ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಬೋಗಿಬಿಲ್ ಸೇತುವೆ ವೀಕ್ಷಿಸಿದ ಎಚ್.ಡಿ.ದೇವೇಗೌಡ

|
Google Oneindia Kannada News

ನವದೆಹಲಿ, ಫೆಬ್ರವರಿ 19 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬೋಗಿಬಿಲ್ ಸೇತುವೆಯನ್ನು ವೀಕ್ಷಣೆ ಮಾಡಿದರು. 2018ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನದಲ್ಲಿ ಬೋಗಿಬಿಲ್ ಸೇತುವೆಯನ್ನು ಉದ್ಘಾಟನೆ ಮಾಡಿದ್ದರು.

ಮಂಗಳವಾರ ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಅವರ ಜೊತೆ ಎಚ್.ಡಿ.ದೇವೇಗೌಡರು ಬೋಗಿಬಿಲ್ ಸೇತುವೆಯನ್ನು ವೀಕ್ಷಣೆ ಮಾಡಿದರು. 1997ರಲ್ಲಿ ಶಂಕುಸ್ಥಾಪನೆಯಾಗಿದ್ದ ಸೇತುವೆ ಕಾಮಗಾರಿ 2018ರಲ್ಲಿ ಪೂರ್ಣಗೊಂಡಿತ್ತು.

ಬೋಗಿಬಿಲ್ ಸೇತುವೆ ಉದ್ಘಾಟನೆ : ಮೋದಿ ವಿರುದ್ಧ ಗೌಡರ ಗುಡುಗುಬೋಗಿಬಿಲ್ ಸೇತುವೆ ಉದ್ಘಾಟನೆ : ಮೋದಿ ವಿರುದ್ಧ ಗೌಡರ ಗುಡುಗು

ದೇಶದ ಅತಿ ದೊಡ್ಡ ಸೇತುವೆ ಎಂಬ ಹೆಗ್ಗಳಿಕೆ ಬೋಗಿಬಿಲ್ ಸೇತುವೆಗಿದೆ. ಬೋಗಿಬಿಲ್ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಎಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಿರಲಿಲ್ಲ. ಆದ್ದರಿಂದ ಅವರು ಕಾರ್ಯಕ್ರಮಕ್ಕೂ ಹೋಗಿರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಸೇತುವೆಯ ವೀಕ್ಷಣೆಯನ್ನು ಮಾಡಿದರು.

ಬೋಗಿಬಿಲ್ ಸೇತುವೆ ಲೋಕಾರ್ಪಣೆ ಮಾಡಿದ ಮೋದಿಬೋಗಿಬಿಲ್ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

'ತಾನು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ. ಯಾರೊಬ್ಬರು ಅಸ್ಸಾಂನಲ್ಲಿ ನಡೆಯುತ್ತಿರುವ ಬೋಗಿಬಿಲ್ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ' ಎಂದು ಎಚ್.ಡಿ.ದೇವೇಗೌಡರು ಅಸಮಾಧಾನ ಹೊರಹಾಕಿದ್ದರು...

ದೇಶದ ಅತಿ ದೊಡ್ಡ ಸೇತುವೆ ವಿಶೇಷತೆ ಏನು?ದೇಶದ ಅತಿ ದೊಡ್ಡ ಸೇತುವೆ ವಿಶೇಷತೆ ಏನು?

ದೇವೇಗೌಡರಿಂದ ಶಂಕುಸ್ಥಾಪನೆ

ದೇವೇಗೌಡರಿಂದ ಶಂಕುಸ್ಥಾಪನೆ

ಅಸ್ಸಾಂನಲ್ಲಿ ಬೋಗಿಬಿಲ್ ಸೇತುವೆ ಕಾಮಗಾರಿಗೆ 1997ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಶಂಕುಸ್ಥಾಪನೆ ಮಾಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಯೋಜನೆಯ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. 2018ರ ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು.

4.9 ಕಿ.ಮೀ. ಉದ್ದದ ಸೇತುವೆ

4.9 ಕಿ.ಮೀ. ಉದ್ದದ ಸೇತುವೆ

ಅಸ್ಸಾಂ ರಾಜ್ಯದ ದಿಬ್ರೂಗಢ ಜಿಲ್ಲೆಯ ಬೋಗಿಬಿಲ್ ಮತ್ತು ಅರುಣಾಚಲ ಪ್ರದೇಶದ ಧೇಮಾಜಿ ಜಿಲ್ಲೆಯ ಸಿಲಾಪತ್ತರ್ ನಡುವೆ ಹರಿಯವು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಇದರ ವೆಚ್ಚ ಸುಮಾರು 5,900 ಕೋಟಿ ರೂ.ಗಳು.

ರಸ್ತೆ ಮತ್ತು ರೈಲು ಮಾರ್ಗ

ರಸ್ತೆ ಮತ್ತು ರೈಲು ಮಾರ್ಗ

ಬೋಗಿಬಿಲ್ ಸೇತುವೆಯ ವಿಶೇಷವೆಂದರೆ ರಸ್ತೆ ಮತ್ತು ರೈಲು ಮಾರ್ಗಗಳನ್ನು ಇದು ಹೊಂದಿದೆ. ಎರಡು ಹಂತದ ಸೇತುವೆಯ ಮೇಲ್ಘಾಗದಲ್ಲಿ ತ್ರಿಪಥದ ರಸ್ತೆ ಮಾರ್ಗವನ್ನು ನಿರ್ಮಿಸಲಾಗಿದೆ. ಕೆಳಭಾಗದಲ್ಲಿ ದ್ವಿಪಥದ ರೈಲು ಮಾರ್ಗವಿದೆ.

ಪ್ರಯಾಣದ ಅವಧಿ 10 ತಾಸು ಕಡಿತ

ಪ್ರಯಾಣದ ಅವಧಿ 10 ತಾಸು ಕಡಿತ

ಈ ಸೇತುವೆ ನಿರ್ಮಾಣ ಮಾಡಿರುವುದರಿಂದ ಸುಮಾರು 10 ತಾಸುಗಳ ಪ್ರಯಾಣದ ಅವಧಿ ಕಡಿತಗೊಂಡಿದೆ. ಅಸ್ಸಾಂನ ತೀನ್ ಸುಕಿಯಾ ಮತ್ತು ಅರುಣಾಚಲ ಪ್ರದೇಶದ ನಾಹರ ಲಾಗುನ್ ಪಟ್ಟಣದ ನಡುವೆ ಸಂಚರಿಸುವ ಅವಧಿ ಕಡಿತಗೊಂಡಿದೆ. ದಿಬ್ರೂಗಢ ಮತ್ತು ಧೇಮಾಜಿ ನಡುವಿನ 500 ಕಿ.ಮೀ. ಪ್ರಯಾಣದ ಅವಧಿ 100 ಕಿ.ಮೀ.ಗೆ ಇಳಿಕೆಯಾಗಿದೆ.

English summary
Former Prime Minister of India H.D.Deve Gowda visits Bogibeel bridge in Assam. He laid foundation stone for the bridge project. On Dec 25, 2018 Prime Minister Narendra Modi inaugurated the bridge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X