ಮಂಗಳವಾರದ ವಿವಿಧ ಪ್ರಮುಖ ಸುದ್ದಿಗಳು ಚಿತ್ರಗಳಲ್ಲಿ

ಬೆಂಗಳೂರು, ಫೆ. 3: ದೇಶ ಹಾಗೂ ವಿದೇಶದಲ್ಲಿ ಮಂಗಳವಾರ ನಡೆದ ಹಲವು ಪ್ರಮುಖ ಘಟನಾವಳಿಗಳ ಚಿತ್ರ ಸಹಿತ ವಿವರಣೆ ಇಲ್ಲಿದೆ.

ಕೊಚ್ಚಿಯಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮಹಿಳಾ ಮತ್ತು ಪುರುಷ ತಂಡಗಳು, ಹಾಕಿ ಸ್ಟಿಕ್ ಹಿಡಿದು ಸಂಭ್ರಮಿಸಿದ ಬರಾಕ್ ಒಬಾಮ, ಕಾಶ್ಮೀರದಲ್ಲಿ ಮುಂದುವರಿಯುತ್ತಿರುವ ಹಿಮ ಮಳೆ, ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಮಾಘ ಮೇಳ ಹಬ್ಬ, ಮುರುಗನ್ ಭಕ್ತರ ಧಾರ್ಮಿಕ ಆಚರಣೆ ಇನ್ನಿತರ ಸುದ್ದಿಗಳ ಚಿತ್ರಗಳನ್ನು ನೋಡಬಹುದು.

ದೇಶದೆಲ್ಲೆಡೆ ಕುತೂಹಲ ಕೆರಳಿಸಿರುವ ನವದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬದಲು 270 ಅಂಶಗಳ ದೂರದೃಷ್ಟಿ ದಾಖಲೆ ಬಿಡುಗಡೆ ಬಿಡುಗಡೆ ಮಾಡಿದೆ. ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ತೆಪ್ಪಂ ಹಬ್ಬ

ತೆಪ್ಪಂ ಹಬ್ಬ

ಮಧುರೈನ ವಂದಿಯುರ್ ಮರಿಯಮ್ಮನ್ ದೇಗುಲದಲ್ಲಿ ಆಯೋಜಿಸಿದ್ದ ತೆಪ್ಪಂ ಹಬ್ಬದಲ್ಲಿ ಭಾಗವಹಿಸಿದ್ದ ಭಕ್ತರು.

ಮಲೇಶಿಯಾದಲ್ಲಿ ಥೈಪುಸಮ್

ಮಲೇಶಿಯಾದಲ್ಲಿ ಥೈಪುಸಮ್

ಮಲೇಶಿಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ಥೈಪುಸಮ್ ಹಬ್ಬದಲ್ಲಿ ಹಿಂದೂ ಭಕ್ತನೋರ್ವ ಶುದ್ಧೀಕರಣ ಸ್ನಾನ ಮಾಡಿದರು. ಮುರುಗನ್ ದೇವರ ಸ್ಮರಣೆಗಾಗಿ ಈ ಹಬ್ಬ ಆಚರಿಸಲಾಗುತ್ತದೆ.

ಮುರುಗನ್ ಭಕ್ತಿ

ಮುರುಗನ್ ಭಕ್ತಿ

ಚೆನ್ನೈನ ವಡಾಪಾಲಾನಿ ಮುರುಗನ್ ದೇಗುಲದಲ್ಲಿ ನಡೆಯುತ್ತಿರುವ ಥೈಪುಸಮ್ ಹಬ್ಬದಲ್ಲಿ ಮುರುಗನ್ ಭಕ್ತರು ಧಾರ್ಮಿಕ ಕ್ರಿಯೆಯಲ್ಲಿ ಭಾಗವಹಿಸಿದ್ದು ಹೀಗೆ.

ಮಾಘಿ ಪೂರ್ಣಿಮೆ ಸ್ನಾನ

ಮಾಘಿ ಪೂರ್ಣಿಮೆ ಸ್ನಾನ

ಅಲಹಾಬಾದ್‌ನ ಸಂಗಮದಲ್ಲಿ ನಡೆಯುತ್ತಿರುವ ತಿಂಗಳ ಕಾಲದ ಮಾಘ ಮೇಳ ಹಬ್ಬದ ಮಾಘಿ ಪೂರ್ಣಿಮೆಯಂದು ಗಂಗೆಯಲ್ಲಿ ಸ್ನಾನ ಮಾಡಿದ ಓರ್ವ ನಾಗಾ ಸಾಧು.

ಪ್ರಶಸ್ತಿ ವಿತರಣೆಯಲ್ಲಿ ಮಮತಾ

ಪ್ರಶಸ್ತಿ ವಿತರಣೆಯಲ್ಲಿ ಮಮತಾ

ಕೋಲ್ಕತದಲ್ಲಿ ಆಯೋಜಿಸಿದ್ದ ಕಲಾವಿದರ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು.

ರಷ್ಯಾ ಕಲಾವಿದೆಯರು

ರಷ್ಯಾ ಕಲಾವಿದೆಯರು

ಹರ್ಯಾಣದ ಸೂರಜ್‌ಕುಂಡದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಜಾನಪದ ಕಲಾವಿದರೊಂದಿಗೆ ರಷ್ಯಾ ಕಲಾವಿದೆಯರು ಕಾಣಿಸಿಕೊಂಡಿದ್ದು ಹೀಗೆ.

ಜಾನಪದ ಕೌಶಲ್ಯ

ಜಾನಪದ ಕೌಶಲ್ಯ

ಹರ್ಯಾಣದ ಸೂರಜ್‌ಕುಂಡದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಜಾನಪದ ನೃತ್ಯ ಮಾಡಿದ ತಂಡ.

ದೂರದೃಷ್ಟಿ ದಾಖಲೆ

ದೂರದೃಷ್ಟಿ ದಾಖಲೆ

ನವದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ದೂರದೃಷ್ಟಿ ದಾಖಲೆಯನ್ನು ಬಿಡುಗಡೆ ಮಾಡಲಾಯಿತು.

ಟೇಬಲ್ ಟೆನ್ನಿಸ್‌ನಲ್ಲಿ ಚಿನ್ನ

ಟೇಬಲ್ ಟೆನ್ನಿಸ್‌ನಲ್ಲಿ ಚಿನ್ನ

ಕೇರಳದ ಕೊಚ್ಚಿಯಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನ ಮಹಿಳಾ ಟೇಬಲ್ ಟೆನ್ನಿಸ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮಹಾರಾಷ್ಟ್ರ ತಂಡ.

ಚಿನ್ನದ ಪುರುಷರು

ಚಿನ್ನದ ಪುರುಷರು

ಕೇರಳದ ಕೊಚ್ಚಿಯಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನ ಪುರುಷರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ತಮಿಳುನಾಡು ತಂಡ.

ಹಿಮದ ಮಧ್ಯೆ ಪಯಣ

ಹಿಮದ ಮಧ್ಯೆ ಪಯಣ

ಖಾಜಿಕುಂಡ್‌ನಲ್ಲಿ ಬೀಳುತ್ತಿರುವ ಹಿಮ ಮಳೆಯಲ್ಲಿಯೇ ರಸ್ತೆಯಲ್ಲಿ ಸಂಚರಿಸುತ್ತಿರುವ ಜನರು.

ನಮ್ಮ ಸೈನಿಕರ ವಾಸಸ್ಥಳ

ನಮ್ಮ ಸೈನಿಕರ ವಾಸಸ್ಥಳ

ಕಾಶ್ಮೀರ ಕಣಿವೆ ಸಮೀಪದಲ್ಲಿರುವ ಜವಾಹರ ಟನ್ನೆಲ್‌ನ ಸಿಆರ್‌ಪಿಎಫ್ ಶಿಬಿರದ ಮೇಲೆ ಬಿದ್ದಿರುವ ಹಿಮ ಮಳೆ.

ಪ್ರವಾಸಿಗರ ಸಂಚಾರ

ಪ್ರವಾಸಿಗರ ಸಂಚಾರ

ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ತಂಗ್‌ಮಾರ್ಗದಲ್ಲಿ ಪ್ರವಾಸಿಗರ ತಂಡ ಹಿಮ ಮಳೆಯ ಮಧ್ಯೆಯೂ ಉತ್ಸಾಹದಿಂದ ಮುಂದುವರಿದಿದ್ದು ಹೀಗೆ.

ಎಬೋಲಾಕ್ಕೆ ಔಷಧಿ

ಎಬೋಲಾಕ್ಕೆ ಔಷಧಿ

ಪಶ್ಚಿಮ ಆಫ್ರಿಕಾದ ಮನ್ರೋವಿಯಾದ ಎಬೋಲಾ ಪೀಡಿತ ಮಹಿಳೆಯೋರ್ವರಿಗೆ ವೈದ್ಯರು ನಿರೋಧಕ ಇಂಜೆಕ್ಷನ್ ನೀಡಿದರು.

ಒಬಾಮಗೆ ಹಾಕಿ ಸ್ಟಿಕ್ ಕಾಣಿಕೆ

ಒಬಾಮಗೆ ಹಾಕಿ ಸ್ಟಿಕ್ ಕಾಣಿಕೆ

ಅಮೆರಿಕ ಅಧ್ಯಕ್ಷರ ನಿವಾಸ ಶ್ವೇತ ಭವನದಲ್ಲಿ 2014ರ ಎನ್ಎಚ್ಎಲ್ ಚಾಂಪಿಯನ್ ಲಾಸ್ ಏಂಜೆಲೀಸ್ ಕಿಂಗ್ಸ್ ತಂಡ ಹಾಗೂ 2014ರ ಎಂಎಲ್ಎಸ್ ಕಪ್ ಚಾಂಪಿಯನ್ ಎಲ್ಎ ಗೆಲಾಕ್ಸಿ ತಂಡಗಳನ್ನು ಸನ್ಮಾನಿಸಲಾಯಿತು. ಈ ಸಮಯದಲ್ಲಿ ಕಾಣಿಕೆ ತಮಗೆ ನೀಡಿದ ಹಾಕಿ ಸ್ಟಿಕ್ ಅನ್ನು ಬರಾಕ್ ಒಬಾಮ ಕೈಯಲ್ಲಿ ಹಿಡಿದು ಸಂಭ್ರಮಿಸಿದ್ದು ಹೀಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+