IMD Rain Alert: ಅ.23ರವರೆಗೆ ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆ ಆರ್ಭಟ

ದಕ್ಷಿಣ ಒಳನಾಡಿನ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕೇರಳ ಮತ್ತು ಮಾಹೆ ಸೇರಿ ಹಲವೆಡೆ ಅಕ್ಟೋಬರ್‌ 23ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ 20 ಸೆಂ.ಮೀವರೆಗೆ ಭಾರೀ ಮಳೆಯಾಗಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ರಾಯಲಸೀಮಾ ಮತ್ತು ಲಕ್ಷದ್ವೀಪದ ಪ್ರತ್ಯೇಕ ಸ್ಥಳಗಳಲ್ಲಿ 11 ಸೆಂ.ಮೀವರೆಗೆ ಭಾರೀ ಮಳೆ ದಾಖಲಾಗಿದೆ. ಈ ವಾರವಿಡೀ ಧಾರಾಕಾರ ಮಳೆ ಮುಂದುವರಿಯಲಿದೆ.

ಅಕ್ಟೋಬರ್‌ 23ರವರೆಗೆ ಕರಾವಳಿ ಕರ್ನಾಟಕದಲ್ಲಿ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 5 ದಿನಗಳಲ್ಲಿ ಈ ಪ್ರದೇಶಗಳಲ್ಲಿ ಮಿಂಚು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 22 ಮತ್ತು 23ರಂದು ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ಕರಾವಳಿ ಆಂಧ್ರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಿದೆ.

Heavy Rain Alert In South India Till October 23 IMD Warns Karnataka Kerala Tamil Nadu

ಮೀನುಗಾರರಿಗೆ ಎಚ್ಚರಿಕೆ

ಪಡುಬಿದ್ರಿ, ಮಲ್ಲಾರು, ಪುತ್ತೂರು, ಕಟಪಾಡಿ, ಕುಂದಾಪುರ, ತೆಕ್ಕಟ್ಟೆ, ಮುಂಡೂರು, ಅಂಬಲಪಾಡಿ, ಸಕಲೇಶಪುರ ಭಾಗಗಲ್ಲಿ ಭಾರೀ ಮಳೆಯಾಗಿದ್ದು, ಅಕ್ಟೋಬರ್ 22ರವರೆಗೆ ಮೀನುಗಾರರು ಅರೇಬಿಯನ್ ಸಮುದ್ರ, ಲಕ್ಷದ್ವೀಪ, ಮಾಲ್ಡೀವ್ಸ್, ಕೊಮೊರಿನ್ ಪ್ರದೇಶಗಳು, ಕೇರಳ, ಕರ್ನಾಟಕ ಕರಾವಳಿಯಲ್ಲಿ ಮತ್ತು ಹೊರಗೆ, ನೈರುತ್ಯ, ಪೂರ್ವಮಧ್ಯ, ಪಶ್ಚಿಮಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.

ಅಕ್ಟೋಬರ್‌ 18ರಂದು ಬಹುತೇಕ ರಾಜ್ಯಗಳಲ್ಲಿ ಶುಭ್ರ ಆಕಾಶದೊಂದಿಗೆ ಬೆಳಗಿನ ವೇಳೆ ಮಂಜು ಆವರಿಸಲಿದೆ. ದೆಹಲಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34ರಿಂದ 20 ಡಿಗ್ರಿ ಸೆಲ್ಸಿಯಸ್‌ ವ್ಯಾಪ್ತಿಯಲ್ಲಿರಬಹುದು. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1ರಿಂದ 2 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಪ್ರಧಾನ ಮೇಲ್ಮೈ ಗಾಳಿಯು ವಾಯುವ್ಯ ದಿಕ್ಕಿನಿಂದ ಬೀಸಲಿದೆ.

ಕರಾವಳಿ ಕರ್ನಾಟಕದಲ್ಲಿ ಅಡಿಕೆ ಮತ್ತು ತೆಂಗಿನಕಾಯಿ ಕೊಯ್ಲು ಮಾಡಿ ಕೊಯ್ಲು ಮಾಡಿದ ಉತ್ಪನ್ನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿ. ದಕ್ಷಿಣ ಒಳನಾಡಿನಲ್ಲಿ, ನೆಲಗಡಲೆ, ಮೆಕ್ಕೆಜೋಳ, ಮೆಣಸು, ಏಲಕ್ಕಿ, ಅರಿಶಿನ ಮತ್ತು ಕಾಫಿಯ ಕೊಯ್ಲು ಮಾಡಿದ ಉತ್ಪನ್ನಗಳನ್ನು ಒಣಗಿಸಿ, ಮುಚ್ಚಿದ ಮತ್ತು ಗಾಳಿ ಇರುವ ಪ್ರದೇಶಗಳಲ್ಲಿ ಮುಚ್ಚಿಡಿ. ಭತ್ತ, ಜೋಳ, ರಾಗಿ, ತೊಗರಿ, ಸೋಯಾಬೀನ್, ನೆಲಗಡಲೆ ಮತ್ತು ತರಕಾರಿಗಳು ಮತ್ತು ಬಾಳೆ, ಕರಿಮೆಣಸು, ತೆಂಗಿನಕಾಯಿ ಮತ್ತು ಅಡಿಕೆ ತೋಟಗಳಿಂದ ನೀರು ನಿಲ್ಲುವುದನ್ನು ತಪ್ಪಿಸಲು ಹೆಚ್ಚುವರಿ ನೀರನ್ನು ಹೊರಹಾಕಲು ಅಗತ್ಯ ವ್ಯವಸ್ಥೆಗಳನ್ನು ಮಾಡಿ ಎಂದು ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+