Breaking: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭೂಕಂಪನ
ಶಿಮ್ಲಾ, ಡಿಸೆಂಬರ್ 16: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ವೇಳೆಯಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ರಾತ್ರಿ 10.02ರ ಸುಮಾರಿಗೆ ಕಂಪನದ ಅನುಭವವಾಗಿದ್ದು, ಕಿನ್ನೌರ್‌ನ ನಾಕೋ ಬಳಿಯ ಚಾಂಗೊ ನಿಚ್ಲಾ ಭೂಕಂಪದ ಕೇಂದ್ರಬಿಂದು ಎಂದು ವಿಪತ್ತು ನಿರ್ವಹಣಾ ವಿಶೇಷ ಕಾರ್ಯದರ್ಶಿ ಸುದೇಶ್ ಮೊಕ್ತಾ ತಿಳಿಸಿದ್ದಾರೆ.
ಈ ಭೂಕಂಪದ ಆಳವು 5 ಕಿಮೀ ಉತ್ತರದಲ್ಲಿ 31.931 ಡಿಗ್ರಿ ಮತ್ತು ಪೂರ್ವದಲ್ಲಿ 78.638 ಡಿಗ್ರಿ ಎಂದು ಗೊತ್ತಾಗಿದೆ. ಈ ಕಂಪನ ಸಂಭವಿಸಿದ ಕೆಲವು ಸೆಕೆಂಡುಗಳಲ್ಲಿ ಜನರು ಆತಂಕಗೊಂಡಿದ್ದರು. ಭೂಮಿ ಕಂಪಿನಿಸ ಅನುಭವ ಆಗುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು.

ಯಾವುದೇ ಪ್ರಾಣಹಾನಿಯಾಗಿಲ್ಲ:
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಲಘು ಭೂಕಂಪನದಲ್ಲಿ ಯಾವುದೇ ರೀತಿ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications