Get Updates
Get notified of breaking news, exclusive insights, and must-see stories!

ಹೇಮಾ ಕಮಿಟಿ: ಕೇರಳ ಹೈಕೋರ್ಟ್‌ನಿಂದ ಮಹತ್ವದ ನಿರ್ಧಾರ, ಏನದು?

Kerala High Court: ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಹೇಮಾ ಕಮಿಟಿ ವರದಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಹೇಮಾ ಕಮಿಟಿಯು ಕೇರಳ ಸರ್ಕಾರಕ್ಕೆ ಮಲಯಾಳಂ ಚಿತ್ರರಂಗದ ನ್ಯೂನ್ಯತೆಗಳು ಹಾಗೂ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ವರದಿಯನ್ನು ಮಂಡನೆ ಮಾಡಿತ್ತು. ಆದರೆ, ವರದಿ ಮಂಡನೆಯ ನಂತರವೂ ರಾಜ್ಯ ಸರ್ಕಾರ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.

ಕೇರಳ ಸರ್ಕಾರವು ಯಾರಾದರೂ (ನಟಿಯರು) ಬಂದು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿತ್ತು. ಈಗ ಕೇರಳ ಹೈಕೋರ್ಟ್‌ ಈ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಮುಂದಾಗಿದೆ. ಕೇರಳದ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಸಮಸ್ಯೆ, ಲೈಂಗಿಕ ದೌರ್ಜನ್ಯಗಳ ತನಿಖೆ ಹಾಗೂ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಕೆ. ಹೇಮಾ ಕಮಿಟಿಯನ್ನು ರಚಿಸಿತ್ತು. ಈ ಕಮಿಟಿಯ ವರದಿ ಇದೀಗ ಕೇರಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು, ಇದೇ ಮಾದರಿಯ ಕಮಿಟಿಯನ್ನು ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ರಚನೆ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

Hema Committee Important decision by Kerala High Court what

ಈಗ ಕೇರಳದ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಗೋಚರಿಸುತ್ತಿದೆ. ಈ ವರದಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ಮಾಡುವ ಉದ್ದೇಶದಿಂದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ವಿಶೇಷ ಪೀಠ ರಚಿಸಲು ಕೇರಳ ಹೈಕೋರ್ಟ್‌ ಮುಂದಾಗಿದೆ. ಐವರು ನ್ಯಾಯಮೂರ್ತಿಗಳ ವಿಶೇಷ ಪೀಠ ರಚನೆ ಮಾಡುವುದಾಗಿ ಗುರುವಾರ ಘೋಷಿಸಿದೆ.

ಇನ್ನು ಹೇಮಾ ಕಮಿಟಿಯ ವರದಿಯು ಕೇರಳ ಚಿತ್ರರಂಗದಲ್ಲಿ ಭಾರೀ ಸಂಚಲವನ್ನು ಸೃಷ್ಟಿಸಿದ್ದು, ಮಲಯಾಳಂ ಚಿತ್ರರಂಗದ 10ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಅಲ್ಲಿನ ಚಿತ್ರರಂಗ ಮಂಡಳಿಯ ಎಲ್ಲಾ ಸದಸ್ಯರು ನೈತಿಕ ಹೊಣೆಯೊತ್ತು ರಾಜೀನಾಮೆ ನೀಡಿದ್ದಾರೆ. ಈಚೆಗೆ ಹೇಮಾ ಕಮಿಟಿ ಸಮಿತಿ ನಡೆಸಿರುವ ಸಂಶೋಧನೆ ಹಾಗೂ ಶಿಫಾರಸುಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಕ್ಕೆ ಕೇರಳ ರಾಜ್ಯ ಮಾಹಿತಿ ಆಯೋಗ ಸಮ್ಮತಿ ಸೂಚಿಸಿತ್ತು. ಈ ಆದೇಶವನ್ನು ಹಲವರು ಪ್ರಶ್ನೆ ಮಾಡಿದ್ದರು. ಅಲ್ಲದೇ ಕೆಲವರು ಕೋರ್ಟ್‌ನಲ್ಲೂ ಪ್ರಶ್ನೆ ಮಾಡಿದ್ದರು. ಈ ಅರ್ಜಿಯನ್ನು ಅಲ್ಲಿನ ಏಕ ಸದಸ್ಯ ಪೀಠವು ವಜಾ ಮಾಡಿತ್ತು. ಅಲ್ಲದೇ ಆಗಸ್ಟ್‌ 13ರಂದು ಸಮಿತಿಯ ವರದಿ ಪ್ರಕಟಿಸುವ ಸಂಬಂಧ ಅನುಮತಿಯನ್ನೂ ನೀಡಿತ್ತು.

ಹೇಮಾ ಕಮಿಟಿ ವರದಿಯ ಹಿನ್ನೆಲೆ ಏನು ?

2017ರಲ್ಲಿ ಬಹುಭಾಷೆ ಹಾಗೂ ಮಲಯಾಳಂನ ಪ್ರಖ್ಯಾತ ನಟಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಮಲಯಾಳಂನ ಸೂಪರ್‌ ಸ್ಟಾರ್ ದಿಲೀಪ್‌ ಹೆಸರು‌ ಸಹ ಪ್ರಧಾನವಾಗಿ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಚಿತ್ರರಂಗ ಗಟ್ಟಿಯಾಗಿ ಆ ನಟಿಯ ಪರ ನಿಂತಿರಲಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಕೇರಳದ ಪ್ರಮುಖ ನಟಿಯರಿಂದಲೇ ವಿಮೆನ್ ಇನ್‌ ಸಿನಿಮಾ ಕಲೆಕ್ಟಿವ್ (wcc) ರಚನೆಯಾಗಿತ್ತು.

ಈ ಸಂಸ್ಥೆಯು ಮಲಯಾಳ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಲೈಂಗಿಕ ದೌರ್ಜನ್ಯ ಮತ್ತು ಲಿಂಗ ಸಮಾನತೆ ಕುರಿತ ಕಮಿಟಿ ರಚನೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರವು 2019ರಲ್ಲಿ ನಿ. ನ್ಯಾಯಮೂರ್ತಿ ಹೇಮಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+