ಈ ಬಾರಿಯೂ ಧರಿಸಿದ ದಿರಿಸಿನ ಮೂಲಕ ಗಮನ ಸೆಳೆದ ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 15: ದೇಶವನ್ನು ಉದ್ದೇಶಿಸಿ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರದಂದು ತಮ್ಮ ಸಾಂಪ್ರದಾಯಿಕ ದಿರಿಸು ಧರಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದರು. ತಲೆಗೆ ಕೇಸರಿ ಬಣ್ಣದ ಟರ್ಬನ್ ಸುತ್ತಿಕೊಂಡಿದ್ದ ನರೇಂದ್ರ ಮೋದಿ, ಗಮನ ಸೆಳೆದರು.
ಪ್ರಧಾನಿಯಾಗಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಕೇಸರಿ ಮತ್ತು ಹಸಿರು ಬಣ್ಣದ ಜೋಧ್ ಪುರಿ ಬಂಧೇಜ್ ಸಫಾ ಧರಿಸಿದ್ದರು ನರೇಂದ್ರ ಮೋದಿ. ಟರ್ಬನ್ ಧರಿಸುವ ಸಂಪ್ರದಾಯವನ್ನು ಆ ನಂತರದ ವರ್ಷಗಳಲ್ಲೀ ಕೂಡ ಅವರು ಮುಂದುವರಿಸಿಕೊಂಡು ಬಂದರು.
72ನೇ ಸ್ವಾತಂತ್ರ್ಯ ದಿನಾಚರಣೆ 2018

ಕೆಂಪು ಮತ್ತು ಹಸಿರು ಗೆರೆಯ ಉದ್ದ ಸಫಾವನ್ನು 2015ರಲ್ಲಿ ಧರಿಸಿದ್ದರು. ಕೆಂಪು-ಗುಲಾಬಿ-ಹಳದಿ ಬಣ್ಣದ ರಾಜಸ್ತಾನಿ ಸಫಾದೊಂದಿಗೆ 2016ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವೇಳೆ ಕಾಣಿಸಿಕೊಂಡಿದ್ದರು. 2017ರಲ್ಲಿ ಬಿಳಿ ಹಾಗೂ ಹಳದಿ- ಕೆಂಪು ಬಣ್ಣದ ಟರ್ಬನ್ ನೊಂದಿಗೆ ಪಾಲ್ಗೊಂಡರು.












Click it and Unblock the Notifications