Heroes Of Odisha Train Accident: ಒಡಿಶಾ ರೈಲು ದುರಂತದಲ್ಲಿ ಹೃದಯ ಶ್ರೀಮಂತಿಕೆ; ಹಲವರ ಪ್ರಾಣ ಉಳಿಸಿದ ರಿಯಲ್‌ ಹೀರೋಗಳು!

ಭಾರತ ಇತ್ತೀಚಿನ ದಶಕದಲ್ಲಿ ಕಂಡು ಕೇಳರಿಯದ ದುರಂತ ಶುಕ್ರವಾರ ಒಡಿಶಾದ ಬಾಲಾಸೋರ್‌ ಬಳಿ ನಡೆದಿತ್ತು. ತ್ರಿವಳಿ ರೈಲು ಅಪಘಾತದಲ್ಲಿ 275 ಜನ ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಅಲ್ಲಿನ ಜನರು ಕ್ಷಣಮಾತ್ರದಲ್ಲಿ ಪ್ರತಿಕ್ರಿಯಿಸಿದ ರೀತಿಯಂತೂ ಅದ್ಭುತ. ಬಹನಾಗಾ ಹಾಗೂ ಕಮರ್‌ಪುರ್‌ ಗ್ರಾಮಸ್ಥರ ತಕ್ಷಣದ ಪ್ರತಿಕ್ರಿಯೆ ರೈಲ್ವೇ ಅಪಘಾತದಲ್ಲಿ ಎಷ್ಟೋ ಜನರ ಜೀವ ಉಳಿಸಿದ್ದು, ಎಷ್ಟೋ ಜೀವಕ್ಕೆ ತಕ್ಷಣದ ಆಸರೆ, ಸಾಂತ್ವನವೂ ಸಿಕ್ಕಿದೆ. ಇಲ್ಲಿನ ಜನರ ಹೃದಯ ಶ್ರೀಮಂತಿಕೆ ದೇಶವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಹೌದು, ಅಪಘಾತದಲ್ಲಿ ಗಾಯಗೊಂಡವರಿಗೆ ಅವರ ಕುಟುಂಬಗಳನ್ನು ಸಂಪರ್ಕಿಸಲು ಶಾಲಾ ಬಾಲಕನೊಬ್ಬ ಸಹಾಯ ಮಾಡಿದ್ದಾನೆ ಎಂದರೇ ನೀವು ನಂಬಲೇಬೇಕು. ಟೆಟನಸ್‌ ಚುಚ್ಚುಮದ್ದನ್ನು ಗಾಯಾಳುಗಳಿಗೆ ಔಷಧಿ ಅಂಗಡಿ ಮಾಲೀಕರು ಉಚಿತವಾಗಿ ನೀಡಿದ್ದರೆ, ಗಾಯಾಳುಗಳನ್ನು ಸಾಗಿಸಲು ರಾತ್ರೋ ರಾತ್ರಿ ಖಾಲಿ ಸಿಮೆಂಟ್‌ ಚೀಲಗಳನ್ನು ಹೊಲಿದು ಸ್ಟ್ರೇಚರ್‌ ಸಿದ್ಧಪಡಿಸಿಕೊಟ್ಟಿದ್ದಾರೆ. ಅದಲ್ಲದೇ, ರಾತ್ರಿಯಿಡೀ ಸುಮಾರು 50 ಮಕ್ಕಳನ್ನು ನಿವೃತ್ತ ಸರ್ಕಾರಿ ನೌಕರರೊಬ್ಬರು ಆರೈಕೆ ಮಾಡಿದ್ದಾರೆ. ಸಂತ್ರಸ್ತರಿಗೆ ಉಚಿತ ಆಹಾರ ಮತ್ತು ನೀರನ್ನು ಕಿರಾಣಿ ಅಂಗಡಿ ಮಾಲೀಕರು ನಿರಂತರವಾಗಿ ಪೂರೈಸಿದ್ದಾರೆ.

Heroes Of Odisha Train Accident

ಅಬ್ಬಾ.. ಒಂದಾ.. ಎರಡಾ.. ಸಂತ್ರಸ್ತರ ಸಹಾಯಕ್ಕೆ ಗ್ರಾಮಸ್ಥರು ಧಾವಿಸಿದ ಇಂತಹ ನೂರಾರು ಉದಾಹರಣೆ ನಿಮಗೆ ಓಡಿಶಾ ರೈಲು ದುರಂತದಲ್ಲಿ ಕಂಡುಬರುತ್ತವೆ. ಹೌದು, ಶುಕ್ರವಾರ ಸಂಜೆ ಸರಿಯಾಗಿ 6.50 ರಿಂದ 7.10ರ ಸುಮಾರಿಗೆ ಬಹನಾಗಾ ಬಜಾರ್ ನಿಲ್ದಾಣದ ಬಳಿ ತ್ರಿವಳಿ ರೈಲು ದುರಂತ ಸಂಭವಿಸಿತ್ತು. ಈ ವೇಳೆ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಪಟ್ಟಣ ಮತ್ತು ಕಮರ್‌ಪುರ್ ಗ್ರಾಮದ ಜನ ಕ್ಷಣಮಾತ್ರದಲ್ಲಿ ಪ್ರತಿಕ್ರಿಯಿಸಿ, ಹಲವರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಂದಿಷ್ಟು ಹೀರೋಗಳ ಬಗ್ಗೆ ಇಲ್ಲಿದೆ ವಿವರಣೆ.

ರೈಲ್ವೇ ದುರಂತ ನಡೆದ ಸ್ಥಳದಿಂದ ಕೇವಲ 50 ಮೀಟರ್‌‌ ದೂರದಲ್ಲಿ 25 ವರ್ಷದ ಸೌಭಾಗ್ಯ ಸಾರಂಗಿ ಅವರ ಔಷಧಿ ಅಂಗಡಿ ಇತ್ತು. ಅಪಘಾತ ನಡೆದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಸೌಭಾಗ್ಯ ಸಾರಗಿ ಅವರು ಹಲವರ ಪ್ರಾಣ ಉಳಿಸಲು ಕಾರಣರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೆಲವೇ ಕ್ಷಣಗಳಲ್ಲಿ ಹಲವರನ್ನು ರಕ್ಷಿಸಿ ನನ್ನ ಅಂಗಡಿ ಬಳಿಯ ರಸ್ತೆಯಲ್ಲಿ ಮಲಗಿಸಿದ್ದೇವು. ಅವರಿಗೆ ಟೆಟಾನಸ್‌ ಇಂಜೆಕ್ಷನ್‌ ಹಾಗೂ ನೋವು ನಿವಾರಕಗಳನ್ನು ನೀಡಿದೆ. ನನಗೆ ನನ್ನ ನರೆ ಹೊರೆಯವರು ಕೂಡ ಸಾಥ್‌ ನೀಡಿದರು. ಬ್ಯಾಂಡೇಜ್‌ಗಳು ಮತ್ತು ಇತರೆ ಔಷಧಿಗಳನ್ನು ಕೂಡ ನೀಡಿದೆ. ಕೊನೆಗೆ ನಾನು ಬೆಳಗ್ಗೆ 4 ಗಂಟೆಗೆ ಮನೆಗೆ ಹೋದೆ ಎಂದು ಹೇಳಿದ್ದಾರೆ. ಸುಮಾರು 8 ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗಿದೆ. ನಾನು ಮನುಷ್ಯನೇ ಹೇಗೆ ಆ ಹಣವನ್ನು ಕೇಳಲಿ ಎಂದು ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.

64 ವರ್ಷದ ನಿವೃತ್ತ ಸರ್ಕಾರಿ ನೌಕರರಾಗಿರುವ ನಿಲಂಬರ್‌ ಬೆಹೆರಾ ಅವರು ಫಾರ್ಮಸಿ ಇರುವ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಇವರ ಕುಟುಂಬ ಪಾಟ್ನಾದ ಸುಮಾರು 50 ಮಕ್ಕಳಿಗೆ ಆಹಾರ ಮತ್ತು ವಸತಿ ಒದಗಿಸಿದ್ದರು. ಅವರನ್ನು ತಮ್ಮ ತಾರಸಿಯ ಮೇಲೆ ಇಟ್ಟುಕೊಂಡು ಊಟ ಹಾಕಿದ್ದರು. ಮರುದಿನ ಬೆಳಗಿನ ಜಾವದವರೆಗೂ ಮಕ್ಕಳು ಅವರೊಂದಿಗೆ ಇದ್ದರು. ಬಳಿಕ ಮಕ್ಕಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ ಎಂದು ಬೆಹೆರಾ ಅವರ ಪತ್ನಿ ರಿನಾಮಣಿ ಹೇಳಿದ್ದಾರೆ.

Heroes Of Odisha Train Accident

ಇನ್ನು, ಬೆಹೆರಾ ಅವರ ಪುತ್ರ ಚಂದನ್‌ ಕುಮಾರ್‌ ಟ್ಯೂಷನ್‌ ಸೆಂಟರ್‌ ನಡೆಸುತ್ತಿದ್ದಾರೆ. ಅವರು ಕೂಡ ರೈಲಿನಲ್ಲಿದ್ದ ತಮ್ಮ ಇಬ್ಬರು ಸ್ನೇಹಿತರನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಅವರಿಬ್ಬರೂ ಗಾಯಗೊಂಡಿದ್ದರು. ಅವರಿಬ್ಬರ ಜೊತೆ ಅನೇಕರು ಗಾಯಗೊಂಡಿದ್ದರು. ಬೇರೆಯವರನ್ನು ರಕ್ಷಿಸಲು ಹೋದಾಗ ಚಂದನ್‌ ಕುಮಾರ್‌ ಅವರ ಕಾಲಿಗೂ ಗಂಭೀರ ಗಾಯವಾಗಿತ್ತು. ಆದರೂ ಇಡೀ ರಾತ್ರಿ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರು ತೊಡಗಿದ್ದರು..

ಇನ್ನು, ರೈಲ್ವೇಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯ ಪತ್ನಿಯಾಗಿರುವ ಜೂಲನ್‌ ದಾಸ್‌ ಎಂಬುವವರು ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಅವರ 12 ವರ್ಷದ ಮಗ ವೃದ್ಧಿಮಾನ್‌ ಗಾಯಗೊಂಡವರಿಗೆ ಅವರ ಕುಟುಂಬಗಳನ್ನು ಸಂಪರ್ಕಿಸಲು ಸಹಾಯ ಮಾಡಿದ್ದಾರೆ. ಗಾಯಗೊಂಡವರಲ್ಲಿ ಅನೇಕರು ನಮ್ಮ ಮನೆಯ ಬಳಿ ಇದ್ದರು. ನನ್ನ ತಾಯಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದರು. ನಾನು ಗಾಯಾಳುಗಳ ಸಂಬಂಧಿಕರಿಗೆ ಫೋನ್‌ ಮಾಡಿ, ಅವರನ್ನು ಮಾತನಾಡಿಸಿದೆ ಎಂದು ವೃದ್ಧಿಮಾನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇನ್ನು, ಮಹೇಶ್‌ ಕುಮಾರ್‌ ಗುಪ್ತಾ ಅವರು ಲಕ್ಷ್ಮೀ ಸ್ಟೋರ್ಸ್‌ ಎಂಬ ಕಿರಾಣಿ ಸ್ಟೋರ್‌ ಇದ್ದು, ಅವರು ಸಂತ್ರಸ್ತರಿಗೆ ಉಚಿತವಾಗಿ ಕುಡಿಯುವ ನೀರು ಮತ್ತು ಆಹಾರವನ್ನು ಒದಗಿಸಿದ್ದರು. ಆರಂಭದಲ್ಲಿ ರಕ್ಷಣಾ ಕಾರ್ಯಾಚರಣೆಯ ಸಲುವಾಗಿ ಅಂಗಡಿ ಬಂದ್‌ ಮಾಡಿದ್ದ ಅವರು, ಬಳಿಕ ತಡರಾತ್ರಿಯವರೆಗೂ ಅಂಗಡಿಯನ್ನು ತೆರೆದು, ಸಂತ್ರಸ್ತರಿಗೆ ನೀಡು ಮತ್ತು ಆಹಾರವನ್ನು ಪೂರೈಸಿದ್ದಾರೆ. ಇನ್ನು, ಸೌಮ್ಯರಂಜನ್‌ ಲುಲು ಎಂಬ ಮತ್ತೊಬ್ಬ ಕಿರಾಣಿ ಸ್ಟೋರ್‌ ಮಾಲೀಕ ರೈಲ್ವೇ ಬೋಗಿಯ ಕಿಟಕಿಗಳ ಗಾಜನ್ನು ಒಡೆದು ಹಲವರನ್ನು ರಕ್ಷಿಸಿರುವುದು ಕೂಡ ಅವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ.

ಇನ್ನು, ಅಪಘಾತ ಸ್ಥಳದ ಇನ್ನೊಂದು ಬದಿಯಲ್ಲಿ ಕಮರ್‌ಪುರ ಗ್ರಾಮವಿದ್ದು, ಅಲ್ಲಿನ ಜನ ಗಾಯಾಳುಗಳನ್ನು ಸಾಗಿಸಲು ಸ್ಟ್ರೆಚರ್‌ಗಳನ್ನು ತಯಾರಿಸಲು ಖಾಲಿ ಸಿಮೆಂಟ್‌ ಚೀಲಗಳನ್ನು ಹೊಲಿದು ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿರುವ 45 ವರ್ಷದ ಮೇಸ್ತ್ರಿ ಪ್ರತಾಪ್‌ ಸಿಂಗ್‌, ದೊಡ್ಡ ಶಬ್ದ ಕೇಳಿ ನಾವು ಅಪಘಾತದ ಸ್ಥಳಕ್ಕೆ ಧಾವಿಸಿದೆವು. ಜನರು ಸಹಾಯಕ್ಕಾಗಿ ಗೋಗರೆಯುತ್ತಿದ್ದರು. ಗಾಯಾಳುಗಳನ್ನು ಹೊತ್ತೊಯ್ಯಲು ನಮ್ಮ ಬಳಿ ಸ್ಟ್ರೆಚರ್ ಇರಲಿಲ್ಲ. ಆದ್ದರಿಂದ, ನಾವು ಖಾಲಿ ಸಿಮೆಂಟ್ ಚೀಲಗಳನ್ನು ಹೊಲಿದೇವು. ಅದಲ್ಲದೇ ನನ್ನ ಸ್ನೇಹಿತನಿಂದ ಗ್ಯಾಸ್ ಕಟರ್‌ ಅನ್ನು ತೆಗೆದುಕೊಂಡು ಹೋಗಿ ರೈಲ್ವೇ ಕಂಪಾರ್ಟ್‌ಮೆಂಟ್‌ ತೆರೆಯಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ. ಕೇವಲ ಎರಡು ಹಳ್ಳಿಗಳು ಮಾತ್ರವಲ್ಲದೇ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂತ್ರಸ್ತರ ನೆರವಿಗೆ ಧಾವಿಸಿರುವುದು, ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+