• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು: ವೀರ್ ದಾಸ್ ಕಾಮಿಡಿ ಶೋ ರದ್ದು ಮಾಡಲು ಒತ್ತಾಯ

|
Google Oneindia Kannada News

ನವದೆಹಲಿ, ನವೆಂಬರ್ 8: ಖ್ಯಾತ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ವೀರ್ ದಾಸ್ ಸಂಕಷ್ಟದಲ್ಲಿದ್ದಾರೆ. ವೀರ್ ದಾಸ್ ಸ್ಟ್ಯಾಂಡ್‌ಅಪ್ ಕಾಮಿಡಿ ಶೋಗಳು ಮತ್ತು ವೆಬ್ ಸರಣಿಗಳಿಂದ ಪ್ರಸಿದ್ಧರಾಗಿದ್ದಾರೆ. ಆದರೆ, ಅವರು ನಗಿಸುವುದಕ್ಕಾಗಿ ಮಾತಾಡಿದ ಮಾತುಗಳಿಂದಲೇ ಹಲವು ವಿವಾದಗಳಿಗೆ ಸಿಲುಕಿದ್ದಾರೆ. ಈಗ ಅವರಿಗೆ ಬೆಂಗಳೂರಿಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ.

ಇತ್ತೀಚೆಗೆ ಹಿಂದೂ ಜನಜಾಗೃತಿ ಸಮಿತಿಯು ವೀರ ದಾಸ್ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ನವೆಂಬರ್ 10ರಂದು ನಡೆಯಲಿರುವ ಹಾಸ್ಯನಟರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆಯೂ ಸಮಿತಿ ಒತ್ತಾಯಿಸಿದೆ. ಹಿಂದೂ ಜನಜಾಗೃತಿ ಸಮಿತಿಯು ವೀರ ದಾಸ್ ತಮ್ಮ ಹಾಸ್ಯ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುತ್ತಿದ್ದಾನೆ ಮತ್ತು ಪ್ರಪಂಚದ ಮುಂದೆ ಭಾರತಕ್ಕೆ ಕಳಂಕ ಬರುವಂತಹ ಕೆಲಸ ಮಾಡಿದ್ದಾರೆ ಎಂದು ದೂರಿದೆ.

ನವದೆಹಲಿ: ಆಟೋ-ಟ್ಯಾಕ್ಸಿ ದರದಲ್ಲಿ ಏರಿಕೆ ಹಿಂದೆ ಎಷ್ಟಿತ್ತು? ಈಗ ಎಷ್ಟಾಯಿತು? ನವದೆಹಲಿ: ಆಟೋ-ಟ್ಯಾಕ್ಸಿ ದರದಲ್ಲಿ ಏರಿಕೆ ಹಿಂದೆ ಎಷ್ಟಿತ್ತು? ಈಗ ಎಷ್ಟಾಯಿತು?

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಮಿತಿಯು, 'ನವೆಂಬರ್ 10 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹಾಸ್ಯನಟ ವೀರ್ ದಾಸ್ ಕಾಮಿಡಿ ಶೋ ನಡೆಸಲಿದ್ದಾರೆ. ಈ ಹಿಂದೆ ಅವರು ವಾಷಿಂಗ್ಟನ್‌ನಲ್ಲಿ ಮಹಿಳೆಯರ ವಿರುದ್ಧ, ನಮ್ಮ ದೇಶದ ಮತ್ತು ಭಾರತದ ಪ್ರಧಾನಿ ವಿರುದ್ಧ ಹಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಈ ಬಗ್ಗೆ ಮುಂಬೈ ಮತ್ತು ದೆಹಲಿ ಪೊಲೀಸರಿಗೂ ದೂರು ನೀಡಿದ್ದೆವು. ಇದು ಐಪಿಸಿ ಸೆಕ್ಷನ್ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ.

ಬೆಂಗಳೂರಿನಲ್ಲಿ ಅವಕಾಶ ನೀಡಬಾರದು

ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ವಿವಾದಾತ್ಮಕ ವ್ಯಕ್ತಿಗೆ ಬೆಂಗಳೂರಿನಂತಹ ಕೋಮುಸೂಕ್ಷ್ಮ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಬಾರದು' ಎಂದು ಸಮಿತಿ ದೂರು ಪತ್ರದಲ್ಲಿ ತಿಳಿಸಿದೆ. ವಿಶೇಷವಾಗಿ ಕರ್ನಾಟಕವು ಈಗಾಗಲೇ ಕೋಮು ಘಟನೆಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಈ ಶೋಗೆ ಅವಕಾಶ ನೀಡಬಾರದು ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಶೋ ಮಾಡಲು ವೀರ ದಾಸ್ ಅನುಮತಿ ಪಡೆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಅವರಿಗೆ ಅನುಮತಿ ನೀಡದೆ ಕೂಡಲೇ ಈ ಪ್ರದರ್ಶನವನ್ನು ರದ್ದುಗೊಳಿಸಬೇಕು.

ವೀರ ದಾಸ್ ಯಾರು?

ವೀರ್ ದಾಸ್ ಅಮೆರಿಕದಲ್ಲಿ ನಡೆದ ತಮ್ಮ ಕಾರ್ಯಕ್ರಮವೊಂದರಲ್ಲಿ 'ನಾವು ಹಗಲಿನಲ್ಲಿ ಮಹಿಳೆಯರನ್ನು ಪೂಜಿಸುವ ಮತ್ತು ರಾತ್ರಿಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡುವ ದೇಶದಿಂದ ಬಂದಿದ್ದೇನೆ' ಎಂದು ಹೇಳಿದ್ದರು. ವೀರ್ ದಾಸ್ ಅವರ ಈ ಹೇಳಿಕೆಗಳಿಂದ ಸಾಕಷ್ಟು ಗದ್ದಲ ಎದ್ದಿತ್ತು. ಇದರೊಂದಿಗೆ ಮುಂಬೈ ಪೊಲೀಸರು ಇತನ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು.

Hindu Janajagruti Samiti demands police to cancel Vir Dass show,

ವೀರ್ ದಾಸ್ ಒಬ್ಬ ಭಾರತೀಯ-ಅಮೇರಿಕನ್ ಹಾಸ್ಯನಟ ಮತ್ತು ಸಂಗೀತಗಾರ. ಅವರು ತಮ್ಮ ವೃತ್ತಿಜೀವನವನ್ನು ಸ್ಟ್ಯಾಂಡ್ಅಪ್ ಕಾಮಿಡಿಯಿಂದ ಪ್ರಾರಂಭಿಸಿದರು. ವೀರ್ ಬದ್ಮಾಶ್ ಕಂಪನಿ, ಡೈಲಿ ಬೆಲ್ಲಿ, ಗೋ ಗೋವಾ ಗಾನ್ ಮುಂತಾದ ಹಲವು ಚಿತ್ರಗಳ ಭಾಗವಾಗಿದ್ದಾರೆ. ಅವರು OTTನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

English summary
The Hindu Janajagruti Samiti on Monday claimed comedian Vir Das' show 'hurts religious centimes of Hindu(s)' and has demanded police to cancel a show planned in Benglauru on November 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X