿ, ಡಿಸೆಂಬರ್‌ 20: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹಿಂದೂ vs ಹಿಂದುತ್ವವಾದಿ ವ್ಯತ್ಯಾಸದ ವಿವರಣೆಯನ್ನು ಮುಂದುವರಿಸಿದ್ದಾರೆ. "ಹಿಂದೂಗಳು ಎಲ್ಲರ ಡಿಎನ್‌ಎಗಳು ಬೇರೆ ಬೇರೆ ಎಂದು ನಂಬಿದ್ದಾರೆ. ಆದರೆ ಹಿಂದೂತ್ವವಾದಿಗಳು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಎಂದು ಹೇಳುತ್ತಾರೆ," ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಮುಂದಿನ ವರ್ಷ ಪಂಜಾಬ್‌, ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ತಮ್ಮ ಭತ್ತಳಿಕೆಯಲ್ಲಿರುವ ಬಾಣವನ್ನು ಪ್ರಯೋಗ ಮಾಡುತ್ತಲಿದೆ. ಈ ನಡುವೆ ಕಾಂಗ್ರೆಸ್‌ ಮಾಜಿ ಅಧ್ಯಕ್ಷ, ವಯನಾಡು ಸಂಸದ ರಾಹುಲ್‌ ಗಾಂಧಿ ಹಿಂದೂ vs ಹಿಂದುತ್ವವಾದಿ ವ್ಯತ್ಯಾಸವನ್ನು ವಿವರಿಸುತ್ತಲಿದ್ದಾರೆ.

 ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌

ಈ ಬಗ್ಗೆ ಹಿಂದಿ ಭಾಷೆಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, "ಎಲ್ಲಾ ಜನರ ಡಿಎನ್‌ಎ ಬೇರೆ ಬೇರೆ ಆಗಿದೆ ಹಾಗೂ ಅನನ್ಯವಾಗಿದೆ ಎಂದು ಹಿಂದೂಗಳು ನಂಬಿದ್ದಾರೆ. ಆದರೆ ಹಿಂದುತ್ವವಾದಿಗಳು. ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಎಂದು ನಂಬಿದ್ದಾರೆ," ಎಂದಿದ್ದಾರೆ. ಈ ಮೂಲಕ ಹಿಂದುತ್ವವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 Hindus believe every persons DNA is unique, Hindutvavadi says all Indians have same DNA Says Rahul

ಈ ಹಿಂದೆಯೂ ಹಿಂದು, ಹಿಂದುತ್ವವಾದಿ ವಿವರಣೆ ನೀಡಿದ್ದ ರಾಹು‌ಲ್‌ ಗಾಂಧಿ

ರಾಹುಲ್‌ ಗಾಂಧಿ ಈ ಹಿಂದೆಯೂ ಹಿಂದು, ಹಿಂದುತ್ವವಾದಿಗಳ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಇತ್ತೀಚೆಗೆ ಜೈಪುರದ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮಹಂಗಾಯಿ ಹಠಾವೋ ರ್‍ಯಾಲಿ (ಬೆಲೆ ಏರಿಕೆ ನಿಲ್ಲಿಸಿ ಸಮಾವೇಶ) ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಭಾರತದ ರಾಜಕೀಯದಲ್ಲಿ ಈಗ ಎರಡು ಪದಗಳ ಮಧ್ಯೆ ಪೈಪೋಟಿ ಇದೆ. ಒಂದು ಹಿಂದೂ ಹಾಗೂ ಇನ್ನೊಂದು ಹಿಂದುತ್ವವಾದ. ಸಾಮಾನ್ಯವಾಗಿ ಹಿಂದೂ ಹಾಗೂ ಹಿಂದುತ್ವವಾದದ ನಡುವೆ ವ್ಯತ್ಯಾಸವಿದೆ. ನಾನು ಹಿಂದೂ. ಆದರೆ ನಾನು ಹಿಂದೂತ್ವವಾದಿ ಅಲ್ಲ. ಮಹಾತ್ಮ ಗಾಂಧಿ ಕೂಡಾ ಹಿಂದೂ, ಹಿಂದುತ್ವವಾದಿ ಅಲ್ಲ," ಎಂದು ಹೇಳಿದ್ದರು.

"ಮಹಾತ್ಮ ಗಾಂಧಿ ಹಿಂದೂ ಆಗಿದ್ದಾರೆ, ಆದರೆ ಹಿಂದೂತ್ವವಾದಿ ಅಲ್ಲ. ಗೋಡ್ಸೆ ಹಿಂದುತ್ವವಾದಿ ಆಗಿದ್ದಾರೆ,. ಈ ದೇಶ ಹಿಂದೂಗಳಿಗೆ ಸೇರಿದ್ದು ಆಗಿದೆ. ಹಿಂದುತ್ವವಾದಿಗಳಿಗೆ ಸೇರಿದ್ದು ಅಲ್ಲ. ಹಿಂದುತ್ವವಾದಿಗಳು ಅಧಿಕಾರ ಪಡೆಯಬೇಕು ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಅವರಿಗೆ ಅಧಿಕಾರ ಮಾತ್ರ ಮುಖ್ಯ ಆಗಿದೆ," ಎಂದು ರಾಹುಲ್‌ ಗಾಂಧಿ ಟೀಕೆ ಮಾಡಿದ್ದಾರೆ.

"ಹಿಂದುತ್ವವಾದಿಗಳಿಗೆ ಅಂತಿಮವಾಗಿ ಬೇಕಾಗಿರುವುದು ಅಧಿಕಾರ ಮಾತ್ರ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಹಿಂದುತ್ವವಾದಿಗಳು ಅಧಿಕಾರದ ಆಶೆ ಮಾಡುತ್ತಾರೆಯೇ ಹೊರತು ಸತ್ಯಾಗ್ರಹ ಮಾಡುವುದಿಲ್ಲ. ಈ ದೇಶದಲ್ಲಿ ಅಧಿಕಾರದ ಹಪಾಹಪಿ ಹೊಂದಿರುವ ಜನರು 2014 ರಿಂದ ದೇಶದಲ್ಲಿ ಆಳ್ವಿಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. 2014 ರಿಂದಲೂ ಹಿಂದೂತ್ವವಾದಿಗಳು ಅಧಿಕಾರದಲ್ಲಿ ಇದ್ದಾರೆ. ಈ ಹಿಂದುತ್ವವಾದಿಗಳನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿ ಹಿಂದುಗಳನ್ನು ಮರಳಿ ಅಧಿಕಾರಕ್ಕೆ ತರುವ ಕಾರ್ಯ ನಡೆಯಬೇಕಾಗಿದೆ," ಎಂದಿದ್ದರು. ಹಾಗೆಯೇ "ಹಿಂದುತ್ವವಾದಿಗಳಿಗೆ ಅಧಿಕಾರ ಬೇಕಾಗಿದೆಯೇ ಹೊರತು ಸತ್ಯವಲ್ಲ. ಹಿಂದೂಗಳು ಎಂದಿಗೂ ಸತ್ಯದ ಜೊತೆಯಾಗಿ ಇರುತ್ತಾರೆ, ಎಂದಿಗೂ ಭಯಪಡಲ್ಲ. ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ, ಯಾರಿಗೂ ಹೆದರದ ಮತ್ತು ಪ್ರತಿಯೊಂದು ಧರ್ಮವನ್ನು ಗೌರವಿಸುವವನೇ ನಿಜವಾದ ಹಿಂದೂ," ಎಂದು ವಿವರಿಸಿದ್ದರು.

2022 ರ ಚುನಾವಣೆ: ಯೋಧರ ಮೇಲೆ ಕಣ್ಣು, ಉತ್ತರಾಖಂಡ ರಾಹುಲ್‌ ರ್‍ಯಾಲಿಯಲ್ಲಿ ಬಿಪಿನ್ ಕಟ್-ಔಟ್‌2022 ರ ಚುನಾವಣೆ: ಯೋಧರ ಮೇಲೆ ಕಣ್ಣು, ಉತ್ತರಾಖಂಡ ರಾಹುಲ್‌ ರ್‍ಯಾಲಿಯಲ್ಲಿ ಬಿಪಿನ್ ಕಟ್-ಔಟ್‌

ಕಾಂಗ್ರೆಸ್‌ನಿಂದ ಬಿಜೆಪಿ ಹಠಾವೋ ಅಭಿಯಾನ

ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳಲ್ಲಿ 2022ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಓಡಿಸಿ (ಬಿಜೆಪಿ ಹಠಾವೋ) ಎನ್ನುವ ಅಭಿಯಾನವನ್ನು ನಡೆಸಲು ಆರಂಭ ಮಾಡಿದೆ. ಕೇಂದ್ರ ಸರ್ಕಾರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಂಕು ಸ್ಥಾಪನೆ ಮಾಡುವುದಲ್ಲಿ ತೊಡಗಿರುವಾಗ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧವಾಗಿ ಅಭಿಯಾನವನ್ನು ನಡೆಸುತ್ತಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ಆಫ್ರಿಕಾ ನೆಲದಲ್ಲಿ ಯಾರೂ ಮಾಡದ ರೆಕಾರ್ಡ್ ಬ್ರೇಕ್ ಮಾಡ್ತಾರಾ ರಿಷಬ್ ಪಂತ್ | Oneindia Kannada

English summary
Hindus believe every person's DNA is unique, Hindutvavadi says all Indians have same DNA Says Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X