• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ರೂಪಾಂತರದ ಬಗ್ಗೆ ಆರೋಗ್ಯ ತಜ್ಞರ ಎಚ್ಚರಿಕೆಗೆ ಕಿವಿಗೊಡದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜೂ.16: ದೇಶದ ಹೃದಯಭಾಗದಲ್ಲಿರುವ ಗ್ರಾಮೀಣ ಜಿಲ್ಲೆಯೊಂದರಲ್ಲಿ ಕೊರೊನಾವೈರಸ್‌ ಹೊಸ ರೂಪಾಂತರವು ಶೀಘ್ರವಾಗಿ ಹರಡುತ್ತಿದೆ ಮತ್ತು ಏಕಾಏಕಿ ತುರ್ತು ಗಮನ ಹರಿಸಬೇಕು ಎಂದು ಹಿರಿಯ ಹೃದಯ ಆರೋಗ್ಯ ತಜ್ಞರು ಮಾರ್ಚ್ ಆರಂಭದಲ್ಲಿ ಭಾರತದ ಉನ್ನತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ವ್ಯವಸ್ಥೆಯು ಈ ಆರೋಗ್ಯ ಅಧಿಕಾರಿಗಳು ನೀಡಿದ ಎಚ್ಚರಿಕೆಗೆ ಸಮರ್ಪಕವಾಗಿ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ ಎಂದು ಭಾರತ, ಇಂಡೋನೇಷ್ಯಾ ಮತ್ತು ಯುನೈಟೆಡ್ ಸ್ಟೇಟ್‌ನ ಸಾರ್ವಜನಿಕ ಆರೋಗ್ಯದಲ್ಲಿ ಕಾರ್ಯನಿರ್ವಹಿಸಿ 30 ವರ್ಷಗಳ ಅನುಭವ ಹೊಂದಿರುವ ಡಾ. ಸುಭಾಷ್ ಸಲುಂಕೆ ಹೇಳಿದ್ದಾರೆ.

ಈಗ ಬಿ .1.617 ಎಂದು ಕರೆಯಲ್ಪಡುವ ಈ ರೂಪಾಂತರವು ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಎರಡನೇ ಅಲೆಗೆ ಕಾರಣವಾಗಿದೆ. ಮುಂದಿನ ಅಲೆಯ ಸಾಧ್ಯತೆಯಿದೆ ಎನ್ನಲಾಗಿದೆ. ಈ ರೂಪಾಂತರವು 40 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಮೇ ತಿಂಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇದನ್ನು ಹೆಚ್ಚು ಕಾಳಜಿ ವಹಿಸಬೇಕಾದ ರೂಪಾಂತರ ಎಂದು ಹೇಳಿದೆ.

'ಡೆಲ್ಟಾ ಪ್ಲಸ್' ರೂಪಾಂತರಿ ಬಗ್ಗೆ ಆತಂಕ ಬೇಡ ಎಂದ ತಜ್ಞರು'ಡೆಲ್ಟಾ ಪ್ಲಸ್' ರೂಪಾಂತರಿ ಬಗ್ಗೆ ಆತಂಕ ಬೇಡ ಎಂದ ತಜ್ಞರು

ಪಶ್ಚಿಮ ರಾಜ್ಯದ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಈ ರೂಪಾಂತರದ ಮೊದಲ ಬಾರಿ ಪತ್ತೆಯಾಗಿದೆ. ಭಾರತದಲ್ಲಿ ಬೇರೆಡೆ ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡಾ ಅಲ್ಲಿ ಫೆಬ್ರವರಿ ಆರಂಭದಲ್ಲಿ ಕೊರೊನಾವೈರಸ್ ಸೋಂಕಿನ ಹೆಚ್ಚಳ ಆರಂಭವಾಗಿದೆ.

 ಕೇಂದ್ರ ಸರ್ಕಾರದ ಆರೋ‌ಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದ ತಜ್ಞರು

ಕೇಂದ್ರ ಸರ್ಕಾರದ ಆರೋ‌ಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದ ತಜ್ಞರು

ಮಹಾರಾಷ್ಟ್ರ ಸರ್ಕಾರಕ್ಕೆ ಸಲಹೆ ನೀಡುವ ಮಾಜಿ ಡಬ್ಲ್ಯುಎಚ್‌ಒ ಅಧಿಕಾರಿ ಸಲುಂಕೆ ಮಾರ್ಚ್ ಆರಂಭದಲ್ಲಿ ಭಾರತದ ಕೆಲವು ಹಿರಿಯ ಆರೋಗ್ಯ ಅಧಿಕಾರಿ ಈ ರೂಪಾಂತರದ ಬಗ್ಗೆ ಎಚ್ಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮುಖ್ಯ ಕೊರೊನಾವೈರಸ್‌ ಸಲಹೆಗಾರ ವಿ.ಕೆ. ಪೌಲ್‌ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ಮುಖ್ಯಸ್ಥ ಸುಜೀತ್ ಕುಮಾರ್ ಸಿಂಗ್‌ ಜೊತೆಗೆ ಫೋನ್‌ ಕರೆಯಲ್ಲಿ ಮಾತನಾಡಿ ಈ ಬಗ್ಗೆ ಜಾಗರೂಕರಾಗಿರಲು ತಿಳಿಸಿದ್ದರು ಎನ್ನಲಾಗಿದೆ. ''ಅಮರಾವತಿಯಲ್ಲಿ ವೈರಸ್ ರೂಪಾಂತರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ, ಅದರ ಹರಡುವಿಕೆ ಹೆಚ್ಚುತ್ತಿದೆ,'' ಎಂದು ಪೌಲ್‌ ಹಾಗೂ ಸಿಂಗ್‌ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಫೋನ್‌ ಕರೆಯಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. "ನನ್ನಂತಹ ಸಾರ್ವಜನಿಕ ಆರೋಗ್ಯ ವ್ಯಕ್ತಿಯು ಅವರಿಗೆ ಉತ್ತಮ ಎಚ್ಚರಿಕೆ ನೀಡಿದ್ದರೂ, ಅವರು ಗಮನಹರಿಸಲಿಲ್ಲ," ಎಂದು ಸಲುಂಕೆ ಹೇಳಿದ್ದಾರೆ.

 ಈ ಬಗ್ಗೆ ವಿ.ಕೆ. ಪೌಲ್‌ ಹೇಳಿದ್ದಿಷ್ಟು..

ಈ ಬಗ್ಗೆ ವಿ.ಕೆ. ಪೌಲ್‌ ಹೇಳಿದ್ದಿಷ್ಟು..

ಈ ವಿಚಾರದಲ್ಲಿ ರಾಯಿಟರ್ಸ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪೌಲ್‌, ''ಸಲುಂಕೆ ಜೊತೆ ಮಾತನಾಡಿರುವುದು ನಿಜ. ಆದರೆ ಎಚ್ಚರಿಕೆ ನೀಡಿರುವುದು ಅಲ್ಲ, ಸಲುಂಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಅಷ್ಟೇ,'' ಎಂದು ಹೇಳಿದ್ದಾರೆ. ಇನ್ನು ಸಲುಂಕೆ ಎಚ್ಚರಿಕೆಯನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪವನ್ನು ತಿರಸ್ಕರಿಸಿದ ಪೌಲ್‌, ಭಾರತದ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ) ಈ ರೂಪಾಂತರವನ್ನು ಹೆಚ್ಚು ನಿಕಟವಾಗಿ ಅಧ್ಯಯನ ಮಾಡಬೇಕೆಂದು ನಾನು ವಿನಂತಿಸಿದ್ದೇನೆ. ಹಾಗೆಯೇ ವೈರಸ್‌ ಬಗ್ಗೆ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇನೆ ಎಂದಿದ್ದಾರೆ. ಆದರೆ ಎನ್ಐವಿ ಅಂತಹ ಯಾವುದೇ ಅಧ್ಯಯನವನ್ನು ನಡೆಸಿದೆಯೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರ

 ಏಕಾಏಕಿ ಕೊರೊನಾ ಪ್ರಕರಣ ಏರಿಕೆ

ಏಕಾಏಕಿ ಕೊರೊನಾ ಪ್ರಕರಣ ಏರಿಕೆ

ಜನವರಿ ಅಂತ್ಯದಲ್ಲಿ, ಭಾರತದ ದೈನಂದಿನ ಕೊರೊನಾವೈರಸ್ ಸೋಂಕುಗಳ ಸಂಖ್ಯೆ ಸುಮಾರು 12,000 ಕ್ಕೆ ಇಳಿದಿದ್ದಾಗ, ಮೋದಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ವಿಜಯವನ್ನು ಘೋಷಿಸಿದರು. ಆದರೆ ದೇಶವು "ಕೊರೊನಾವೈರಸ್ ಅನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಮಾನವೀಯತೆಯನ್ನು ದೊಡ್ಡ ವಿಪತ್ತಿನಿಂದ ರಕ್ಷಿಸಲಾಗಿದೆ" ಎಂದು ಹೇಳಿದ್ದರು. 2.9 ಮಿಲಿಯನ್ ಜನರಿರುವ ಅಮರಾವತಿ ಜಿಲ್ಲೆಯಲ್ಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ಜನವರಿಯಲ್ಲಿ ಪ್ರತಿದಿನ ಡಜನ್‌ಗಟ್ಟಲೆ ಕೊರೊನಾ ಪ್ರಕರಣಗಳನ್ನು ಮಾತ್ರ ವರದಿ ಮಾಡಿದೆ. ಇದರಿಂದಾಗಿ ಎಲ್ಲರೂ ನಿರಾಳವಾಗಿದ್ದರು. ಆದರೆ ಜನವರಿ ಅಂತ್ಯದಲ್ಲಿ ಪ್ರಕರಣಗಳು ಏಕಾಏಕಿ ಏರಲು ಪ್ರಾರಂಭಿಸಿದೆ. ಈ ಮೂಲಕ ಅಧಿಕಾರಿಗಳಿಗೆ ಆತಂಕ ಉಂಟಾಗಿದೆ. ಫೆಬ್ರವರಿ 7 ರ ಹೊತ್ತಿಗೆ ಹೊಸ ಸೋಂಕುಗಳು ದಿನಕ್ಕೆ ಸುಮಾರು 200 ರಷ್ಟು ಪ್ರಕರಣಗಳು ದಾಖಲಾಗಿದೆ. ವಾರದ ನಂತರ ದಿನಕ್ಕೆ 430 ಕ್ಕೆ ತಲುಪಿದೆ. ಜಿಲ್ಲೆಯ ಗ್ರಾಮೀಣ ಒಳಭಾಗದಲ್ಲಿ ವೈರಸ್ ಹರಡಿದೆ.

 ತೀವ್ರ ಕೊರೊನಾ ಪ್ರಸರಣ

ತೀವ್ರ ಕೊರೊನಾ ಪ್ರಸರಣ

ಅಮರಾವತಿಯಲ್ಲಿ ಹೊಸ ರೂಪಾಂತರವು ತೀವ್ರ ಪ್ರಮಾಣದಲ್ಲಿ ಹರಡಿದೆ. ಈ ಹೊಸ ರೂಪಾಂತರದ ಬಗ್ಗೆ ಸಲೂಂಕೆ ಎಚ್ಚರಿಸಿದ್ದು, ''ಫೆಬ್ರವರಿ ಅಂತ್ಯದಲ್ಲಿ ಅಮರಾವತಿಗೆ ಪ್ರಯಾಣಿಸಿ ಸುಮಾರು 700 ಜನರ ಕೊರೊನಾ ಪರೀಕ್ಷೆ ನಡೆಸಿದ್ದೇನೆ. ಈ ಪೈಕಿ ಅರ್ಧದಷ್ಟು ಜನರಿಗೆ ಪಾಸಿಟಿವ್‌ ಆಗಿದೆ,'' ಎಂದು ತಿಳಿಸಿದ್ದಾರೆ. "ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ಮತ್ತು ಇತರ ಕೆಲವು ರಾಜ್ಯಗಳಲ್ಲಿ ರೂಪಾಂತರಿತ ವೈರಸ್ ತಳಿಗಳಾದ ಎನ್ 440 ಕೆ ಮತ್ತು ಕೋವಿಡ್‌ನ 484 ಕ್ಯೂ ನಡುವೆ ನೇರ ಸಂಬಂಧವಿಲ್ಲ," ಎಂದು ಭಾರತದ ಆರೋಗ್ಯ ಸಚಿವಾಲಯ ಫೆಬ್ರವರಿ 23 ರಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಆ ಸಮಯದಲ್ಲಿ ಅಧಿಕಾರಿಗಳು ಹೊಂದಿದ್ದ ದತ್ತಾಂಶವನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗಿದೆ ಎಂದು ಮೋದಿಯ ಕೊರೊನಾವೈರಸ್‌ ಸಲಹೆಗಾರ ಪೌಲ್‌ ಹೇಳಿದ್ದಾರೆ. "ಏನೋ ಗುರುತಿಸಲಾಗಿದೆ ಎಂದು ನಮಗೆ ತಿಳಿದಿತ್ತು. ಆದರೆ ಆ ಸಮಯದಲ್ಲಿ ಅದರ ಮಹತ್ವ ನಮಗೆ ತಿಳಿದಿರಲಿಲ್ಲ. ರೂಪಾಂತರಗಳ ನಿಜವಾದ ಪರಿಣಾಮವು ಸಮಯ ಬಂದಾಗ ಅರಿವಿಗೆ ಬಂದಿದೆ," ಎಂದು ಪೌಲ್‌ ಹೇಳಿದ್ದಾರೆ.

ದೇಶದಲ್ಲಿ ಹಠಾತ್‌ ಕೊರೊನಾ ಸಾವು ಸಂಖ್ಯೆ ಏರಿಕೆಗೆ ಕಾರಣವೇನು?ದೇಶದಲ್ಲಿ ಹಠಾತ್‌ ಕೊರೊನಾ ಸಾವು ಸಂಖ್ಯೆ ಏರಿಕೆಗೆ ಕಾರಣವೇನು?

 ಸರ್ಕಾರದ ಪ್ರಮುಖ ತಪ್ಪುಗಳು

ಸರ್ಕಾರದ ಪ್ರಮುಖ ತಪ್ಪುಗಳು

ಸಲುಂಕೆ ಪ್ರಕಾರ, ರೂಪಾಂತರದ ಬಗ್ಗೆ ಚರ್ಚೆ ನಡೆಯುತ್ತಿರುವ ಹಾಗೂ ರೂಪಾಂತರದ ಪರಿಣಾಮ ದೇಶದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಎಚ್ಚರಿಕೆ ನೀಡಿರುವ ನಡುವೆಯೂ ಸರ್ಕಾರ ಚುನಾವಣಾ ರ್‍ಯಾಲಿಗಳು, ಧಾರ್ಮಿಕ ಉತ್ಸವಗಳು ಮತ್ತು ಇತರ ಸಾಮೂಹಿಕ ಸಭೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಸೋಂಕು ಹರಡಲು ಕಾರಣವಾಗಿದೆ. ವೈರಸ್ ಹರಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಹೊಸ ರೂಪಾಂತರದ ಹೊರಹೊಮ್ಮುವಿಕೆಗೆ ಆರಂಭದಲ್ಲೇ ತುರ್ತುಸ್ಥಿತಿಯೊಂದಿಗೆ ಚಿಕಿತ್ಸೆ ನೀಡಲಾಗಿಲ್ಲ ಎಂದು ಸಲುಂಕೆ ಆರೋಪಿಸಿದ್ದಾರೆ. "ಮಹಾರಾಷ್ಟ್ರದಲ್ಲಿ ಏನಾಯಿತು ಎಂಬುದು ಒಂದು ನೈಸರ್ಗಿಕ ವಿದ್ಯಮಾನವಾಗಿದೆ. ಇದನ್ನು ಯುದ್ಧದ ಹಾದಿಯಲ್ಲಿ ಪರಿಹರಿಸಬೇಕಾಗಿತ್ತು, ಇದು ಸಂಪೂರ್ಣ ತುರ್ತು ಪರಿಸ್ಥಿತಿ," ಎಂದು ಅಭಿಪ್ರಾಯಿಸಿದ್ದಾರೆ. "ಆದರೆ ಕೇಂದ್ರ ಸರ್ಕಾರ ಇದನ್ನು ನಿರ್ಲಕ್ಷಿಸಿದೆ. ಸಂಪೂರ್ಣ ಗಮನವನ್ನು ಚುನಾವಣೆಗಳ ಮೇಲೆ ಕೇಂದ್ರೀಕೃತ ಮಾಡಿದೆ," ಎಂದು ದೂರಿದ್ದಾರೆ ಸಲುಂಕೆ. "ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ರಾಜ್ಯ ಚುನಾವಣೆಗಳ ಸಂದರ್ಭ ಮೋದಿಯವರ ಪಕ್ಷ ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಭಾರೀ ಜನಸಂಖ್ಯೆ ಸೇರಿ ರ್‍ಯಾಲಿ ನಡೆಸಿದ್ದಾರೆ," ಎಂದು ಕೂಡಾ ಹೇಳಿದ್ದಾರೆ.

"ಮಾರ್ಚ್ ಮತ್ತು ಏಪ್ರಿಲ್ ನಡುವೆ, ಕೇಂದ್ರ ಸರ್ಕಾರವು ಕುಂಭಮೇಳ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ಗಂಗೆಯಲ್ಲಿ ಪವಿತ್ರ ಸ್ನಾನದಲ್ಲಿ ದೇಶದಾದ್ಯಂತದ ಲಕ್ಷಾಂತರ ಜನರು ಭಾಗಿಯಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಮಾಹಿತಿ ಪ್ರಕಾರ ಈ ಪೈಕಿ ಹಲವಾರು ಮಂದಿ ಕೊರೊನಾ ವೈರಸ್‌ ಹೊತ್ತು ಮನೆಗೆ ಹಿಂದಿರುಗಿದ್ದಾರೆ. ಅಷ್ಟೇ ಅಲ್ಲದೇ ಹಲವಾರು ಮಂದಿ ವಿದೇಶ ಪ್ರಯಾಣ ಮಾಡುವ ಮೂಲಕ ವಿದೇಶಕ್ಕೂ ಈ ರೂಪಾಂತರ ಹೊತ್ತೊಯ್ದಿದ್ದಾರೆ. ಇದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ," ಎಂದು ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Health experts say India missed early alarm of deadly coronavirus variant spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X