ಚಿತ್ರ ಸುದ್ದಿ : ಬುಧವಾರದ ಪ್ರಮುಖ ಸುದ್ದಿಗಳಿಗೆ ಇಲ್ಲಿ ನೋಡಿ
ಬೆಂಗಳೂರು, ಜ. 28: ದೇಶ ಹಾಗೂ ವಿದೇಶದಲ್ಲಿ ಬುಧವಾರ ನಡೆದ ಹಲವು ಘಟನಾವಳಿಗಳ ಚಿತ್ರ ಸಹಿತ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಕರ್ನಾಟಕದ ಅಣೆಕಟ್ಟು ಯೋಜನೆಗಳ ವಿರುದ್ಧ ತಮಿಳುನಾಡು ರಾಜಕೀಯ ಪಕ್ಷಗಳು ಬೀದಿಗಿಳಿದಿವೆ. ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ತಂಡ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದೆ. ಉಗ್ರರಿಂದ ಹತರಾದ ಸೈನಿಕ ಎಂ.ಎನ್. ರಾಯ್ ಅವರಿಗೆ ಅಂತಿಮ ನಮನ ಸಲ್ಲಿಸಲಾಗಿದೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಬಿರಾಗಾಳಿಯ ಹೊಡೆತಕ್ಕೆ ಪ್ರಯಾಣ ಮೊಟಕುಗೊಳಿಸಿದ ವಿಮಾನ ಪ್ರಯಾಣಿಕರು ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ನವ ದೆಹಲಿಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಿಂದ ಪ್ರಧಾನಿ ಮೋದಿ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಾಡಿಪವರ್ ಎಕ್ಸ್‌ಪೋ 2015 ನಲ್ಲಿ ಭಾಗವಹಿಸಿರುವ ಅಂತಾರಾಷ್ಟ್ರೀಯ ದೇಹದಾರ್ಢ್ಯಪಟು ರಿಕಾರ್ಡೋ ಕೊರಿಯಾ ಜೊತೆ ಅಭಿಮಾನಿಯೋರ್ವರು ಸೆಲ್ಫಿ ಪಡೆದರು. ಇನ್ನಿತರ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.

ಅಂತಿಮ ನಮನ
ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಹತರಾದ ಕರ್ನಲ್ ಎಂ.ಎನ್. ರಾಯ್ ಅವರ ಶವಕ್ಕೆ ಸೇನಾಧಿಕಾರಿಯೋರ್ವರು ಪುಷ್ಪಗುಚ್ಚ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಶವ ಹೊತ್ತೊಯ್ಯುತ್ತಿರುವ ಸೈನಿಕರು
ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಹತರಾದ ಕರ್ನಲ್ ಎಂ.ಎನ್. ರಾಯ್ ಅವರ ಶವವನ್ನು ಸೈನಿಕರು ಸರ್ಕಾರಿ ಗೌರವದೊಂದಿಗೆ ಹೊತ್ತೊಯ್ದರು.

ಪ್ರಧಾನಿಗೆ ಎನ್‌ಸಿಸಿ ಗೌರವ
ನವದೆಹಲಿಯಲ್ಲಿ ನಡೆದ ಪ್ರಧಾನ ಮಂತ್ರಿಗಳ ಎನ್‌ಸಿಸಿ ರ್ಯಾಲಿಯಲ್ಲಿ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ ನರೇಂದ್ರ ಮೋದಿ.

ಪ್ರಧಾನಿಗೆ ಎನ್‌ಸಿಸಿ ಗೌರವ
ನವದೆಹಲಿಯಲ್ಲಿ ನಡೆದ ಪ್ರಧಾನ ಮಂತ್ರಿಗಳ ಎನ್‌ಸಿಸಿ ರ್ಯಾಲಿಯಲ್ಲಿ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ ನರೇಂದ್ರ ಮೋದಿ.

ಕೆಡೆಟ್ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿ ಜೀವನದಲ್ಲಿ ಎನ್‌ಸಿಸಿ ಸಮವಸ್ತ್ರದಲ್ಲಿದ್ದ ಸಂದರ್ಭ (ಕಪ್ಪು ಕೋಟು ಧರಿಸಿದ ವ್ಯಕ್ತಿಯ ಬದಿಯಲ್ಲಿ ನೆಲದ ಮೇಲೆ ಕುಳಿತಿರುವ ಬಾಲಕ).

ಅಭಿಮಾನಿಯೊಂದಿಗೆ ದೇಹದಾರ್ಢ್ಯಪಟು
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಾಡಿಪವರ್ ಎಕ್ಸ್‌ಪೋ 2015 ನಲ್ಲಿ ಭಾಗವಹಿಸಿರುವ ಅಂತಾರಾಷ್ಟ್ರೀಯ ದೇಹದಾರ್ಢ್ಯಪಟು ರಿಕಾರ್ಡೋ ಕೊರಿಯಾ ಜೊತೆ ಅಭಿಮಾನಿಯೋರ್ವರು ಸೆಲ್ಫಿ ಪಡೆದರು.

ಮನ್ ಕಿ ಬಾತ್
ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಮನ್ ಕಿ ಬಾತ್ ಭಾಷಣವನ್ನು ಜನರು ರೇಡಿಯೋದಲ್ಲಿ ಕೇಳಿದರು.

ಕ್ರಿಕೆಟ್ ವಿಶ್ವಕಪ್ ಗೆಲ್ಲುತ್ತಾ ಅಫ್ಘಾನ್?
ಅಫ್ಘಾನಿಸ್ತಾನ ತಂಡ 2015ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. ತಂಡದ ಸದಸ್ಯರು ಈಗಾಗಲೇ ಕಾಬೂಲ್‌ನಲ್ಲಿರುವ ತರಬೇತಿ ಕೇಂದ್ರದಲ್ಲಿ ಅಭ್ಯಾಸನಿರತರಾಗಿದ್ದಾರೆ.

ನೃತ್ಯ ಪ್ರದರ್ಶನ
ಉತ್ತರಾಖಂಡದ ಕಲಾವಿದರು ಭೋಪಾಲ್‌ನಲ್ಲಿ ಆಯೋಜಿಸಿರುವ 'ಲೋಕರಂಗ್ 2015' ನೃತ್ಯ ಉತ್ಸವದಲ್ಲಿ ಮಂಗಳವಾರ ಪ್ರದರ್ಶನ ನೀಡಿದರು.

ಡೋಲು ಬಡಿದ ಮಾಂಜಿ
ಬಿಹಾರದ ಪಾಟ್ನಾದಲ್ಲಿ ಆಯೋಜಿಸಿರುವ ರ್ಯಾಲಿಗೆ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರು ಡೋಲು ಬಡಿದು ಚಾಲನೆ ನೀಡಿದರು.

ವಿಮಾನ ನಿಲ್ದಾಣದಲ್ಲಿ ಮಲಗಿದ ಪ್ರಯಾಣಿಕರು
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಬೀಸಿದ ಬಿರುಗಾಳಿಯಿಂದ ಪ್ರಯಾಣ ಮೊಟಕುಗೊಳಿಸಿದ ಪ್ರಯಾಣಿಕರು ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಮಲಗಿರುವುದು.

ನಮ್ಮವಳನ್ನು ಬಿಡಿ, ನಿಮ್ಮವರನ್ನು ಕರೆದೊಯ್ಯಿರಿ
ನರಮೇಧ ನಡೆಸುತ್ತಿರುವ ಐಎಸ್ಐಎಸ್ ಉಗ್ರಗಾಮಿ ಸಂಘಟನೆ ಜೋರ್ಡಾನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ತಮ್ಮ ಕಾರ್ಯಕರ್ತೆಯನ್ನು ಬಿಡದಿದ್ದರೆ ಜಪಾನ್‌ನ ಕೆಂಜಿ ಗೊಟೊ (ಚಿತ್ರದಲ್ಲಿರುವವರು) ಎಂಬುವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಮೇರಿ ಮೋದಿ ಭೇಟಿ
ಮಹಿಳಾ ಬಾಕ್ಸಿಂಗ್ ವಿಶ್ವಚಾಂಪಿಯನ್ ಮೇರಿ ಕೋಂ ಅವರು ನವದೆಹಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಅಣೆಕಟ್ಟೆಗೆ ವಿರೋಧ
ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಅಣೆಕಟ್ಟು ಯೋಜನೆಗಳನ್ನು ವಿರೋಧಿಸಿ ತಮಿಳುನಾಡಿನ ಚೆನ್ನೈನಲ್ಲಿ ಹಲವು ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದವು.

ಅಡಿಗಲ್ಲು
ಗುಜರಾತ್‌ನ ಅಹಮದಾಬಾದ್ ಸಮೀಪದ ಹನ್ಸಾಲ್‌ಪುರದಲ್ಲಿ ಸುಜುಕಿ ವಾಹನ ತಯಾರಿಕಾ ಕೇಂದ್ರಕ್ಕೆ ಮುಖ್ಯಮಂತ್ರಿ ಆನಂದಿಬೆನ್ ಅಡಿಗಲ್ಲು ನೆರವೇರಿಸಿದರು.












Click it and Unblock the Notifications