ಎಲ್ಲಾ ಎಕ್ಸಿಟ್ ಸಮೀಕ್ಷೆ : ದೇವ ಭೂಮಿ ಹಿಮಾಚಲದಲ್ಲಿ ಕೇಸರಿ ರಂಗು
Recommended Video

ಬೆಂಗಳೂರು, ಡಿಸೆಂಬರ್ 14: ದೇವ ಭೂಮಿ ಹಿಮಾಚಲದಲ್ಲಿ ಕೇಸರಿ ರಂಗು ಮೇಳೈಸಲಿದೆ. ಅಧಿಕಾರದಲ್ಲಿದ್ದ ಕಾಂಗ್ರೆಸ್ ಸೋತು ಸುಣ್ಣವಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಹೇಳಿದೆ.
ಎಲ್ಲಾ ಪ್ರಮುಖ ಎಕ್ಸಿಟ್ ಪೋಲ್ ಫಲಿತಾಂಶಗಳ ತುಲನೆ, ಸರಾಸರಿ ಲೆಕ್ಕಾಚಾರ ಹಾಕಿದ ಮೇಲೆ ಬಿಜೆಪಿ ಸುಲಭವಾಗಿ ಮ್ಯಾಜಿಕ್ ನಂಬರ್ ದಾಟುವುದನ್ನು ಕಾಣಬಹುದು.
ಹತ್ತು ಹಲವು ಸಂಸ್ಥೆಗಳು ಎಕ್ಸಿಟ್ ಪೋಲ್ ವರದಿ ನೀಡುತ್ತಿದ್ದು, ಈ ಎಲ್ಲಾ ಸಮೀಕ್ಷೆಗಳ ಸಂಗ್ರಹ, ಸರಾಸರಿ ವರದಿ ಇಲ್ಲಿದೆ. ಡಿಸೆಂಬರ್ 18ರಂದು ಅಂತಿಮ ಫಲಿತಾಂಶ ಹೊರಬರಲಿದೆ.
ಇತಿಹಾಸ ಅವಲೋಕಿಸಿದರೆ ಇಲ್ಲಿ ಒಮ್ಮೆ ಕೂಡಾ ಸತತವಾಗಿ ಯಾವುದೇ ಪಾರ್ಟಿ ಅಧಿಕಾರ ಉಳಿಸಿಕೊಂಡಿಲ್ಲ. 2012ರಲ್ಲಿ ಕಾಂಗ್ರೆಸ್ 36 ಸ್ಥಾನ ಹಾಗೂ ಬಿಜೆಪಿ 26 ಸ್ಥಾನಗಳಿಸಿತ್ತು. ದಾಖಲೆಯ 6ನೇ ಬಾರಿಗೆ ವೀರಭದ್ರ ಸಿಂಗ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಸರಾಸರಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ವೀರಭದ್ರಸಿಂಗ್ ಅಧಿಕಾರ ಕಳೆದುಕೊಳ್ಳಲಿದ್ದು, ಪ್ರೇಮ್ ಕುಮಾರ್ ಧುಮಾಲ್ ಸಿಎಂ ಸೀಟಿಗೇರಬಹುದಾಗಿದೆ.
ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಲೆಕ್ಕದಂತೆ : 68 ಸ್ಥಾನಗಳ ಪೈಕಿ ಬಿಜೆಪಿ 49, ಕಾಂಗ್ರೆಸ್ 18, ಇತರೆ 1 ಸ್ಥಾನ ಗಳಿಸಲಿವೆ.

ಬಿಜೆಪಿ 49/68, ಮ್ಯಾಜಿಕ್ ನಂಬರ್ 35
ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 51
ಜೀ ನ್ಯೂಸ್ ಆಕ್ಸಿಸ್ : 51
ನ್ಯೂಸ್ ನೇಷನ್ : 43-47
ಆಜ್ ತಕ್ ಆಕ್ಸಿಸ್: 47-55
ನ್ಯೂಸ್ ಎಕ್ಸ್ : 42-50
ಸಮಯ್ ಸಿಎನ್ಎಕ್ಸ್ : 42-50

ಕಾಂಗ್ರೆಸ್ 18/68
ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 16
ಜೀ ನ್ಯೂಸ್ ಆಕ್ಸಿಸ್ : 17
ನ್ಯೂಸ್ ನೇಷನ್ : 19-23
ಆಜ್ ತಕ್ ಆಕ್ಸಿಸ್: 13-20
ನ್ಯೂಸ್ ಎಕ್ಸ್ : 18-24
ಸಮಯ್ ಸಿಎನ್ಎಕ್ಸ್ : 18-24

ಇತರೆ 1/68
ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 1
ಜೀ ನ್ಯೂಸ್ ಆಕ್ಸಿಸ್ : 0
ನ್ಯೂಸ್ ನೇಷನ್ :1-3
ಆಜ್ ತಕ್ ಆಕ್ಸಿಸ್: 0-2
ನ್ಯೂಸ್ ಎಕ್ಸ್ : 0-2
ಸಮಯ್ ಸಿಎನ್ಎಕ್ಸ್ : 0-2

ಚುನಾವಣಾ ಪೂರ್ವ- ನಂತರವೂ ಬಿಜೆಪಿ
ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿ 43 ರಿಂದ 47 ಸೀಟು ಗೆದ್ದು ಅಧಿಕಾರ ಸ್ಥಾಪಿಸಲಿದೆ. 35 ಸ್ಥಾನಗಳ ಮ್ಯಾಜಿಕ್ ಸಂಖ್ಯೆ ದಾಟುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ 21 ರಿಂದ 25 ಸ್ಥಾನ ಗಳಿಸಬಹುದು.
ಇತಿಹಾಸ ಅವಲೋಕಿಸಿದರೆ ಇಲ್ಲಿ ಒಮ್ಮೆ ಕೂಡಾ ಸತತವಾಗಿ ಯಾವುದೇ ಪಾರ್ಟಿ ಅಧಿಕಾರ ಉಳಿಸಿಕೊಂಡಿಲ್ಲ. 83 ವರ್ಷ ವಯಸ್ಸಿನ ವೀರಭದ್ರ ಸಿಂಗ್ ಅವರು ಮತ್ತೊಂದು ಅವಧಿಗೆ ಸಿಎಂ ಆಗುವ ಕನಸು ನನಸಾಗದಿರುವ ಸಾಧ್ಯತೆಯಿದ್ದು, ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ (73) ಕನಿಷ್ಟ 2 ವರ್ಷಗಳ ಕಾಲ ಸಿಎಂ ಆಗುವ ಸಾಧ್ಯತೆಯಿದೆ.











Click it and Unblock the Notifications