ವಂದೇ ಭಾರತ್ ಪ್ರಯಾಣಿಕರೇ ಗಮನಿಸಿ! ಊಟದ ಬಗ್ಗೆ ಈ ನಿಯಮ ನಿಮಗೆ ಗೊತ್ತೇ?
ನೀವೇನಾದರೂ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಲು ಯೋಜಿಸುತ್ತಿದ್ದರೆ, ಅಲ್ಲಿನ ಊಟದ ಸೌಲಭ್ಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಊಟ ಕಡ್ಡಾಯವೇ, ಎಷ್ಟು ಹಣ ಕೊಡಬೇಕು, ಯಾವ ರೀತಿಯ ಆಹಾರ ಸಿಗುತ್ತದೆ ಎಂಬ ಮಾಹಿತಿಯನ್ನು ಮುಂಚಿತವಾಗಿ ತಿಳಿದುಕೊಳ್ಳುವುದರಿಂದ ಇದರಿಂದ ನಿಮ್ಮ ಪ್ರಯಾಣ ಇನ್ನಷ್ಟು ಸುಗಮವಾಗಿರುತ್ತದೆ.
ಊಟ ತೆಗೆದುಕೊಳ್ಳುವುದು ಕಡ್ಡಾಯವಲ್ಲ
ಇತ್ತೀಚಿನ ನಿಯಮಗಳ ಪ್ರಕಾರ ಪ್ರಯಾಣಿಕರಿಗೆ ಊಟದ ಸೇವೆಯನ್ನು ಕಡ್ಡಾಯಗೊಳಿಸಲಾಗಿಲ್ಲ. ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯಲ್ಲೇ ಪ್ರಯಾಣಿಕರು ಆಹಾರದ ಸೌಲಭ್ಯವನ್ನು ಆಯ್ಕೆ ಮಾಡುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಊಟ ಬೇಡದವರು ಬುಕ್ಕಿಂಗ್ ವೇಳೆಯಲ್ಲಿಯೇ ಕ್ಯಾಟರಿಂಗ್ ಆಯ್ಕೆಯನ್ನು ಕೈಬಿಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇತ್ತೀಚಿನ ನಿಯಮಗಳ ಪ್ರಕಾರ ಪ್ರಯಾಣಿಕರು ಊಟದ ಸೇವೆಯನ್ನು ಪಡೆಯುವುದು ಕಡ್ಡಾಯಗೊಳಿಸಿಲ್ಲ. ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯಲ್ಲಿ ಪ್ರಯಾಣಿಕರು ಆಹಾರದ ಸೌಲಭ್ಯವನ್ನು ಆಯ್ಕೆ ಮಾಡುವ ಅಥವಾ ನಿರಾಕರಿಸುವ ಸ್ವಾತಂತ್ರವನ್ನು ಹೊಂದಿರುತ್ತಾರೆ. ಊಟ ಬೇಡ ಎನ್ನುವವರು ಬುಕ್ಕಿಂಗ್ ವೇಳೆಯಲ್ಲಿ ಕ್ಯಾಟರಿಂಗ್ ಸೌಲಭ್ಯವನ್ನು ಕೈಬಿಡಬಹುದು ಎಂದು ಸಂಸ್ಥೆಯು ತಿಳಿಸಿದೆ.

ನಂತರವೂ ಆಹಾರ ಖರೀದಿಸಬಹುದು
ಬುಕ್ಕಿಂಗ್ ಸಮಯದಲ್ಲಿ ನೀವು ಆಹಾರವನ್ನು ಆಯ್ಕೆ ಮಾಡಿಕೊಳದಿದ್ದರೂ, ಪ್ರಯಾಣದ ಸಂದರ್ಭದಲ್ಲಿ ಆಹಾರವನ್ನು ಖರೀದಿಸುವ ಅವಕಾಶ ಇರುತ್ತದೆ. ಆದ್ದರಿಂದ ಪ್ರಯಾಣಿಕರು ಯಾವುದೆ ಪ್ರಯಾಣಿಕರು ಆತಂಕವಿಲ್ಲದೆ ಪ್ರಯಾಣಿಸಬಹುದು.
ಇನ್ನು ಹೆಚ್ಚುವರಿ ₹50 ಶುಲ್ಕ ಇಲ್ಲ
ರೈಲು ಟಿಕೆಟ್ ಬುಕ್ ಮಾಡುವಾಗ ಊಟದ ಆಯ್ಕೆ (Catering option) ಮಾಡಿಕೊಳ್ಳದ ಪ್ರಯಾಣಿಕರಿಗೆ ಐಆರ್‌ಸಿಟಿಸಿ ಬಿಗ್ ರಿಲೀಫ್ ನೀಡಿದೆ. ಹಿಂದೆ ಬುಕ್ಕಿಂಗ್ ಸಮಯದಲ್ಲಿ ಆಹಾರ ಆರ್ಡರ್ ಮಾಡದೆ, ಪ್ರಯಾಣದ ಮಧ್ಯೆ ರೈಲಿನಲ್ಲಿ ಊಟ ತರಿಸಿಕೊಂಡರೆ ಹೆಚ್ಚುವರಿಯಾಗಿ ₹50 ದಂಡ/ಶುಲ್ಕ ಪಾವತಿಸಬೇಕಾಗುತ್ತಿತ್ತು. ಈಗ ಈ ನಿಯಮವನ್ನು ರದ್ದುಗೊಳಿಸಲಾಗಿದ್ದು, ಎಲ್ಲ ಪ್ರಯಾಣಿಕರಿಗೂ ಒಂದೇ ದರದಲ್ಲಿ ಆಹಾರ ಲಭ್ಯವಾಗಲಿದೆ.
ಚಹಾ ಮತ್ತು ಕಾಫಿ ವ್ಯವಸ್ಥೆ
ಭಾರತೀಯ ರೈಲ್ವೆಯ ಸವಾರಿಯಲ್ಲಿ ಚಹಾದ ಮಜಾವೇ ಬೇರೆ! ಈಗ ಆಧುನಿಕ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರಿಗೆ ಬ್ರಾಂಡೆಡ್ ಕಪ್‌ಗಳಲ್ಲಿ ಅತ್ಯುತ್ತಮ ಚಹಾ ಮತ್ತು ಕಾಫಿಯ ಸೌಲಭ್ಯವನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಇನ್ನು ಕೆಲವು ಪ್ರಮುಖ ಮಾರ್ಗಗಳಲ್ಲಂತೂ ಈ ಬಿಸಿ ಪಾನೀಯಗಳ ಜೊತೆಗೆ ಕ್ರಂಚಿ ಬಿಸ್ಕತ್ ಅಥವಾ ಲಘು ತಿಂಡಿಗಳನ್ನು ನೀಡಿ ಪ್ರಯಾಣವನ್ನು ಮತ್ತಷ್ಟು ಆಹ್ಲಾದಕರವಾಗಿಸಲಾಗುತ್ತಿದೆ.
ಆಯಾ ವರ್ಗಕ್ಕೆ ಅನುಗುಣವಾಗಿ ಊಟದ ದರ
ರೈಲಿನಲ್ಲಿ ಪ್ರಯಾಣಿಸುವ ಗ್ರಾಹಕರಿಗೆ ಅವರ ಟಿಕೆಟ್ ವರ್ಗಕ್ಕೆ ಅನುಗುಣವಾಗಿ ಆಹಾರದ ದರಗಳನ್ನು ನಿಗದಿಪಡಿಸಲಾಗಿದೆ. ಚೇರ್ ಕಾರ್ (CC) ಪ್ರಯಾಣಿಕರಿಗೆ ಬೆಳಗಿನ ಉಪಹಾರ ₹122, ಮಧ್ಯಾಹ್ನ/ರಾತ್ರಿ ಊಟ ₹222 ಹಾಗೂ ಸಂಜೆ ಚಹಾ-ತಿಂಡಿಗೆ ₹66 ನಿಗದಿಯಾಗಿದೆ. ಇನ್ನು ಎಕ್ಸಿಕ್ಯೂಟಿವ್ ಕ್ಲಾಸ್ (EC) ಪ್ರಯಾಣಿಕರಿಗೆ ಬೆಳಗಿನ ಉಪಹಾರ ₹155, ಮಧ್ಯಾಹ್ನ/ರಾತ್ರಿ ಊಟ ₹244 ಹಾಗೂ ಸಂಜೆ ಚಹಾ-ತಿಂಡಿಗೆ ₹105 ದರ ಇರಲಿದೆ. ವಿಶೇಷವೆಂದರೆ, ಎರಡೂ ವರ್ಗದ ಪ್ರಯಾಣಿಕರಿಗೂ ಬೆಳಗಿನ ಚಹಾ ದರ ₹15 ಮಾತ್ರ ಇರಲಿದೆ.
ಸ್ವಚ್ಛವಾಗಿ ಪ್ಯಾಕ್ ಮಾಡಿದ ಆಹಾರ
ವಂದೇ ಭಾರತ್‌ನಲ್ಲಿ ಸ್ವಚ್ಛತೆ ಕಾಪಾಡುವ ರೀತಿಯಲ್ಲಿ ಪ್ಯಾಕ್ ಮಾಡಲಾದ ರೆಡಿ-ಟು-ಈಟ್ (RTE) ಆಹಾರವನ್ನು ನೀಡಲಾಗುತ್ತದೆ. ರೈಲಿನ ಮಾರ್ಗ ಮತ್ತು ಪ್ರಯಾಣದ ಸಮಯಕ್ಕೆ ಅನುಗುಣವಾಗಿ ಮೆನು ಬದಲಾಗಬಹುದು.
ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಲಭ್ಯ
ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಸಸ್ಯಾಹಾರ ಅಥವಾ ಮಾಂಸಾಹಾರ ಆಯ್ಕೆ ಮಾಡಬಹುದು. ಆದರೆ ಕೆಲವು ಮಾರ್ಗಗಳಲ್ಲಿ ಲಭ್ಯತೆ ಬದಲಾಗುವ ಸಾಧ್ಯತೆಯಿದೆ.
ಪ್ರಯಾಣದ ಸಮಯಕ್ಕೆ ಅನುಗುಣವಾದ ಆಹಾರದ ಪಟ್ಟಿ
ಪ್ರಯಾಣಿಕರ ಆರೋಗ್ಯ ಮತ್ತು ಸಮಯದ ಪರಿಪಾಲನೆಯನ್ನು ಗಮನದಲ್ಲಿಟ್ಟುಕೊಂಡು ಆಹಾರದ ಮೆನುವನ್ನು ಸಿದ್ದಪಡಿಸಿಲಾಗಿದೆ. ಬೆಳಗಿನ ಜಾವ ಪ್ರಯಾಣಿಸುವವರಿಗೆ ಉಪಹಾರವನ್ನು, ಮಧ್ಯಾಹ್ನದ ವೇಳೆಗೆ ಸರಿಯಾಗಿ ಮಧ್ಯಾಹ್ನದ ಊಟವನ್ನು, ಸಂಜೆಯ ಸುಸ್ತನ್ನು ನಿವಾರಿಸಲು ಚಹಾ ಮತ್ತು ತಿಂಡಿಯನ್ನು ಹಾಗೂ ರಾತ್ರಿಯ ಜರ್ನಿಯಲ್ಲಿ ಸುಲಭವಾಗಿ ಜೀರ್ಣವಾಗುವಂತಹ ರಾತ್ರಿ ಊಟವನ್ನು ವ್ಯವಸ್ಥೆ ಮಾಡಲಾಗುತ್ತದೆ.
ಟಿಕೆಟ್‌ನಲ್ಲಿ ಕ್ಯಾಟರಿಂಗ್ ವಿವರ ಪರಿಶೀಲಿಸಿ
ನಿಮ್ಮ ಟಿಕೆಟ್‌ನಲ್ಲಿ ಊಟದ ಶುಲ್ಕ ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ದರದ ವಿವರಗಳಲ್ಲಿ ಕ್ಯಾಟರಿಂಗ್ ಶುಲ್ಕವನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿರುತ್ತದೆ.














Click it and Unblock the Notifications