Get Updates
Get notified of breaking news, exclusive insights, and must-see stories!

ಹಲೋ ಎಂಎಲ್ಎ..: ಪತ್ನಿ ರಿವಾಬಾ ಗೆಲುವಿನ ಕುರಿತು ರವೀಂದ್ರ ಜಡೇಜಾ ಟ್ವೀಟ್‌

ಅಹಮದಾಬಾದ್‌, ಡಿಸೆಂಬರ್‌ 9: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಲ್ಲಿ ಗೆದ್ದಿರುವ ತಮ್ಮ ಪತ್ನಿ ರಿವಾಬಾ ಜಡೇಜಾ ಅವರನ್ನು ಅಭಿನಂದಿಸಲು ಕ್ರಿಕೆಟಿಗ ರವೀಂದ್ರ ಜಡೇಜಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

'ಹಲೋ ಎಂಎಲ್ಎ... ನೀವು ನಿಜವಾಗಿಯೂ ಈ ಸ್ಥಾನಕ್ಕೆ ಅರ್ಹರು. ಜಾಮ್‌ನಗರದ ಜನರು ಜಯಗಳಿಸಿದ್ದಾರೆ. ಎಲ್ಲರಿಗೂ ನನ್ನ ಹೃದಯದ ಆಳದಿಂದ ಧನ್ಯವಾದ ಹೇಳುತ್ತೇನೆ' ಎಂದು ತಿಳಿಸಿದ್ದಾರೆ.

2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ರಿವಾಬಾ ಜಡೇಜಾ, ಈ ಹಿಂದೆ ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು.

Hello MLA...: Ravindra Jadeja’s post after wife Rivabas Gujarat poll win

ತಮ್ಮ ಚೊಚ್ಚಲ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಕರ್ಶನ್‌ಭಾಯ್ ಅವರನ್ನು 53,570 ಮತಗಳಿಂದ ಮತ್ತು ಕಾಂಗ್ರೆಸ್‌ನ ಬಿಪೇಂದ್ರಸಿನ್ಹ್ ಜಡೇಜಾ ಅವರನ್ನು 65,561 ಮತಗಳಿಂದ ಸೋಲಿಸಿದ್ದಾರೆ.

ರಿವಾಬಾ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು.

ಜಾಮ್‌ನಗರ (ಉತ್ತರ) ಸ್ಥಾನವನ್ನು 2012 ರಲ್ಲಿ ಕಾಂಗ್ರೆಸ್‌ನ ಧರ್ಮೇಂದ್ರಸಿನ್ಹ್ ಜಡೇಜಾ ಗೆದ್ದಿದ್ದರು. ಅವರು ಬಿಜೆಪಿಯ ಮುಲುಭಾಯ್ ಅಯರ್ ಬೇಲಾ ಅವರನ್ನು ಸುಮಾರು 12,000 ಮತಗಳಿಂದ ಸೋಲಿಸಿದ್ದರು. ಐದು ವರ್ಷಗಳ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.

Hello MLA...: Ravindra Jadeja’s post after wife Rivabas Gujarat poll win

ರಿವಾಬಾ ಜಡೇಜಾ ಅವರ ಪ್ರಚಾರದಲ್ಲಿ ಪತಿ ರವೀಂದ್ರ ಜಡೇಜಾ ಪಾಲ್ಗೊಂಡಿದ್ದರು. ರಿವಾಬಾ ಜೊತೆ ರವೀಂದ್ರ ಜಡೇಜಾ ಪ್ರಚಾರ ಮಾಡಿದ್ದರು. ಪತ್ನಿ ಪರ ಮತ ಚಲಾಯಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲೂ ಮನವಿ ಮಾಡಿದ್ದರು. ಆದರೆ, ರವೀಂದ್ರ ಜಡೇಜಾ ಅವರ ತಂದೆ ಮತ್ತು ಸಹೋದರಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ.

ಬಿಜೆಪಿ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಿವಾಬಾ ಜಡೇಜಾ ಹೆಸರಿತ್ತು. ಹಾಲಿ ಶಾಸಕ ಧರ್ಮೇಂದ್ರ ಜಡೇಜಾ ಅವರನ್ನು ಪಕ್ಷವು ಕೈಬಿಟ್ಟ ನಂತರ ರಿವಾಬಾ ಅವರಿಗೆ ಟಿಕೆಟ್ ನೀಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+