ಸೆಪ್ಟೆಂಬರ್ 30 ರ ವರೆಗೂ ದೇಶದಾದ್ಯಂತ ಸುರಿಯಲಿದೆ ಭಾರೀ ಮಳೆ: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 25: ದೇಶದ ಹಲವಾರು ಭಾಗಗಳಲ್ಲಿ ಸೆಪ್ಟೆಂಬರ್ 28 ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ಗುಜರಾತ್ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.
ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಬೆಟ್ಟಗಳಲ್ಲಿ ಭಾನುವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಇದು ಭೂಕುಸಿತವನ್ನು ಉಂಟುಮಾಡಿದೆ. ಇದರಿಂದ ಎರಡು ರಾಜ್ಯಗಳ ನಡುವಿನ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ತಿಳಿಸುಬಂದಿದೆ.

ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಭಾರೀ ಮಳೆಯಾಗಿದ್ದು, ಬಹುತೇಕ ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ನಗರದ ಅತಿದೊಡ್ಡ ಜಲಮೂಲವಾಗಿರುವ ಅಂಬಾಝರಿ ಕೆರೆ ಮತ್ತು ನಾಗ್ ನದಿಯಲ್ಲಿ ತೀವ್ರ ಪ್ರವಾಹಕ್ಕೆ ಕಂಡಿಬಂದಿದೆ. ಈ ಹಿನ್ನೆಲೆಯಲ್ಲಿ ಗೋದಾವರಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಗೋದಾವರಿ ನದಿಯ ದಡದಲ್ಲಿ ವಾಸಿಸುವ ನಾಗರಿಕರು ಎಚ್ಚರದಿಂದ ಇರವಂತೆ ಸರ್ಕಾರ ಸೂಚಿಸಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ರಾಜ್ಯದ ಐದು ಜಿಲ್ಲೆಗಳಲ್ಲಿ ಇಪ್ಪತ್ನಾಲ್ಕು ಹೆದ್ದಾರಿಗಳನ್ನು ನಿರ್ಬಂಧಿಸಲಾಗಿದೆ.
ಸೆಪ್ಟೆಂಬರ್ 25ರಂದು ಬಿಹಾರದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸೆಪ್ಟೆಂಬರ್ 24 ರಿಂದ 28 ರ ವರೆಗೆ ಮಳೆಯಾಗುವ ಮುನ್ಸೂಚನೆ ಇದೆ.

ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತೆಲಂಗಾಣ, ದಕ್ಷಿಣ ಒಳನಾಡು ಕರ್ನಾಟಕ, ತಮಿಳುನಾಡಿನಲ್ಲಿ ಸೆಪ್ಟೆಂಬರ್ 24 ರಂದು ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಸೆಪ್ಟೆಂಬರ್ 24, 27 & 28 ರಂದು ಮಳೆಯಾಗಲಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 24, 25, 27 ಮತ್ತು 28 ರಂದು ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಸೆಪ್ಟೆಂಬರ್ 24, 25 ಮತ್ತು 28 ರಂದು ಕೊಂಕಣ ಮತ್ತು ಗೋವಾದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 24, 27 ಹಾಗೂ 28 ರಂದು ಮಧ್ಯ ಮಹಾರಾಷ್ಟ್ರ ಮತ್ತು ಸೆಪ್ಟೆಂಬರ್ 24 ಮತ್ತು 27 ರಂದು ಮರಾಠವಾಡದಲ್ಲಿ ಮಳೆಯಾಗಲಿದೆ. ಸೆಪ್ಟೆಂಬರ್ 24 ರಂದು ಸೌರಾಷ್ಟ್ರ ಮತ್ತು ಕಚ್, ಸೆಪ್ಟೆಂಬರ್ 24 ರಿಂದ 28 ರವರೆಗೆ ಗುಜರಾತ್ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುವು ಸಾಧ್ಯತೆ ಇದೆ.

ಸೆಪ್ಟೆಂಬರ್ 24 ರಂದು ಕರ್ನಾಟಕದಲ್ಲಿ ಸುರಿದ ಮಳೆ ಪ್ರಮಾಣ
*ಚಿಕ್ಕಬಳ್ಳಾಪುರ: 113 ಮಿ.ಮೀ
*ಕೋಲಾರ: 112.5 ಮಿ.ಮೀ
*ಉಡುಪಿ: 69 ಮಿ.ಮೀ
*ಚಿಕ್ಕಮಗಳೂರು: 65.5 ಮಿ.ಮೀ
*ಶಿವಮೊಗ್ಗ: 65 ಮಿ.ಮೀ
*ಉತ್ತರ ಕನ್ನಡ: 59.5 ಮಿ.ಮೀ
*ಯಾದಗಿರಿ: 58.5 ಮಿ.ಮೀ
*ದಕ್ಷಿಣ ಕನ್ನಡ: 56.5 ಮಿ.ಮೀ
*ತುಮಕೂರು: 50.5 ಮಿ.ಮೀ
*ಕಲಬುರಗಿ: 50.5 ಮಿ.ಮೀ
*ಹಾಸನ: 34.5 ಮಿ.ಮೀ
*ಬೀದರ್: 31 ಮಿ.ಮೀ
*ಬೆಂಗಳೂರು ನಗರ: 31.5 ಮಿ.ಮೀ
ಹೆಚ್ಚು ಮಳೆ ಬಿದ್ದ ಸ್ಥಳಗಳು
*ಚಿಕ್ಕಬಳ್ಳಾಪುರ ಜಿಲ್ಲೆಯ ಬಿಳ್ಳೂರು: 113 ಮಿ.ಮೀ
*ನಲ್ಲಗುಟ್ಲಪಲ್ಲಿ: 90.5 ಮಿ.ಮೀ
*ಕೊರ್ಲಪರ್ತಿ: 86.5 ಮಿ.ಮೀ
*ನರೇಮುದ್ದೇಪಲ್ಲಿ: 84 ಮಿ.ಮೀ.
*ಗುಡಿಪಲ್ಲಿ, ಕೋಲಾರ: 112.5 ಮಿ.ಮೀ












Click it and Unblock the Notifications