ಮಥುರಾ ಸಂಸದೆ ಹೇಮಾ ಮಾಲಿನಿ ಟ್ವೀಟ್ ಡಿಲೀಟ್!

Posted By:
Subscribe to Oneindia Kannada

ಮಥುರಾ, ಜೂನ್ 03: ಮಥುರಾ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ ಕ್ಷೇತ್ರದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಶೂಟಿಂಗ್ ಮಾಡುವ ಚಿತ್ರವೊಂದರನ್ನು ಟ್ವಿಟ್ಟರ್ ನಲ್ಲಿ ಹಾಕಿ, ಛೀಮಾರಿ ಹಾಕಿಸಿಕೊಂಡಿದ್ದರು. ನಂತರ ತಪ್ಪಿನ ಅರಿವಾಗಿ ಸರಣಿ ಟ್ವೀಟ್ ಮೂಲಕ ಮಥುರಾ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾಚಾರ, ಗಲಭೆಯಿಂದಾಗಿ ಎಸ್‌.ಪಿ.,ಎಸ್‌ಐ ಸೇರಿ 21ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆಯ ಆಘಾತದಿಂದ ಸಾರ್ವಜನಿಕರು ಚೇತರಿಸಿಕೊಳ್ಳುತ್ತಿರುವಾಗ, ಸಂಸದೆ ಹೇಮಾಮಾಲಿನಿ ಅವರು ಫೋಟೋ ಶೂಟಿಂಗ್ ಮಾಡುತ್ತಿರುವ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಇದು ಸಾರ್ವಜನಿಕರನ್ನು ಕೆರಳಿಸಿತ್ತು.

Hema Malini deletes tweets on film shooting, posts new ones on Mathura violence

ನಂತರ ಪ್ರಮಾದವನ್ನು ಸರಿಪಡಿಸಿಕೊಳ್ಳಲು ಆ ಚಿತ್ರಗಳನ್ನು ಡಿಲೀಟ್‌ ಮಾಡಿದ ಹೇಮ ಮಾಲಿನಿ ಅವರು ಮಥುರಾ ಘಟನೆ ಬಗ್ಗೆ ಅಪ್ಡೇಟ್ಸ್ ನೀಡಿದ್ದಾರೆ.

ನಾನು ಈಗಷ್ಟೆ ಮಥುರಾದಿಂದ ಬಂದಿದ್ದೇನೆ.ಅಲ್ಲಿ ಹಿಂಸಾಚಾರ ನಡೆದಿರುವುದು,ಪೊಲೀಸರು ಪ್ರಾಣ ಕಳೆದುಕೊಂಡಿರುವುದು ನನಗೆ ತಿಳಿದು ಬಂದಿದೆ. ಈ ವಿಚಾರ ನನಗೆ ತುಂಬಾ ನೋವು ತರಿಸಿದೆ.ನಾನು ಮತ್ತೆ ಅಲ್ಲಿಗೆ ತೆರಳುತ್ತೇನೆ' 'ಮೃತ ಪೊಲೀಸರಿಗೆ ಸಂತಾಪ ಸೂಚಿಸಿದ್ದು ,ಮಥುರಾದ ಜನರು ಶಾಂತಿಯಿಂದ ಇರಬೇಕೆಂದು ಎಂದು ಟ್ವೀಟ್‌ ಮಾಡಿ ಕೋರಿದ್ದಾರೆ.

Hema Malini deletes tweets on film shooting, posts new ones on Mathura violence

ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುವುದು ರಾಜ್ಯ ಸರ್ಕಾರ ಆದರೆ ಇದುವರೆಗೆ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರು ಸ್ಥಳಕ್ಕೆ ಏಕೆ ಭೇಟಿ ನೀಡಿಲ್ಲ 'ಎಂದು ಬಿಜೆಪಿ ವಕ್ತಾರ ಸಂಬೀತ್‌ ಪ್ರಶ್ನಿಸಿದ್ದರು.


ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರು ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿ, ಮೃತ ಪೊಲೀಸರ ಕುಟುಂಬಗಳಿಗೆ 20 ಲಕ್ಷ ರು ಪರಿಹಾರ ಧನ ಘೋಷಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಘಟನೆ ಬಗ್ಗೆ ವಿವರಗಳನ್ನು ಕೇಳಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಆದೇಶದ ಅನ್ವಯ ಮಥುರಾ ಜಿಲ್ಲೆಯ ಜವಾಹರ್​ಬಾಗ್​ನಲ್ಲಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾದರು.

ಈ ಸಂದರ್ಭದಲ್ಲಿ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ಸಂಘದ ಕಾರ್ಯಕರ್ತರು ಎನ್ನಲಾದ ಗುಂಪೊಂದು ಗಲಭೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಇಬ್ಬರು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೇದೆ ಸೇರಿದಂತೆ ಒಟ್ಟು 21 ಮಂದಿ ಸಾವಿಗೀಡಾಗಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MP from Mathura Hema Malini deleted tweets that she posted on the shooting of her latest film Ek Thi Rani at the Madh Island in Mumbai after the social media went abuzz with the actor-politicians' posts at a time when her constituency was experiencing violence that took over 21 lives.
Please Wait while comments are loading...