ಬಿಹಾರದ ಈ ಜಿಲ್ಲೆಗಳಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ; ಯೆಲ್ಲೋ ಅಲರ್ಟ್ ಘೋಷಣೆ
ಪಾಟ್ನಾ, ಮೇ 11: ಉತ್ತರ ಭಾರತದ ರಾಜ್ಯದಲ್ಲಿ ಒಂದಾಗಿರುವ ಬಿಹಾರದ ಕೆಲವು ಜಿಲ್ಲೆಗಳಲ್ಲಿ ಬಿಸಿ ಗಾಳಿ ಮುಂದುವರಿದಿದ್ದು, ಜನರು ಹೈರಾಣಾಗಿದ್ದಾರೆ. ಪಾಟ್ನಾ ನಗರ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನವು ವಾಡಿಕೆಯ ಅತ್ಯಧಿಕ ಪ್ರಮಾಣಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ತಜ್ಞರು ತಿಳಿಸಿರುವ ಪ್ರಕಾರ, ಬಿಹಾರ ರಾಜ್ಯದ ಜಿಲ್ಲೆಗಳು ಸತತ ಮೂರನೇ ದಿನವೂ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ ತಾಪಮಾನ ದಾಖಲಾಗಿದೆ. ಎಲ್ಲೆಡೆ ಬಿಸಿ ಗಾಳಿ ಕಂಡು ಬಂದಿದ್ದು, ಜನ ಶಾಖದ ಪರಿಸ್ಥಿತಿಯನ್ನು ತತ್ತರಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಅನಾರೋಗ್ಯಪೀಡಿತರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ ಎನ್ನಲಾಗಿದೆ.

ಬಿಹಾರದ ಪೂರ್ನಿಯಾ, ಭಾಗಲ್ಪುರ್, ಶೇಖ್‌ಪುರ, ಖಗಾರಿಯಾ, ಬಂಕಾ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಹೆಚ್ಚು ಬಿಸಿ ಗಾಳಿಯ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಶೇಖ್‌ಪುರ, ಔರಂಗಾಬಾದ್ ಮತ್ತು ಕತಿಹಾರ್‌ಗಳಲ್ಲಿ ಕ್ರಮವಾಗಿ 41.9 ಡಿಗ್ರಿ ಸೆಲ್ಸಿಯಸ್, ಪೂರ್ಣಿಯಾ 41.5 ಡಿಗ್ರಿ ಸೆಲ್ಸಿಯಸ್, ಪಾಟ್ನಾದಲ್ಲಿ 41.4 ಡಿಗ್ರಿ ಸೆಲ್ಸಿಯಸ್ ಹಾಗೂ ಗಯಾ ಮತ್ತು ಸಿವಾನ್‌ನಲ್ಲಿ ತಲಾ 41.4 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ವರದಿ ಮಾಹಿತಿ ನೀಡಿದೆ.
ಗರಿಷ್ಠ ತಾಪಮಾನ 40 ಡಿ.ಸೆ. ಗಿಂತ ಹೆಚ್ಚು
ಭಾರತದ ಹವಾಮಾನ ಇಲಾಖೆ (IMD) ಪ್ರಕಾರ ಒಂದು ಪ್ರದೇಶದಲ್ಲಿ ಗರಿಷ್ಠ ತಾಪಮಾನ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದರೆ ಆಪ್ರದೇಶವನ್ನು ಶಾಖದ ಅಲೆಯ ಪ್ರದೇಶ ಎಂದು ಘೋಷಿಸಲಾಗುತ್ತದೆ. ಪಾದರಸವು ಎರಡರಿಂದ ಮೂರು ಹಂತಗಳಷ್ಟು ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಬಿಹಾರದ ಪಾಟ್ನಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ನಿವಾಸಿಗಳಿಗೆ ಸುಡು ಬಿಸಿಲು ಆವರಿಸಿಕೊಂಡಿದೆ. ಸದ್ಯ ಈ ಶಾಖದ ಅಲೆಗೆ ವಿರಾಮ ಇಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಬಿಹಾರ ರಾಜ್ಯಾದ್ಯಂತ ಕಳೆದ 24 ಗಂಟೆಗಳಲ್ಲಿ ಒಣ ಹವೆ ಇತ್ತು. ಉತ್ತರದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಪ್ರಮಾಣ ಏರಿಕೆ ಆಗಿದೆ. ರಾಜ್ಯದ ದಕ್ಷಿಣ ಮತ್ತು ಈಶಾನ್ಯ ಭಾಗಗಳಲ್ಲಿನ ಹಲವಾರು ಜಿಲ್ಲೆಗಳು ಮುಂದಿನ 24 ಗಂಟೆಗಳಲ್ಲಿ ಶಾಖದ ಅಲೆಗಳ ಪರಿಸ್ಥಿತಿಯಲ್ಲಿ ತತ್ತರಿಸುವ ಸಾಧ್ಯತೆಯಿದೆ ಎಂದು ಪಾಟ್ನಾ ಹವಾಮಾನ ಕೇಂದ್ರದ ಅಧಿಕಾರಿ ನೇಹಾ ಕುಮಾರಿ ಪ್ರತಿಕ್ರಿಯಿಸಿದ್ದಾರೆ.
ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಇನ್ನು ರಾಜ್ಯದ ಪಶ್ಚಿಮ ದಿಕ್ಕಿನ ಗಾಳಿಯಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಗಂಟೆಗೆ 20 ರಿಂದ 30 ಕಿಮೀ ವೇಗದಲ್ಲಿ ರಾಜ್ಯದಲ್ಲಿ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನೆಡೆಗೆ ಬಿಸಿಗಾಳಿ ಬೀಸಲಿದೆ. ಗುರುವಾರ ಪಾಟ್ನಾ, ಪೂರ್ಣಿಯಾ, ನಾವಡಾ, ಶೇಕ್‌ಪುರ, ಖಗಾರಿಯಾ, ಭಾಗಲ್‌ಪುರ, ಜಮುಯಿ, ಬಂಕಾ ಮತ್ತು ಪಶ್ಚಿಮ ಚಂಪಾರಣ ಸೇರಿದಂತೆ 10 ಜಿಲ್ಲೆಗಳಲ್ಲಿ ಉಷ್ಣ ಅಲೆ ಹೆಚ್ಚಿರುವುದರಿಂದ ಪರಿಸ್ಥಿತಿಗಳಿಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಒಂದು ಪ್ರದೇಶ ಅಥವಾ ನಗರದಲ್ಲಿ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ನಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಇದ್ದಾಗ ಮಾತ್ರ ಹೀಗೆ ಹಳದಿ ಎಚ್ಚರಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications