ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನ 'ಕೈ' ಗುರುತು ತೆಗೆದು ಹಾಕುವಂತೆ ಆಯೋಗಕ್ಕೆ ಮನವಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 28: ದೇಶದ ಅತ್ಯಂತ ಪುರಾತನ ರಾಜಕೀಯ ಪಕ್ಷ ಕಾಂಗ್ರೆಸ್ಸಿನ ಹಸ್ತದ ಗುರುತಿನ ಬಗ್ಗೆ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕೈ ಗುರುತು ಬಳಕೆ ಸ್ಥಗಿತಗೊಳಿಸುವಂತೆ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.

ಕಾಂಗ್ರೆಸ್ಸಿನ ಚಿಹ್ನೆಯಿಂದಾಗಿ ಚುನಾವಣಾ ನೀತಿ ಸಂಹಿತೆಗೆ ಭಾರಿ ತೊಂದರೆಯಾಗುತ್ತದೆ ಎಂದು ವಕೀಲ ಅಶ್ವಿನಿ ಉಪಾಧ್ಯಾಯ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆಯಂತೆ ಮತದಾನ ಪ್ರಕ್ರಿಯೆಗೂ 48 ಗಂಟೆಗಳ ಮುನ್ನ ಚುನಾವಣಾ ಪ್ರಚಾರ ಅಂತ್ಯಗೊಳ್ಳಬೇಕಿದೆ. ಮತಗಟ್ಟೆಯಿಂದ 100 ಮೀಟರ್ ದೂರದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕಿದೆ.

ಲೋಕಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್: ಕಾಂಗ್ರೆಸ್ ಆಗ್ರಹ?ಲೋಕಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್: ಕಾಂಗ್ರೆಸ್ ಆಗ್ರಹ?

ಆದರೆ, ಕಾಂಗ್ರೆಸ್ಸಿನ ಚುನಾವಣಾ ಚಿನ್ಹೆ 'ಕೈ' ಆಗಿರುವುದರಿಂದ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಹಸ್ತದ ಗುರುತನ್ನು ಸದಾ ಕಾಲ ತಮ್ಮೊಂದಿಗೆ ಒಯ್ಯಬಹುದು ಹಾಗೂ ಪ್ರಚಾರಕ್ಕೆ ಬಳಸಬಹುದು. ಮತಗಟ್ಟೆಯೊಳಗೂ ಕೂಡಾ ಏಜೆಂಟ್ ಗಳು ಕೈಯಾಡಿಸುವ ಮೂಲಕ ಚಿನ್ಹೆಯನ್ನು ದುರ್ಬಳಕೆ ಮಾಡಬಹುದು ಎಂದು ಆರೋಪಿಸಿದ್ದಾರೆ.

Here is why this advocate wants the Congress’ hand symbol to be scrapped

ಚುನಾವಣಾ ಆಯೋಗದ 1961ರ ಐದನೇ ನಿಯಮದಂತೆ ಚುನಾವಣೆ ಆಯೋಗವು ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡುತ್ತದೆ. 'ಹಸ್ತ' ಕಾಂಗ್ರೆಸ್ಸಿನ ಗುರುತಾಗಿದ್ದು, ಮಾನವನ ದೇಹದ ಅಂಗವಾಗಿ ಜತೆಯಲ್ಲಿರುತ್ತದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು ಎಂದು ಕೈ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಈ ಚಿಹ್ನೆ ಬಳಕೆಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

English summary
In an interesting plea, the Election Commission has been moved seeking to scrap the hand symbol of the Indian National Congress. The ground raised by the complainant is that the hand symbol violates the model code of conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X