Monsoon: ಆಗಸ್ಟ್ 21-24 ರವರೆಗೆ ಹಿಮಾಚಲದಲ್ಲಿ ಭಾರೀ ಮಳೆ ಎಚ್ಚರಿಕೆ: ಭಾರತದಾದ್ಯಂತ ಮಳೆಯ ಸ್ಥಿತಿಗತಿ ಹೇಗಿದೆ?
ನವದೆಹಲಿ ಆಗಸ್ಟ್ 21: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೆ ಸುರಿದ ಮಳೆ ಹಿಮಾಚಲ ಪ್ರದೇಶದಲ್ಲಿ ಆಗಸ್ಟ್ 22-24 ರವರೆಗೆ ಅಧಿಕವಾಗಲಿದೆ ಎಂದು ಹವಮಾನ ಇಲಾಖೆ ಘೋಷಿಸಿದೆ. ಹೀಗಾಗಿ ಹಿಮಾಚಲದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಮುಂಗಾರು ಕಡಿಮೆಯಾಗಿದ್ದರೂ ಸಹ, ರಾಜ್ಯದ ಪ್ರತ್ಯೇಕ ಭಾಗಗಳಲ್ಲಿ ಭಾನುವಾರ ಲಘು ಮಳೆಯಾಗಿದೆ. ಚಂಬಾ ಮತ್ತು ಮಂಡಿ ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 26 ರವರೆಗೆ ಈ ಭಾಗದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಜನ ಇನ್ನೂ ಕಾಣೆಯಾಗಿದ್ದಾರೆ. ಪ್ರವಾಹ, ಬೃಹತ್ ಸ್ಟೋಟಕ್ಕೆ ಹಲವಾರು ಮನೆಗಳು ಹಾಗೂ ಮರಗಳು ಧರೆಗೆ ಉರುಳಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ಗುಡ್ಡ ಕುಸಿದು ಹೆದ್ದಾರಿಗಳು ಹಾನಿಯಾಗಿದ್ದು ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಿಂದಾಗಿ ಭೂಕುಸಿತ, ಹಠಾತ್ ಪ್ರವಾಹ ಮತ್ತು ನದಿಗಳು ಉಕ್ಕಿ ಹರಿಯುವ ಹಾಗೂ ಚರಂಡಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಉತ್ತರಾಖಂಡ ಜಿಲ್ಲೆಯ 5 ಕಡೆ ಮಳೆ ಎಚ್ಚರಿಕೆ
ಉತ್ತರಾಖಂಡವೂ ನಿರಂತರ ಮಳೆಯಿಂದ ತತ್ತರಿಸಿ ಹೋಗಿದೆ. ಹಲವೆಡೆ ಭೂಕುಸಿತ ಮತ್ತು ಹಠಾತ್ ಪ್ರವಾಹವನ್ನು ಉಂಟುಮಾಡಿದೆ. ಡೆಹ್ರಾಡೂನ್, ಪೌರಿ, ನೈನಿತಾಲ್, ಚಂಪಾವತ್ ಮತ್ತು ಬಾಗೇಶ್ವರ್ ಸೇರಿದಂತೆ ಉತ್ತರಾಖಂಡದ ಐದು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ.
ಇಂದು ಮತ್ತು ನಾಳೆ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಇತರ ಜಿಲ್ಲೆಗಳಲ್ಲಿಯೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಚಂಡೀಗಢದಲ್ಲಿ ಭಾರೀ ಮಳೆ
ಭಾನುವಾರ ಚಂಡೀಗಢ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದ್ದು, ತಾಪಮಾನ ಕಡಿಮೆ ಆಗಲು ಕಾರಣವಾಯಿತು ಎಂದು ಹವಾಮಾನ ಕಚೇರಿ ತಿಳಿಸಿದೆ. ಮಳೆಯ ಆರ್ಭಟದಿಂದಾಗಿ ಜನರು ಬಿಕ್ಕಟ್ಟಿನ ಪರಿಸ್ಥಿತಿಯಿಂದ ನಿರಾಳರಾಗಿದ್ದಾರೆ. ಪಂಜಾಬ್‌ನ ಮೊಹಾಲಿ ಮತ್ತು ಹರಿಯಾಣದ ಪಂಚಕುಲ ಹಾಗೂ ಚಂಡೀಗಢದ ಅಕ್ಕಪಕ್ಕದ ಪಟ್ಟಣಗಳು ಕೂಡ ಮಳೆಯಿಂದ ಮುಳುಗಿದೆ.
ಮೆಟ್ ಆಫೀಸ್ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ಇದೆ.
ದೆಹಲಿಯ ಕೆಲವು ಭಾಗಗಳಲ್ಲಿ ಮಳೆ
ದೆಹಲಿಯಲ್ಲಿ ಶನಿವಾರದಂದು ಹೊಸ ಮಳೆ ಸುರಿದಿದ್ದುಶಾಖದಿಂದ ಸ್ವಲ್ಪ ವಿರಾಮವನ್ನು ತಂದಿದೆ. ತಾಪಮಾನ 25.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ದೆಹಲಿಯ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಿಂದಾಗಿ ನಜಾಫ್‌ಗಢ್‌ನ ಫಿರ್ನಿ ರಸ್ತೆ, ಬಹರ್‌ದುರ್ಗಾ ರಸ್ತೆ, ಪಟ್‌ಪರ್‌ಗಂಜ್, ವಸಂತ್ ಕುಂಜ್, ಮುಂಡ್ಕಾ ಮತ್ತು ಬದರ್‌ಪುರ್ ಸೇರಿದಂತೆ ದೆಹಲಿಯ ಹಲವು ಭಾಗಗಳು ಜಲಾವೃತವಾಗಿದ್ದು ಸಂಚಾರ ದಟ್ಟಣೆ ಉಂಟಾಗಿದೆ. ನಗರದಲ್ಲಿ ಬೆಳಗ್ಗೆ 8.30ರವರೆಗೆ 13 ಮಿಮೀ ಮಳೆ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
ಭಾನುವಾರದಂದು ಹಗುರವಾದ ಮಳೆಯಾಗಿದೆ. ಇಂದು ಕೂಡ ತುಂತುರು ಮಳೆಯೊಂದಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದೆ.












Click it and Unblock the Notifications