ಶುಕ್ರವಾರ ದೇಶದಲ್ಲಿ ಹೀಗೆಲ್ಲಾ ಆಗ್ತಿದೆ ನೋಡಿ...

ಬೆಂಗಳೂರು, ಫೆ. 13: ಭಾರತ ಹಾಗೂ ವಿದೇಶಗಳಲ್ಲಿ ಶುಕ್ರವಾರ ಏನೇನು ನಡೆಯುತ್ತಿವೆ ಗೊತ್ತೇ? ಪ್ರಮುಖ ಘಟನೆಗಳ ಚಿತ್ರ ಸಹಿತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ಭಾರತ ಸಂಸತ್‌ನಲ್ಲಿ ಮಾತಿನ ಚಕಮಕಿ ಮಾಮೂಲು. ಆಗಾಗ ಕೈ ಕೈ ಮಿಲಾಯಿಸಿದ್ದೂ ಇದೆ. ಅದೇ ರೀತಿ ದಕ್ಷಿಣ ಆಫ್ರಿಕಾ ಸಂಸತ್‌ನಲ್ಲಿ ಸಂಸದರ ವಿರುದ್ಧ ಆರ್ಥಿಕ ಸ್ವಾತಂತ್ರ್ಯ ಹೋರಾಟಗಾರರು ಸಂಸದರ ಮೇಲೆ ಹಲ್ಲೆ ನಡೆಸಲು ಮುಂದಾದರು. ನವದೆಹಲಿಯ ಪಿತಾಂಪುರದಲ್ಲಿ ಫ್ಲೈ ಓವರ್‌ ಕಳಚಿ ಮುರಿದು ಬಿದ್ದಿದೆ. ಅದರಡಿ ಸಿಲುಕಿದ ಕಾರು ನಜ್ಜುಗುಜ್ಜಾಗಿದೆ. ಬೆಂಗಳೂರು-ಎರ್ನಾಕುಲಂ ರೈಲು ಆನೇಕಲ್ ಸಮೀಪ ಅಪಘಾತಕ್ಕೀಡಾಗಿದೆ. [ಆನೇಕಲ್ ರೈಲು ದುರಂತದ ಚಿತ್ರಗಳು]

ಇನ್ನಷ್ಟು ಸುದ್ದಿಗಳನ್ನು ಚಿತ್ರ ಸಹಿತ ನೋಡಲು ಕೆಳಗೆ ಕ್ಲಿಕ್ ಮಾಡಿ.

ಮೋದಿ ಮೂರ್ತಿ ಹೋಯ್ತು

ಮೋದಿ ಮೂರ್ತಿ ಹೋಯ್ತು

ಗುಜರಾತ್‌ನ ರಾಜ್‌ಕೋಟ್‌ನ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ನರೇಂದ್ರ ಮೋದಿ ಅವರ ಮೂರ್ತಿಯನ್ನು ಗುರುವಾರ ತೆರವುಗೊಳಿಸಲಾಯಿತು. ತಮಗೆ ದೇಗುಲ ನಿರ್ಮಿಸಿದ್ದನ್ನು ವಿರೋಧಿಸಿ ಮೋದಿ ಅವರು ಟ್ವೀಟ್ ಮಾಡಿದ್ದರು.

ಫಾಲ್ಗೂನ್ ಸಂಭ್ರಮ

ಫಾಲ್ಗೂನ್ ಸಂಭ್ರಮ

ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದ ಆವರಣದಲ್ಲಿ ಫಾಲ್ಗೂನ್ ದಿನಾಚರಣೆ ನಿಮಿತ್ತ ಯುವತಿಯರು ಮುಖಕ್ಕೆ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.

ಹಳಿ ತಪ್ಪಿದ ರೈಲು

ಹಳಿ ತಪ್ಪಿದ ರೈಲು

ಬೆಂಗಳೂರು-ಎರ್ನಾಕುಲಂ ರೈಲು ಆನೇಕಲ್ ಸಮೀಪ ಅಪಘಾತಕ್ಕೀಡಾಗಿದೆ. ರೈಲ್ವೆ ಹಳಿ ಮುರಿದು ಬಿದ್ದಿದೆ.

ಪ್ರಯಾಣಿಕರ ರಕ್ಷಣೆ

ಪ್ರಯಾಣಿಕರ ರಕ್ಷಣೆ

ಆನೇಕಲ್ ಸಮೀಪದ ಅಪಘಾತಕ್ಕೀಡಾಗಿರುವ ಬೆಂಗಳೂರು-ಎರ್ನಾಕುಲಂ ರೈಲಿನಲ್ಲಿ ಸಿಕ್ಕಿಬಿದ್ದ ಪ್ರಯಾಣಿರನ್ನು ರಕ್ಷಿಸುತ್ತಿರುವ ಸಿಬ್ಬಂದಿ.

ಬಿತ್ತು ಫ್ಲೈ ಓವರ್

ಬಿತ್ತು ಫ್ಲೈ ಓವರ್

ನವದೆಹಲಿಯ ಪಿತಾಂಪುರದಲ್ಲಿ ಕೆಳಕ್ಕೆ ಬಿದ್ದ ಫ್ಲೈ ಓವರ್‌ನಡಿ ಸಿಲುಕಿದ ವಾಹನ ನಜ್ಜುಗುಜ್ಜಾಯಿತು.

ಸಂಸತ್‌ನಲ್ಲಿ ಪ್ರತಿಭಟನೆ

ಸಂಸತ್‌ನಲ್ಲಿ ಪ್ರತಿಭಟನೆ

ದಕ್ಷಿಣ ಆಫ್ರಿಕಾ ಆರ್ಥಿಕ ಸ್ವಾತಂತ್ರ್ಯ ಹೋರಾಟಗಾರರು (ಕೆಂಪು ಸಮವಸ್ತ್ರಧಾರಿಗಳು) ಕೇಪ್‌ ಟೌನ್‌ನಲ್ಲಿ ಶುಕ್ರವಾರ ಆರಂಭವಾದ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಾಧ್ಯಕ್ಷ ಜೇಕಬ್ ಜುಮಾ ಅವರ ಭಾಷಣಕ್ಕೆ ಅಡ್ಡಿಯುಂಟು ಮಾಡಲು ಯತ್ನಿಸಿದರು. ಸಂಸತ್ ಸಿಬ್ಬಂದಿ (ಶ್ವೇತ ವಸ್ತ್ರಧಾರಿಗಳು) ಅವರನ್ನು ಹಿಡಿದು ಹೊರಹಾಕಿದರು.

ಸಭೆ ಮುಗೀತು

ಸಭೆ ಮುಗೀತು

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆಯಲ್ಲಿ ಭಾಗವಹಿಸಿ ಹೊರಬಂದ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ.

ಮಾಂಜಿ ಸುದ್ದಿಗೋಷ್ಠಿ

ಮಾಂಜಿ ಸುದ್ದಿಗೋಷ್ಠಿ

ಬಿಹಾರದ ಪಾಟ್ನಾದಲ್ಲಿರುವ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಸುದ್ದಿಗೋಷ್ಠಿ ನಡೆಸಿದರು.

ಸಚಿವರ ಚರ್ಚೆ

ಸಚಿವರ ಚರ್ಚೆ

ಕೇಂದ್ರ ಸಚಿವರಾದ ನಜ್ಮಾ ಹೆಫ್ತುಲ್ಲಾ ಹಾಗೂ ಹರ್ಷ ವರ್ಧನ್ ಅವರು ಸಂಪುಟ ಸಭೆಯ ನಂತರ ನವದೆಹಲಿಯ ಸೌತ್ ಬ್ಲಾಕ್‌ನಲ್ಲಿ ಚರ್ಚಿಸಿದ್ದು ಹೀಗೆ.

ಷಾ ಮಗನ ಮದುವೆ

ಷಾ ಮಗನ ಮದುವೆ

ಅಹಮದಾಬಾದ್‌ನಲ್ಲಿ ನಡೆದ ಅಮಿತ್ ಷಾ ಮಗನ ಮಗುವೆಯಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಪಾಲ್ಗೊಂಡಿದ್ದರು.

ಚಿನ್ನದ ನೆಗೆತ

ಚಿನ್ನದ ನೆಗೆತ

ತಿರುವನಂತಪುರಂನಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನ ಟ್ರಿಪಲ್ ಜಂಪ್‌ನಲ್ಲಿ ಚಿನ್ನ ಗೆದ್ದ ರಣಜಿತ್ ಮಹೇಶ್ವರಿ.

ಭಾರತೀಯನ ಮೇಲೆ ದೌರ್ಜನ್ಯ

ಭಾರತೀಯನ ಮೇಲೆ ದೌರ್ಜನ್ಯ

ಅಮೆರಿಕದ ವಾಷಿಂಗ್ಟನ್‌ನಲ್ಲಿ ಪೊಲೀಸ್ ಅಧಿಕಾರಿಯಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿರುವ ಭಾರತ ಮೂಲದ ಸುರೇಶ್‌ಭಾಯಿ ಪಟೇಲ್ ಅವರನ್ನು ಮೆಡಿಸನ್‌ ನಗರದಲ್ಲಿನ ಅಲಾಬಾಮಾ ಆಸ್ಪತ್ರೆಗೆ ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+