ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗೆ ತುಂಬಿ ಹರಿದ ಸಾಬರಮತಿ, ಗುಜರಾತ್‌ನಲ್ಲಿ ಪ್ರವಾಹ ಭೀತಿ

|
Google Oneindia Kannada News

ನವದೆಹಲಿ, ಜು.30: ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಕೊಮೆನ್‌ ಚಂಡಮಾರುತ ಸಹ ಈಶಾನ್ಯ ಭಾರತದಲ್ಲಿ ಆತಂಕ ಸೃಷ್ಟಿ ಮಾಡಿದೆ.

ಮುಂಬೈ ಅಹಮಾದಾಬಾದ್ ನಲ್ಲಿ ಮಳೆಯಾಗಿದೆ. ಸಾಬರಮತಿ ನದಿ ತುಂಬಿ ಹರಿಯುತ್ತಿದೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಳೆ ಆರ್ಭಟಿಸುತ್ತಿದ್ದು ಜನ ಜೀವನ ಅಸ್ತವ್ಯಸ್ತ ಮಾಡಿದೆ. ಮುಂದಿನ 48 ಗಂಟೆ ಅವಧಿಯಲ್ಲಿ ಹವಾಮಾನ ಇಲಾಖೆ ಭಾರೀ ಮಳೆ ಮುನ್ನೆಚ್ಚರಿಕೆ ನೀಡುರುವ ಹಿನ್ನೆಲೆಯಲ್ಲಿ ಕೆಲ ರೈಲು ಸಂಚಾರ ಬಂದ್ ಮಾಡಲಾಗಿದೆ.[ಎಚ್ಚರ..ಈಶಾನ್ಯ ತೀರಕ್ಕೆ'ಕೊಮೆನ್' ಕಾಟ]

ಇತ್ತ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ನೈರುತ್ಯ ಮುಂಗಾರು ದುರ್ಬಲಗೊಂಡಿದೆ. ಕರಾವಳಿ ಹಾಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಿದೆ.{ಪಿಟಿಐ ಚಿತ್ರಗಳು}

ಶಿರಾಲಿ, ಕದ್ರಾ, ಕುಮಟಾ, ಕಾರವಾರ ಕೋಟ, ಯಲ್ಲಾಪುರ ಭಾಗದಲ್ಲಿ ಮಳೆ ಬಿದ್ದಿದೆ. ಮುಂದಿನ 28 ಗಂಟೆಗಳಲ್ಲಿ ಕರಾವಳಿ, ರಾಜ್ಯದ ಒಳಭಾಗದ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ..

ಮತ್ತೆ ಭಾರೀ ಮಳೆ
ಜುಲೈ ಆರಂಭದಲ್ಲಿ ಆದ ರೀತಿಯ ಭಾರೀ ಮಳೆ ಆಗಸ್ಟ್ ಮೊದಲ ವಾರದಲ್ಲೂ ಬೀಳಲಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಆಗಸ್ಟ್ 3 ಮತ್ತು 4 ರಂದು ಭಾರೀ ಮಳೆ ಸುರಿಯುವ ಲಕ್ಷಣವಿದೆ.

ತುಂಬಿ ಹರಿದ ಸಾಬರಮತಿ

ತುಂಬಿ ಹರಿದ ಸಾಬರಮತಿ

ಗುಜರಾತ್ ನಲ್ಲಿ ವ್ಯಾಪಕ ಮಳೆತಯಾಗುತ್ತಿದ್ದು ಸಾಬರಮತಿ ನದಿ ತುಂಬಿ ಹರಿಯುತ್ತಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ನದಿಯಾದ ಅಹಮದಾಬಾದ್ ರಸ್ತೆ

ನದಿಯಾದ ಅಹಮದಾಬಾದ್ ರಸ್ತೆ

ಭಾರೀ ಮಳೆ ಪರಿಣಾಮ ಅಹಮದಾಬಾದ್ ನಲ್ಲಿ ರಸ್ತೆಗಳು ನದಿಯಾಗಿ ಮಾರ್ಪಟ್ಟಿದ್ದವು. ಸಂಚಾರ ಅಸ್ತವ್ಯಸ್ತವಾಗಿ ನಾಗರಿಕರು ಪರದಾಡುವಂತಾಯಿತು.

ಗ್ರಾಮಗಳು ಜಲಾವೃತ

ಗ್ರಾಮಗಳು ಜಲಾವೃತ

ಸಾಬರಮತಿ ನದಿಯ ಅಕ್ಕಪಕ್ಕದ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ರಕ್ಷಣೆಗೆ ಮೊರೆ

ರಕ್ಷಣೆಗೆ ಮೊರೆ

ಸೇನಾ ಪಡೆಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಗುಜರಾತ್ ಮಾತ್ರವಲ್ಲದೇ ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ವರುಣ ತನ್ನ ಆರ್ಭಟ ತೋರಿಸುತ್ತಿದ್ದಾನೆ.

English summary
Heavy rain which lashed several parts of Mumbai city and suburbs. North Indian parts receiving rain fall continuously.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X