ಏಳು ವರ್ಷದ ಮಗುವಿನ ಜೀವ ಉಳಿಸಲು ಸಹಾಯ ಮಾಡಿ
ಬೆಂಗಳೂರು, ಅಕ್ಟೋಬರ್ 04 : ಏಳು ವರ್ಷದ ಪ್ರಜ್ಞ್ಯಾ ಎಲ್ಲರಂತಲ್ಲ. ತನ್ನ ವಯಸ್ಸಿನ ಇತರ ಎಲ್ಲಾ ಮಕ್ಕಳಿಗಿಂತ ಈಕೆ ವಿಭಿನ್ನ. ತನ್ನ ವಯಸ್ಸಿನ ಮಕ್ಕಳು ಗೊಂಬೆಗಳ ಜೊತೆ ಆಟವಾಡಿದರೆ ಪ್ರಜ್ಞ್ಯಾ ಸೂಜಿ, ಸಿರೀಂಜುಗಳ ಜೊತೆ ಕಾಲ ಕಳೆಯುತ್ತಾಳೆ. ಸ್ನೇಹಿತರ ಜೊತೆ ಆಟವಾಡುತ್ತಾ ಕಾಲ ಕಳೆಯಬೇಕಾದ ಆಕೆ, ಡಾಕ್ಟರ್, ನರ್ಸ್ ಜೊತೆ ಮಾತನಾಡುತ್ತಾಳೆ.
ಮಗುವನ್ನು ಸಂತಸದಿಂದ ಉದ್ಯಾನಕ್ಕೆ ಆಟವಾಡಲು ಕರೆದುಕೊಂಡು ಹೋಗಬೇಕಾದ ತಂದೆ, 15 ದಿನಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಮಗಳ ಕಣ್ಣಲ್ಲಿ ಭವಿಷ್ಯದ ಕನಸನ್ನು ಕಾಣುತ್ತಿರುವ ತಂದೆ ಮಗಳನ್ನು ಉಳಿಸಿಕೊಳ್ಳಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದ್ದಾರೆ.
ಊಬರ್ ಕಾರು ಚಾಲಕರಾಗಿರುವ ಅನಿಲ್ ಸಾಳ್ವೆ ಅವರ ಪುತ್ರಿ ಪ್ರಜ್ಞ್ಯಾ Thalassemia patient. ಪ್ರಜ್ಞ್ಯಾ ಆರು ತಿಂಗಳ ಮುಗುವಾಗಿರುವಾಗಲೇ ಈ ರೋಗ ಕಾಣಿಸಿಕೊಂಡಿತ್ತು. ಆದರೂ ಇಂದಿಗೂ ಆಕೆಯ ಮುಖದಲ್ಲಿ ನಗುವಿದೆ. ತಂದೆಯ ಕಣ್ಣಲ್ಲಿ ಆಕೆಯ ಭವಿಷ್ಯದ ಕನಸಿದೆ.
ಪ್ರಜ್ಞ್ಯಾ ಉಳಿಸಲು ಬೋನ್ ಮ್ಯಾರೋ ಟ್ರಾನ್ಸ್‌ಪೆಂಟ್ ಚಿಕಿತ್ಸೆಯ ಮೂಲಕ ಮಾತ್ರ ಸಾಧ್ಯ. ಆದರೆ, ಈ ಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ವೆಚ್ಚವಾಗುತ್ತದೆ. ಚಿಕಿತ್ಸೆ ಬಳಿಕ ಒಂದು ವರ್ಷಗ ಕಾಲ ಆಕೆಯನ್ನು ಪ್ರತ್ಯೇಕವಾದ ಹವಾನಿಯಂತ್ರಿಕ ಕೋಣೆಯಲ್ಲಿಟ್ಟು ನೋಡಿಕೊಳ್ಳಬೇಕು.
ಅನಿಲ್ ಸಾಳ್ವೆ ತಿಂಗಳ ಆದಾಯ 15 ಸಾವಿರ ರೂ.ಗಳು. ಈಗಾಗಲೇ ಮಗಳ ಚಿಕಿತ್ಸೆಗಾಗಿ ಅವರು 6 ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿದ್ದಾರೆ. ದಾನಿಗಳು ಸಹಾಯ ಮಾಡಿದರೆ, ಮಗಳನ್ನು ಉಳಿಸಿಕೊಳ್ಳುತ್ತೇನೆ ಎಂದು ಜನರಲ್ಲಿ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.
ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಪ್ರಜ್ಞ್ಯಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್‌ಫೆಕ್ಷನ್ ಆಗುವ ಸಂಭವವಿರುವುದರಿಂದ ಒಬ್ಬರಿಗೆ ಮಾತ್ರ ಭೇಟಿ ಮಾಡಲು ಅವಕಾಶ ನೀಡಲಾಗಿದೆ. ತಾಯಿ ಆಕೆಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. 15 ದಿನಗಳಿಗೊಮ್ಮೆ ಅನಿಲ್ ಮಗಳನ್ನು ನೋಡಿಕೊಂಡು ಬರುತ್ತಾರೆ.
ನೀವು ಸಹಾಯ ಮಾಡಿದರೆ ಮಗಳನ್ನು ಉಳಿಸಿಕೊಳ್ಳುತ್ತೇವೆ ಎನ್ನುವ ಮನವಿ ಅನಿಲ್ ಅವರದ್ದು.
please donate to our fundraiser on Ketto.















Click it and Unblock the Notifications