ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಮಾಡಿದ 2017ರ ಬಜೆಟ್ ನ ಪ್ರಮುಖ ಘೋಷಣೆಗಳು ಇಲ್ಲಿವೆ.

*20 ಲಕ್ಷ ಆಧಾರ್ ಬೇಸ್ಡ್ ಸ್ವೈಪ್ ಮಷೀನ್ 2020ರ ವೇಳೆಗೆ

*1 ಕೋಟಿ ರುಪಾಯಿಗಿಂತ ಹೆಚ್ಚಿನ ಆದಾಯ ಇರುವವರಿಗೆ ಶೇ 15ರಷ್ಟು ಸರ್ ಚಾರ್ಜ್[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

*50 ಲಕ್ಷದಿಂದ 1 ಕೋಟಿ ರುಪಾಯಿ ಮಧ್ಯೆ ಆದಾಯ ಇರುವವರಿಗೆ ಶೇ 10ರಷ್ಟು ಸರ್ ಚಾರ್ಜ್

*2.5 ಲಕ್ಷದಿಂದ 5 ಲಕ್ಷದ ಆದಾಯಕ್ಕೆ ಶೇ 5ರಷ್ಟು ತೆರಿಗೆ[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

*3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡುವಂತಿಲ್ಲ

*ಐವತ್ತು ಕೋಟಿಗಿಂತ ಕಡಿಮೆ ಆದಾಯ ಇರುವ ಕಂಪನಿಗಳ ಕಾರ್ಪೋರೇಟ್ ತೆರಿಗೆ ಶೇ 25ಕ್ಕೆ ಇಳಿಕೆ

*2017-18 ಸಾಲಿಗೆ 21.74 ಟ್ರಿಲಿಯನ್ ಬಜೆಟ್[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

*ರಕ್ಷಣಾ ವಲಯಕ್ಕೆ 2.74 ಲಕ್ಷ ಕೋಟಿ ಮೀಸಲು

*ವೆಬ್ ಮೂಲಕ ಸೈನಿಕರ ಪಿಂಚಣಿ ವಿತರಣೆ[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

*ಆರ್ಥಿಕ ತಪ್ಪಿತಸ್ಥರ ಆಸ್ತಿ ಜಪ್ತಿಗೆ ಹೊಸ ಕಾನೂನು ಜಾರಿ

*ಐನೂರು ರೈಲು ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್

*ರಾಜಕೀಯ ಪಕ್ಷಗಳು ಚೆಕ್ ಅಥವಾ ಡಿಜಿಟಲ್ ವ್ಯವಹಾರ ಮೂಲಕ ಮಾತ್ರ ದೇಣಿಗೆ ಸಂಗ್ರಹಿಸಬಹುದು

*ಎಲ್ ಎನ್ ಜಿ ಮೇಲೆ ಅಬಕಾರಿ ಸುಂಕ ಶೇ 5ರಿಂದ ಶೇ 2.5ಗೆ ಇಳಿಕೆ[ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ]

*ರಿಯಲ್ ಎಸ್ಟೇಟ್: ತೆರಿಗೆ ಹಾಕಲು ಕ್ಯಾಪಿಟಲ್ ಗೇನ್ಸ್ ಅವಧಿ 3ರಿಂದ 2 ವರ್ಷಕ್ಕೆ ಇಳಿಕೆ

Highlights of Budget 2017

*ಆಯ್ದ ಟಯರ್ -2 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ.[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]

*1.5 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವೇಗದ ಬ್ರ್ಯಾಡ್ ಬಾಂಡ್ ಇಂಟರ್ ನೆಟ್.

*ಪರಿಶಿಷ್ಟ ಜಾತಿಯವರಿಗೆ ಮೀಸಲಾದ ಮೊತ್ತ 55,393 ಕೋಟಿ ರುಪಾಯಿಗೆ ಏರಿಕೆ

*ಬ್ಯಾಂಕ್ ಗಳಿಗೆ ಹತ್ತು ಸಾವಿರ ಕೋಟಿ ರುಪಾಯಿ ಪುನರ್ ಬಂಡವಾಳ

*ಷೇರು ಮಾರುಕಟ್ಟೆ ಪ್ರವೇಶಿಸಲಿರುವ ಐಆರ್ ಸಿಟಿಸಿ

*ಹೊಸ ಮೆಟ್ರೋ ರೈಲು ನೀತಿ ರಚನೆ

*ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಇರುವ ಮೊತ್ತ 64 ಸಾವಿರ ಕೋಟಿಗೆ ಏರಿಕೆ

*ಆರೋಗ್ಯ ಪರಿಶೀಲನೆಗಾಗಿ ಹಿರಿಯ ನಾಗರಿಕರಿಗೆ ಆಧಾರ್ ಮೂಲದ ಸ್ಮಾರ್ಟ್ ಕಾರ್ಡ್ ವಿತರಣೆ

*ಐಆರ್ ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುವಾಗ ಇರುವ ಸೇವಾ ತೆರಿಗೆ ವಾಪಸ್

*2025ರ ವೇಳೆಗೆ ಸಂಪೂರ್ಣ ಕ್ಷಯರೋಗ ನಿವಾರಣೆ ಗುರಿ

*ನರೇಗಾ ಯೋಜನೆಗೆ 38ರಿಂದ 48 ಸಾವಿರ ಕೋಟಿ ರುಪಾಯಿಗೆ ಏರಿಕೆ

*ಪ್ರೌಢಶಿಕ್ಷಣಕ್ಕಾಗಿ ಇನೊವೇಟಿವ್ ಫಂಡ್

*ಪ್ರಧಾನಮಂತ್ರಿ ಆವಾಸ್ ಯೋಜನೆಗೆ 23 ಸಾವಿರ ಕೋಟಿ ಮೀಸಲು

*2017-18ನೇ ಸಾಲಿನಲ್ಲಿ ಗ್ರಾಮೀಣ ವಲಯಕ್ಕೆ 1,87,200 ಕೋಟಿ ರುಪಾಯಿ. ಇದು ದಾಖಲೆ ಮೊತ್ತವಾಗಿದ್ದು, ಶೇ 24ರಷ್ಟು ಏರಿಕೆಯಾಗಿದೆ.

*ರಾಷ್ಟ್ರೀಯ ಕೃಷಿ ಮಾರುಕಟ್ಟೆಗಳು : 585 ಮಾರುಕಟ್ಟೆಗೆ ವಿಸ್ತರಣೆ

*ರಸ್ತೆ ನಿರ್ಮಾಣ: ದಿನಕ್ಕೆ 133 ಕಿ.ಮೀ. ಹೆಚ್ಚಳ.

*ನೀರಾವರಿ ನಿಧಿ 40 ಸಾವಿರ ಕೋಟಿ ರುಪಾಯಿಗೆ ಹೆಚ್ಚಳ.

*ಮೇ 1, 2018ರ ವೇಳೆಗೆ ಶೇ 100ರಷ್ಟು ಗ್ರಾಮೀಣ ವಿದ್ಯುದ್ದೀಕರಣ.

*ನಬಾರ್ಡ್ ನಿಂದ ಸೂಕ್ಷ್ಮ ನೀರಾವರಿ ನಿಧಿ ಸ್ಥಾಪನೆ, ಆರಂಭ ಬಂಡವಾಳವಾಗಿ ಐದು ಸಾವಿರ ಕೋಟಿ ರುಪಾಯಿ.

*ಕೃಷಿ ಸಾಲಕ್ಕಾಗಿ ಈ ವರ್ಷ 10 ಸಾವಿರ ಕೋಟಿ ರುಪಾಯಿ ನಿಗದಿ, ಅರವತ್ತು ದಿನ ಬಡ್ಡಿಯಿಂದ ವಿನಾಯಿತಿ

*ಡೇರಿ ಪ್ರೊಸೆಸಿಂಗ್ ಗೆ ಆರಂಭಿಕವಾಗಿ ಎರಡು ಸಾವಿರ ಕೋಟಿ ರುಪಾಯಿ

*ಗ್ರಾಮೀಣ ಭಾಗದಲ್ಲಿ ಮೂರು ಲಕ್ಷ ಕೋಟಿ ಹೂಡಿಕೆ. ಐವತ್ತು ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಐವತ್ತು ಸಾವಿರ ಕುಟುಂಬಗಳನ್ನು ಬಡತನದಿಂದ ಹೊರತರುವ ಗುರಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is the highlights of Budget of 2017 by Finance minister Arun Jaitely.
Please Wait while comments are loading...