ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Himachal Pradesh election results 2022: ಬಿಜೆಪಿ ಹಿನ್ನೆಡೆಗೆ ಕಾರಣ ಏನು? ಇಲ್ಲಿದೆ ವಿವರ

|
Google Oneindia Kannada News

ಶಿಮ್ಲಾ, ಡಿಸೆಂಬರ್‌, 08: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯೊಳಗೆ ಸಮಸ್ಯೆಗಳ ಸರಮಾಲೆಗಳೇ ಕಂಡುಬಂದಿದ್ದವು. ನಂತರ ಗುಜರಾತ್‌ನಲ್ಲಿ ಪಕ್ಷವು ಭಿನ್ನವಾಗಿ ಬದಲಾವಣೆಗಳನ್ನು ಮಾಡಿತ್ತು. ಆಗಿನಿಂದ ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್ ಅವರನ್ನೇ ಸಿಎಂ ಆಗಿ ಉಳಿಸಿಕೊಂಡರು. ಅಲ್ಲದೇ ಜೈರಾಮ್‌ ಅವರನ್ನು ಬಿಜೆಪಿ ನಾಯಕರು ಸಿಎಂ ಮಾಡಿದ್ದು ಏಕೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ಹಾಗೂ ಬಿಜೆಪಿ ಹಿನ್ನೆಡೆ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ.

ಜೈರಾಮ್ ಠಾಕೂರ್ ಅವರ ವಿರುದ್ಧ ಯಾವುದೇ ದೊಡ್ಡಮಟ್ಟದ ದೂರುಗಳು ದಾಖಲಾಗದಂತೆ ಬಿಜೆಪಿ ನಾಯಕರು ನೋಡಿಕೊಂಡಿದ್ದರು. ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಹಿಮಾಚಲ ಪ್ರದೇಶಕ್ಕೆ ಸೇರಿರುವುದರಿಂದ ರಾಜ್ಯ ನಾಯಕತ್ವದ ಮೇಲೆ ಹಿಡಿತ ಸಾಧಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮತ್ತು ರಾಜ್ಯ ನಾಯಕರ ಮೇಲೆ ಇದುವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ. ಇದೇ ವೇಳೆ ಪ್ರಚಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ರಾಜ್ಯದಲ್ಲಿನ ಮತದಾರರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳ ನಡುವೆ ವ್ಯತ್ಯಾಸಗಳ ಬಗ್ಗೆ ಗಮನಿಸಿದ್ದಾರೆ. ಜನರು ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪರವಾಗಿ ನಿಂತಿದ್ದರು. ಆದರೂ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಾಗ ರಾಜ್ಯದಲ್ಲಿ ನಾಯಕತ್ವದ ಕೊರತೆ ಎದ್ದು ಕಂಡಿದೆ. ಇದು ಬಿಜೆಪಿ ಹಿನ್ನೆಡೆಗೆ ಕಾರಣವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷದ ಸಾಧನೆ ಏನು?

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಇನ್ನು ಕಾಂಗ್ರೆಸ್ ಪಕ್ಷವನ್ನು ನೋಡುವುದಾದರೆ, ಗುಜರಾತ್‌ಗಿಂತ ಹಿಮಾಚಲದಲ್ಲಿ ಪಕ್ಷವು ಹೆಚ್ಚು ಪ್ರಭಾವಶಾಲಿಯಾಗಿದೆ ಎನ್ನುವ ಮಾಹಿತಿ ಇತ್ತೀಚಿನ ವರದಿಗಳ ಮೂಲಕ ತಿಳಿದುಬಂದಿತ್ತು. ಆದರೆ ಗುಜರಾತ್‌ನಲ್ಲಿನ ಕಾಂಗ್ರೆಸ್‌ನ ಪ್ರಭಾವಶಾಲಿಯಲ್ಲಿ ಹಿಂದೆ ಉಳದಿದೆ. ಹಿಮಾಚಲದಲ್ಲಿ ಮಾತ್ರ ಕಾಂಗ್ರೆಸ್‌ ಗದ್ದುಗೆ ಏರಲು ಮೊದಲಿನಿಂದಲೂ ತಯಾರಿಗಳನ್ನು ನಡೆಸುತ್ತಲೇ ಬಂದಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅಲ್ಲಿನ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿದ್ದರು. ಹೀಗೆ ಜನರ ಸಮಸ್ಯೆಗಳ ಬಗ್ಗೆ ಆಲಿಸಿದ್ದು, ಪಕ್ಷ ಮುನ್ನಡೆ ಸಾಧಿಸಲು ಕಾರಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Himachal Pradesh election results 202: What is reason for BJP setback?

ಇಲ್ಲಿ ಹೆಚ್ಚಾಗಿ ಸೇಬು ಬೆಳೆಯುವ ರೈತರು ಇದ್ದು, ಅವರ ಕಷ್ಟಗಳನ್ನು ಸಹ ಆಲಿಸಿದ್ದರು. ಉದ್ಯೋಗದ ಕೊರತೆ, ಸೇಬು ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳು, ಅಗ್ನಿವೀರ್ ಯೋಜನೆಯ ಬಗ್ಗೆ ಕಾಂಗ್ರೆಸ್‌ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿತ್ತು. ಆದ್ದರಿಂದ ಇಲ್ಲಿ ಕಾಂಗ್ರೆಸ್‌ ಪಕ್ಷ ಮುನ್ನಡೆ ಸಾಧಿಸಲು ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

English summary
BJP in Himachal Pradesh has been having problems, for past two years, now huge setback in counting of votes, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X